Day: September 20, 2021

ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಿಂಗಳ ಎರಡು ಬಾರಿ ವಿಕಲಚೇತನರ ನ್ಯೂನ್ಯತಾ ಶಿಬಿರ ನಡೆಸುವುದರ ಬಗ್ಗೆ ಮನವಿ

ಕಡಬ: ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತೀ ತಿಂಗಳು 2 ಬಾರಿ ವಿಕಲಚೇತನರ ನ್ಯೂನತೆ ಗುರುತಿಸಲು ಶಾಶ್ವತ ವೈದ್ಯಕೀಯ ಶಿಬಿರ ನಡೆಸಬೇಕೆಂದು ಒತ್ತಾಯಿಸಿ ಜಿಲ್ಲಾ ಅಂಗವಿಕಲರ ಕಲ್ಯಾಣ , ವಿಕಲಚೇತನರ ಹಾಗೂ ಹಿರಿಯ ನಾಗರಿಕರಸಬಲೀಕರಣ ಇಲಾಖೆಗೆ ವಿವಿಧೋದ್ದೇಶ ಪುನರ್ವಸತಿ, ನಗರ ಪುನರ್ವಸತಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಂದ ಮನವಿ ಸಲ್ಲಿಸಲಾಯಿತು. ಕಡಬ ತಾಲೂಕಿಗೆ ಒಳಪಟ್ಟ 21 ಗ್ರಾಮಗಳಿಗೆ ಕಡಬ ತಾಲೂಕಿನ ಸಮುದಾಯ ಆರೋಗ್ಯಕೇಂದ್ರ ಕೇಂದ್ರೀಕೃತವಾಗಿದ್ದು ಈಗಾಗಲೇ ಕೊರಾನಾ ಅಲೆಯಿಂದ ವಿಕಲಚೆತನರ ಜೀವನ ದೈಹಿಕವಾಗಿ ಮಾನಸಿಕವಾಗಿ ಅಸ್ತವ್ಯಸ್ತವಾಗಿದೆ. ಪುತ್ತೂರು ಆರೋಗ್ಯ …

ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಿಂಗಳ ಎರಡು ಬಾರಿ ವಿಕಲಚೇತನರ ನ್ಯೂನ್ಯತಾ ಶಿಬಿರ ನಡೆಸುವುದರ ಬಗ್ಗೆ ಮನವಿ Read More »

ಕಡಬ ವಾಹನ ಅಡ್ಡಗಟ್ಟಿ ದೌರ್ಜನ್ಯ ಪ್ರಕರಣ; ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮಕ್ಕೆ ಒತ್ತಾಯ

ಕಡಬ: ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ವಾಹನವನ್ನು ಕಡಬದ ಮರ್ದಾಳ ಬಳಿ ಮಾರ್ಗ ಮಧ್ಯೆ ತಡೆದು ನಿಲ್ಲಿಸಿ ಕೆಲವು ಅಪರಿಚಿತ ವ್ಯಕ್ತಿಗಳು ದೌರ್ಜನ್ಯ ನಡೆಸಿರುವರೆಂದು ಆರೋಪಿಸಿರುವ ಗುತ್ತಿಗಾರು ನಿವಾಸಿ ದೈವ ನರ್ತಕ ಧರ್ಮಪಾಲ ಅಡ್ಢಣಪಾರೆ ಅವರು ಆ ರೀತಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಸಂಬಂಧಪಟ್ಟವರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಅವರು ಸೋಮವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಸೆ.14 ರಂದು ನಮ್ಮ ಮನೆಯ ದೈವಗಳ ಕಾರ್ಯಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿಗಳನ್ನು ಪೂರೈಸುವ ಸಲುವಾಗಿ …

ಕಡಬ ವಾಹನ ಅಡ್ಡಗಟ್ಟಿ ದೌರ್ಜನ್ಯ ಪ್ರಕರಣ; ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮಕ್ಕೆ ಒತ್ತಾಯ Read More »

ಮಂಗಳೂರು: ಡಯಟ್ ಗೆ ನುಗ್ಗಿ ಮೂವರು ಮಹಿಳೆಯರಿಗೆ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ | ಆರೋಪಿ ಪೊಲೀಸ್ ವಶಕ್ಕೆ

ಮಂಗಳೂರು : ಕೊಡಿಯಾಲ್‌ ಬೈಲ್‌ನಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಕಚೇರಿಗೆ ನುಗ್ಗಿದ ಅಪರಿಚಿತನೊಬ್ಬ ಅಲ್ಲಿದ್ದ ಮೂವರು ಸಿಬ್ಬಂದಿಗೆ ಮಚ್ಚಿನಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಪ್ರಕರಣದ ಆರೋಪಿ ಕುಂದಾಪುರದ ನವೀನ್ ಎಂಬಾತನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಈತ ಕುಂದಾಪುರ ಕೋರ್ಟ್‌ನಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ. ಡಯಟ್ ‌ನಲ್ಲಿ ಸ್ಟೆನೋ ಗ್ರಾಫರ್ ಆಗಿರುವ ನಿರ್ಮಲಾ (43), ಪ್ರಥಮ ದರ್ಜೆ ಸಹಾಯಕಿ ರೀನಾ ರಾಯ್ (45), ಅಟೆಂಡರ್ ಗುಣವತಿ …

ಮಂಗಳೂರು: ಡಯಟ್ ಗೆ ನುಗ್ಗಿ ಮೂವರು ಮಹಿಳೆಯರಿಗೆ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ | ಆರೋಪಿ ಪೊಲೀಸ್ ವಶಕ್ಕೆ Read More »

ಬೆಳ್ತಂಗಡಿಯಲ್ಲಿ ನಿಲ್ಲದ ಗಾಂಜಾ ಘಾಟು | ಆರೋಪಿ ಸಹಿತ 70 ಸಾವಿರ ಮೌಲ್ಯದ ಗಾಂಜಾ ವಶಕ್ಕೆ

ಬೆಳ್ತಂಗಡಿ : ಕಳಿಯ ಗ್ರಾಮದ ಪರಪ್ಪು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ ಘಟನೆ ಸೆ.20 ರಂದು ನಡೆದಿದೆ. ಇಳಂತಿಲ ಗ್ರಾಮದ ನೇಜಿಕಾರು ಅಂಬೊಟ್ಟು ನಿವಾಸಿ ಮಹಮ್ಮದ್ ಶಾಫಿ ಯಾನೇ ನೇಜಿಕಾರ್ ಶಾಫಿ(29.ವ) ಎಂಬವರೇ ಬಂಧಿತ ಆರೋಪಿಯಾಗಿದ್ದಾರೆ. ಸೆ.20 ರಂದು ಬೆಳಿಗ್ಗೆ ಬೆಳ್ತಂಗಡಿ ಠಾಣಾ ಪೊಲೀಸ್ ಉಪ ನಿರೀಕ್ಷಕ ನಂದ ಕುಮಾರ್ ಮತ್ತು ಸಿಬ್ಬಂದಿಗಳು ಕಳಿಯ ಗ್ರಾಮದ ಪರಪ್ಪು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಸಂದರ್ಭದಲ್ಲಿ ಉಪ್ಪಿನಂಗಡಿ …

ಬೆಳ್ತಂಗಡಿಯಲ್ಲಿ ನಿಲ್ಲದ ಗಾಂಜಾ ಘಾಟು | ಆರೋಪಿ ಸಹಿತ 70 ಸಾವಿರ ಮೌಲ್ಯದ ಗಾಂಜಾ ವಶಕ್ಕೆ Read More »

ಕಡಬ | ತಾಮ್ರದ ಪಾತ್ರೆಗಳನ್ನು ಹೊಳಪು ಮಾಡುವ ನೆಪದಲ್ಲಿ ವಂಚನೆ | ಅಪರಿಚಿತ ವ್ಯಕ್ತಿಯ ಸುಳಿವು ನೀಡಲು ಕಡಬ ಎಸ್ಐ ಸೂಚನೆ

ತಾಮ್ರದ ಪಾತ್ರೆಯನ್ನು ಹೊಳಪು ಮಾಡಿ ಕೊಡುತ್ತೇನೆಂದು ಸಾರ್ವಜನಿಕರನ್ನು ವಂಚಿಸುತ್ತಿರುವ ಘಟನೆ ಕಡಬದಲ್ಲಿ ವರದಿಯಾಗಿದೆ. ಅಪರಿಚಿತ ವ್ಯಕ್ತಿಯೋರ್ವ ಕೋಡಿಂಬಾಳ ಪರಿಸರದಲ್ಲಿ ತಾಮ್ರದ ಪಾತ್ರೆಗಳನ್ನು ಹೊಳಪು ಮಾಡಿಕೊಡುತ್ತೇನೆಂದು ಮನೆಮನೆಗೆ ತೆರಳುತ್ತಿರುವ ಮಾಹಿತಿ ಬಂದಿದ್ದು, ಸದ್ರಿ ವ್ಯಕ್ತಿ ಯಾರಿಗಾದರೂ ಕಾಣ ಸಿಕ್ಕಿದಲ್ಲಿ ಕೂಡಲೇ ಕಡಬ ಠಾಣೆಗೆ ಮಾಹಿತಿ ನೀಡುವಂತೆ ಎಸ್ಐ ರುಕ್ಕನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನೆ ತನ್ನ ಮರಿಯಾನೆಯನ್ನು ಎಬ್ಬಿಸುವ ಪಾಡಂತೂ ಸಾಕೋ ಸಾಕು ಎಂಬಂತಿದೆ !! ಆದ್ರೆ ಮರಿಯಾನೆ ಮಾತ್ರ ‘ಇರಮ್ಮಾ ಇನ್ನೂ ಸ್ವಲ್ಪ ಮಲಗ್ತೀನಿ’ ಅನ್ನೋ ರೀತಿ ಇದೆ ತಾಯಿ-ಮಗುವಿನ ಸಂಭಾಷಣೆ

ಮನುಷ್ಯರಂತೆಯೇ ಕುಟುಂಬ ಜೀವನ ಮಾಡುವ ಪ್ರಾಣಿ ಎಂದರೆ ಆನೆ. ಸಾಮಾನ್ಯವಾಗಿ ಆನೆಗಳು ತಮ್ಮದೇ ಆದ ಸಾಮಾಜಿಕ ನಿಯಮದಡಿ ಬದುಕುತ್ತವೆ. ಮನುಷ್ಯರಂತೆಯೇ ಗಂಡು ಮತ್ತು ಹೆಣ್ಣಾನೆಗಳ ಸಾಮಾಜಿಕ ಜೀವನ ಬೇರೆ ಬೇರೆಯಾಗಿರುತ್ತದೆ. ಹೆಣ್ಣು ಆನೆಗಳು ತಮ್ಮ ಜೀವನವನ್ನು ಸಂಪೂರ್ಣವಾಗಿ ಕುಟುಂಬ ವ್ಯವಸ್ಥೆಯಲ್ಲಿಯೇ ಕಳೆಯುತ್ತವೆ. ಆನೆಗಳ ಪ್ರಪಂಚದಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯಿದೆ. ಅದರಲ್ಲೂ ತಾಯಿ ಹಾಗೂ ಮರಿಯಾನೆಯ ಸಂಬಂಧ ಅತ್ಯಂತ ಮಹತ್ವದ್ದಾಗಿದೆ. ಇದಕ್ಕೆ ನಿದರ್ಶನವಾಗಬಲ್ಲವು ವಿಡಿಯೋ ಒಂದು ಈಗ ಎಲ್ಲೆಡೆ ಹರಿದಾಡುತ್ತಿದೆ. ತಾಯಿ ಆನೆ ತನ್ನ ಮರಿಯನ್ನು ನಿದ್ದೆಯಿಂದ …

ಆನೆ ತನ್ನ ಮರಿಯಾನೆಯನ್ನು ಎಬ್ಬಿಸುವ ಪಾಡಂತೂ ಸಾಕೋ ಸಾಕು ಎಂಬಂತಿದೆ !! ಆದ್ರೆ ಮರಿಯಾನೆ ಮಾತ್ರ ‘ಇರಮ್ಮಾ ಇನ್ನೂ ಸ್ವಲ್ಪ ಮಲಗ್ತೀನಿ’ ಅನ್ನೋ ರೀತಿ ಇದೆ ತಾಯಿ-ಮಗುವಿನ ಸಂಭಾಷಣೆ Read More »

ಕೃಷಿ ಪುನರುತ್ಥಾನಕ್ಕೆ ಮೋದಿ ಸಂಕಲ್ಪ,ತೆಂಗಿನ ಮೌಲ್ಯ ವರ್ಧನೆಗೆ ಪೂರಕ ಕ್ರಮ -ಚಾರ್ವಾಕದಲ್ಲಿ ಹುಟ್ಟೂರ ಸನ್ಮಾನ ಸ್ವೀಕರಿಸಿದ ಕೇಂದ್ರ ಕೃಷಿಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ

ಕಾಣಿಯೂರು : ದೇಶದ ಶೇ 80ರಷ್ಟು ರೈತರು ಅತ್ಯಂತ ಸಣ್ಣ ಹಿಡುವಳಿಗಳನ್ನು ಹೊಂದಿದ್ದು, ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೃಷಿ ಪುನರುತ್ಥಾನಕ್ಕೆ ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದು, ಸಣ್ಣ ರೈತರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಸೆ 20ರಂದು ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬೆಳೆಕಾಳು …

ಕೃಷಿ ಪುನರುತ್ಥಾನಕ್ಕೆ ಮೋದಿ ಸಂಕಲ್ಪ,ತೆಂಗಿನ ಮೌಲ್ಯ ವರ್ಧನೆಗೆ ಪೂರಕ ಕ್ರಮ -ಚಾರ್ವಾಕದಲ್ಲಿ ಹುಟ್ಟೂರ ಸನ್ಮಾನ ಸ್ವೀಕರಿಸಿದ ಕೇಂದ್ರ ಕೃಷಿಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ Read More »

ನಿಮಗೂ ನಿಮ್ಮ ಹೆಂಡತಿಯನ್ನು ಲೇ…ಬಾರೆ… ಹೋಗೇ.. ಎಂದು ಕರೆಯುವ ಚಾಳಿ ಇದೆಯೇ ??? | ಇನ್ನು ಮುಂದೆ ಹೀಗೆಲ್ಲ ಹೆಂಡತಿಯನ್ನು ಏಕವಚನದಿಂದ ಕರೆದರೆ ಜೈಲು ಸೇರಬೇಕಾದೀತು, ಹುಷಾರ್ ಗಂಡಂದಿರೇ!!!

ಇತ್ತೀಚಿಗೆ ಅಂತೂ ಎತ್ತ ನೋಡಿದರು ಅತ್ಯಾಚಾರ, ಕೊಲೆ ಎಂಬ ಮಾತುಗಳೇ ಹೆಚ್ಚಾಗಿದ್ದು. ದೇವತೆಗೆ ಸಮವಾದ ಹೆಣ್ಣಿಗೆ ಬೆಲೆಯೇ ಇಲ್ಲದಂತೆ ಆಗಿದೆ. ಹೆಣ್ಣನ್ನು ಹೆಣ್ಣಂತೆ ಕಾಣಬೇಕೇ ಹೊರತು ಬೀದಿ ನಾಯಿಯಂತೆ ಅಲ್ಲ. ಗಂಡಸು ಎಂಬ ಪದಕ್ಕೆ ಅರ್ಥವೇ ಇಲ್ಲದಂತೆ ಮಾಡುತ್ತಿದ್ದಾರೆ ಕೆಲವು ಮೂರ್ಖ ಕಾಮುಕರು. ಇಂತಹ ಎಲ್ಲಾ ಘಟನೆಗೆ ಪರಿಹಾರವಂತೆ ಜಾರಿ ಬರ್ತಾ ಇದೆ ಹಲವು ಕಾನೂನುಗಳು. ಇದು ಗಂಡಸರಿಗೆ, ಅದರಲ್ಲೂ ಮದುವೆಯಾದ ಗಂಡಸರ ಪಾಲಿಗೆ ಅತಿ ದೊಡ್ಡ ಬ್ಯಾಡ್ ನ್ಯೂಸ್ ಯೇ ಆಗಿದೆ. ಆದರೆ ಅವರು ಮಾಡುವ …

ನಿಮಗೂ ನಿಮ್ಮ ಹೆಂಡತಿಯನ್ನು ಲೇ…ಬಾರೆ… ಹೋಗೇ.. ಎಂದು ಕರೆಯುವ ಚಾಳಿ ಇದೆಯೇ ??? | ಇನ್ನು ಮುಂದೆ ಹೀಗೆಲ್ಲ ಹೆಂಡತಿಯನ್ನು ಏಕವಚನದಿಂದ ಕರೆದರೆ ಜೈಲು ಸೇರಬೇಕಾದೀತು, ಹುಷಾರ್ ಗಂಡಂದಿರೇ!!! Read More »

ಬೆಂಗಳೂರಿನ ಘಟನೆ ಮಾಸುವ ಮುನ್ನವೇ ನಡೆಯಿತು ದಾವಣಗೆರೆಯಲ್ಲೊಂದು ಪ್ರಕರಣ!! | ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

ದಾವಣಗೆರೆ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ದಾವಣಗೆರೆಯ ಭರತ್ ಕಾಲೋನಿಯ ಶೇಖರಪ್ಪ ಬಿ ಬ್ಲಾಕ್ ನಲ್ಲಿ 35 ವರ್ಷದ ಕೃಷ್ಣಾ ನಾಯ್ಕ್, ಪತ್ನಿ ಸುಮಾ ಮತ್ತು ಆರು ವರ್ಷದ ಮಗು ಧ್ರುವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದು, ಅವರ ಅಕ್ರಂದನ ಮುಗಿಲು ಮುಟ್ಟಿದೆ.ಮಗು ಮತ್ತು ತನ್ನ ಪತ್ನಿಗೆ ವಿಷ ಕುಡಿಸಿ ಬಳಿಕ ಕೃಷ್ಣಾ …

ಬೆಂಗಳೂರಿನ ಘಟನೆ ಮಾಸುವ ಮುನ್ನವೇ ನಡೆಯಿತು ದಾವಣಗೆರೆಯಲ್ಲೊಂದು ಪ್ರಕರಣ!! | ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು Read More »

ಚಾರ್ವಾಕದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಹುಟ್ಟೂರ ಸನ್ಮಾನ

ಕಾಣಿಯೂರು: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಸೆ 20ರಂದು ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹುಟ್ಟೂರ ಸನ್ಮಾನ ನಡೆಯಿತು. ಬೆಳಿಗ್ಗೆ ದೇವಾಲಯದಲ್ಲಿ ವೇದಮೂರ್ತಿ ನೀಲೇಶ್ವರ ಪದ್ಮನಾಭ ಉಚ್ಚಿಲತ್ತಾಯ ತಂತ್ರಿಯವರ ನೇತೃತ್ವದಲ್ಲಿ ಶತರುದ್ರ ಪಾರಾಯಣ ಮತ್ತು 108 ಸೀಯಾಳಾಭಿಷೇಕ ನಡೆಯಿತು. ಮುದುವದಿಂದ ಸ್ವಾಗತ ಮೆರವಣಿಗೆ ನಡೆದು, ಬಳಿಕ ನಡೆಯುವ ಸನ್ಮಾನ ಸಮಾರಂಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹುಟ್ಟೂರ ಸನ್ಮಾನ ಸ್ವೀಕರಿಸಿದರು. ವೇ. ಮೂ. ನೀಲೇಶ್ವರ ಪದ್ಮನಾಭ …

ಚಾರ್ವಾಕದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಹುಟ್ಟೂರ ಸನ್ಮಾನ Read More »

error: Content is protected !!
Scroll to Top