ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಿಂಗಳ ಎರಡು ಬಾರಿ ವಿಕಲಚೇತನರ ನ್ಯೂನ್ಯತಾ ಶಿಬಿರ ನಡೆಸುವುದರ ಬಗ್ಗೆ ಮನವಿ

ಕಡಬ: ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತೀ ತಿಂಗಳು 2 ಬಾರಿ ವಿಕಲಚೇತನರ ನ್ಯೂನತೆ ಗುರುತಿಸಲು ಶಾಶ್ವತ ವೈದ್ಯಕೀಯ ಶಿಬಿರ ನಡೆಸಬೇಕೆಂದು ಒತ್ತಾಯಿಸಿ ಜಿಲ್ಲಾ ಅಂಗವಿಕಲರ ಕಲ್ಯಾಣ , ವಿಕಲಚೇತನರ ಹಾಗೂ ಹಿರಿಯ ನಾಗರಿಕರಸಬಲೀಕರಣ ಇಲಾಖೆಗೆ ವಿವಿಧೋದ್ದೇಶ ಪುನರ್ವಸತಿ, ನಗರ ಪುನರ್ವಸತಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಂದ ಮನವಿ ಸಲ್ಲಿಸಲಾಯಿತು.

ಕಡಬ ತಾಲೂಕಿಗೆ ಒಳಪಟ್ಟ 21 ಗ್ರಾಮಗಳಿಗೆ ಕಡಬ ತಾಲೂಕಿನ ಸಮುದಾಯ ಆರೋಗ್ಯಕೇಂದ್ರ ಕೇಂದ್ರೀಕೃತವಾಗಿದ್ದು ಈಗಾಗಲೇ ಕೊರಾನಾ ಅಲೆಯಿಂದ ವಿಕಲಚೆತನರ ಜೀವನ ದೈಹಿಕವಾಗಿ ಮಾನಸಿಕವಾಗಿ ಅಸ್ತವ್ಯಸ್ತವಾಗಿದೆ. ಪುತ್ತೂರು ಆರೋಗ್ಯ ಕೇಂದ್ರದಲ್ಲಿ ವೈದಕೀಯ ವಿಕಲತೆಗುರುತಿಸುವ ಶಿಬಿರವನ್ನು ತಿಂಗಳಲ್ಲಿ 2 ಅಥವಾ 3 ಬಾರಿ ನಡೆಯುತ್ತಿದ್ದು ಕೊರಾನಾ ಮಹಾಮಾರಿಯಿಂದ ಕೇವಲ 10 ರಿಂದ 20ಮಂದಿ ವಿಕಲಚೇತನರಿಗೆ ಮಾತ್ರ ಅರೋಗ್ಯ ದಾಖಲೆಯನ್ನು ನೀಡಲು ಸಾಧ್ಯವಾಗುತ್ತಿದೆ. ಈ ಕಾರಣದಿಂದ ದೂರದ ಪುತ್ತೂರು ಆರೋಗ್ಯ ಕೇಂದ್ರಕ್ಕೆ ವಿಕಲಚೆತನರನ್ನು ಕರೆದುಕೊಂಡು ಹೊಗಲು ಸಾಧ್ಯವಾಗುತ್ತಿಲ್ಲ. ೨2014 ಇಸವಿಯ ಹಿಂದಿನ ಸಾಲಿನ ಹಳೆಯ ವಿಕಲಚೇತನರ ಗುರುತಿನಚೀಟಿ ನವೀಕರಣ ಮಾಡಲೇ ಬೇಕಾಗಿದ್ದು ಈ ಹಿನ್ನೆಲೆಯಲ್ಲಿ ಕಡಬದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಾಶ್ವತವಾಗಿ ಕನಿಷ್ಠ ತಿಂಗಳಲ್ಲಿ 2 ಬಾರಿ ವೈದಾಧಿಕಾರಿಯವರು ಮಾನಸಿಕ ಮತ್ತು ಬುದ್ಧಿಮಾಂದ್ಯತೆ, ಕಣ್ಣಿನ ನ್ಯೂನತೆ, ವಾಕ್‌ಮತ್ತು ಶ್ರವಣದೋಷ, ಎಲಬು (ದೈಹಿಕ), ನರರೋಗತಜ್ಞರ , ಮಕ್ಕಳ ತಜ್ಞರುವಿಕಲಚೇತನರ ನ್ಯೂನತೆ ಗುರುತಿಸಿ ಶಿಬಿರದಲ್ಲಿ ಸಹಕರಿಸುವಂತೆ ಸಂಬಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ. ಮನವಿಯನ್ನು ಜಿಲ್ಲಾ ಮಹಿಳಾ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೂ ನೀಡಲಾಗಿದೆ.

ಮನವಿ ನೀಡುವ ಸಂದರ್ಭ ಕಡಬ ತಾಲೂಕು ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತತೆ ಅಕ್ಷತಾ ಎ , ಬಿಳಿನೆಲೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ವಿಜಯ್ ಕುಮಾರ್ , ಐತ್ತೂರು ಪಂಚಾಯಿತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸಂತೋಷ ಪಿ ಇದ್ದರು.

Leave A Reply

Your email address will not be published.