Day: September 16, 2021

ಎಡಿಜಿಪಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ನಿರ್ಧಾರ | ರಾಜಕೀಯ ಪ್ರವೇಶ ಮಾಡಲಿದ್ದಾರಾ ಐಪಿಎಸ್ ಅಧಿಕಾರಿ

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯ ಹಿರಿಯ ಪೊಲೀಸ್‌ ಅಧಿಕಾರಿ, ರೈಲ್ವೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಭಾಸ್ಕರ್‌ ರಾವ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.ನಿವೃತ್ತಿಗೆ ಇನ್ನೂ ಮೂರು ವರ್ಷ ಇರುವಾಗಲೇ ಸ್ವಯಂ ನಿವೃತಿ ಹೊಂದಲು ನಿರ್ಧರಿಸಿದ್ದಾರೆ. ರಾಜ್ಯ ಪೊಲೀಸ್‌ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅವರು ನಿವೃತ್ತಿಗೆ ಮೂರು ವರ್ಷ ಬಾಕಿ ಇರುವಂತೆಯೇ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ (ಸ್ವಯಂ ನಿವೃತ್ತಿ) ನೀಡುತ್ತಿರುವುದಾಗಿ ಪತ್ರವನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಮತ್ತು ರಾಜ್ಯ …

ಎಡಿಜಿಪಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ನಿರ್ಧಾರ | ರಾಜಕೀಯ ಪ್ರವೇಶ ಮಾಡಲಿದ್ದಾರಾ ಐಪಿಎಸ್ ಅಧಿಕಾರಿ Read More »

ತಾಯಿಯ ಸಾವಿನಿಂದ ಮನನೊಂದ ಮಗ ಕೆರೆಗೆ ಹಾರಿ ಆತ್ಮಹತ್ಯೆ

ತಾಯಿ ಸಾವನ್ನಪ್ಪಿದ ದುಃಖದಲ್ಲಿ ಮಗನು ಕೆರೆಗೆ ಹಾರಿ ಪ್ರಾಣಬಿಟ್ಟಿರುವ ಮನಃಕಲಕುವ ಘಟನೆ ಮೈಸೂರಿನ ಪಿರಿಯಾಪಟ್ಟಣದಿಂದ ವರದಿಯಾಗಿದೆ. ಪಿರಿಯಾ ಪಟ್ಟಣದ ಪೋಸ್ಟ್ ಆಫೀಸ್ ರಸ್ತೆ ನಿವಾಸಿ ನಿವೃತ್ತ ಬಿಎಸ್‌ಎನ್‌ಎಲ್ ನೌಕರ ಬಿಜೆಪಿ ಮುಖಂಡ ಪುಟ್ಟಸ್ವಾಮಿ ಅವರ ಮಗ ಬಿ.ಪಿ.ಅರ್ಜುನ್ (29) ಆತ್ಮಹತ್ಯೆ ಮಾಡಿಕೊಂಡವ. ಈತನ ಶವ ಗುರುವಾರ ಸಂಜೆ ಪಿರಿಯಾಪಟ್ಟಣದ ಅರಸನ ಕೆರೆಯ ಸೇತುವೆ ಬಳಿ ಪತ್ತೆಯಾಗಿದೆ. ಸೆ.15ರಂದು ಈತನ ತಾಯಿ ಎಸ್.ಸುಜಾತ ಹೃದಯಾಘಾತದಿಂದ ನಿಧನರಾಗಿದ್ದರು. ತಾಯಿ ಶವಸಂಸ್ಕಾರವನ್ನು ಬಾರಸೆಯಲ್ಲಿ ಮುಗಿಸಿ ಬಂದ ಅರ್ಜುನ್ ತೀವ್ರವಾಗಿ ಮನನೊಂದಿದ್ದು, ವಾಟ್ಸ್ …

ತಾಯಿಯ ಸಾವಿನಿಂದ ಮನನೊಂದ ಮಗ ಕೆರೆಗೆ ಹಾರಿ ಆತ್ಮಹತ್ಯೆ Read More »

ಅತೀ ಸಣ್ಣ ಪ್ರಾಯದಲ್ಲಿ ಈಕೆಯ ಸಾಧನೆಗೆ ಹತ್ತೂರಿನಿಂದಲೂ ಮೆಚ್ಚುಗೆ!!ಗಾಯನ, ನಿರೂಪಣೆಯಲ್ಲಿ ಸೆಡ್ಡು ಹೊಡೆಯಬಲ್ಲ ಪ್ರತಿಭಾನ್ವಿತೆ|
ಹಾಡುಗಾರಿಕೆಯಲ್ಲಿ ಮಿಂಚುತ್ತಿರುವ ನಮ್ಮೂರ ಪ್ರತಿಭೆ, ಕುಮಾರಿ ಅಕ್ಷತಾ ದೇವಯ್ಯ ಹೊಸಮಠ

ಆಕೆ ಜನಿಸುತ್ತಲೇ ಕಲಾ ಮಾತೆಯ ಸೇವೆಗೆ ಕಲಾಮಾತೆಯ ಪಾಲಿಗೆ ಒಲಿದಿದ್ದಾಳೆ , ಬೆಳೆಯುತ್ತಲೇ ತನ್ನಲ್ಲಿರುವ ಅದ್ಭುತ ಸಂಗೀತ ಪ್ರತಿಭೆಗೆ ತನ್ನ ಪೋಷಕರ ಪ್ರೋತ್ಸಾಹವನ್ನೂ ಪಡೆದುಕೊಂಡಿದ್ದಾಳೆ. ನಿತ್ಯವೂ ತನ್ನ ಗಾನ ಸಿರಿಕಂಠವನ್ನು ಬಳಸಿಕೊಂಡು ಹಲವು ಕೇಳುಗರನ್ನು, ಅಭಿಮಾನಿಗಳನ್ನು ಸಂಪಾದಿಸಿಕೊಳ್ಳುತ್ತಿದ್ದಾಳೆ. ಹಲವಾರು ಸಮಾರಂಭಗಳಲ್ಲಿ ತನ್ನ ಹಾಡಿನ ಮೂಲಕ ಜನರ ಮನಸ್ಸನ್ನು ಗೆದ್ದು, ಹಲವಾರು ಆಡಿಷನ್ ಗಳಲ್ಲೂ ತೀರ್ಪುಗಾರರಿಂದ ಶಹಬ್ಬಾಶ್ ಗಿರಿಯನ್ನು ಪಡೆದುಕೊಂಡ, ಸದ್ಯ ಯುಟ್ಯೂಬ್ ಚಾನೆಲ್ ಒಂದಕ್ಕೆ ಹಾಡುಗಾರ್ತಿ ಹಾಗೂ ನಿರೂಪಕಿಯಾಗಿ ಆಯ್ಕೆಗೊಂಡ ನಮ್ಮೂರಿನ ಹೆಮ್ಮೆಯ ಪ್ರತಿಭೆ, ಅದ್ಭುತ ಕಂಠದ …

ಅತೀ ಸಣ್ಣ ಪ್ರಾಯದಲ್ಲಿ ಈಕೆಯ ಸಾಧನೆಗೆ ಹತ್ತೂರಿನಿಂದಲೂ ಮೆಚ್ಚುಗೆ!!ಗಾಯನ, ನಿರೂಪಣೆಯಲ್ಲಿ ಸೆಡ್ಡು ಹೊಡೆಯಬಲ್ಲ ಪ್ರತಿಭಾನ್ವಿತೆ|
ಹಾಡುಗಾರಿಕೆಯಲ್ಲಿ ಮಿಂಚುತ್ತಿರುವ ನಮ್ಮೂರ ಪ್ರತಿಭೆ, ಕುಮಾರಿ ಅಕ್ಷತಾ ದೇವಯ್ಯ ಹೊಸಮಠ
Read More »

ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ದ.ಕ.ದಿಂದ ಸವಣೂರು ಪ.ಪೂ.ಕಾಲೇಜಿನ ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಆಯ್ಕೆ

ಸವಣೂರು: ಇಲ್ಲಿನ ಸರಕಾರಿ ಪ.ಪೂ.ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರಾದ ಬಿ.ವಿ.ಸೂರ್ಯನಾರಾಯಣ ಅವರಿಗೆ ಮೈಸೂರಿನ ಶರಣ ವಿಶ್ವವಚನ ಫೌಂಡೇಶನ್ ಇವರು ನೀಡುವ 2021ನೇ ಸಾಲಿನ ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ದ.ಕ.ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಬಿ.ವಿ.ಸೂರ್ಯನಾರಾಯಣ ಅವರು ಸವಣೂರು ಪ.ಪೂ.ಕಾಲೇಜಿಗೆ ಸುಮಾರು 1.20 ಕೋಟಿ ದೇಣಿಗೆಯನ್ನು ದಾನಿಗಳಿಂದ ಸಂಗ್ರಹಿಸಿ ತರಗತಿ ಕೊಠಡಿಗಳು,ಪ್ರಯೋಗಾಲಯಗಳು,ವಾಚನಾಲಯ, ಶೌಚಾಲಯ ಮೊದಲಾದ ಮೂಲಭೂತ ಸೌಕರ್ಯಗಳನ್ನು ಸಂಸ್ಥೆಗೆ ಕಲ್ಪಿಸಿದಲ್ಲದೆ ,ಸುಮಾರು 500 ಕ್ಕೂ ಮಿಕ್ಕಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಧೃತಿ ಫೌಂಡೇಶನ್ ಮಂಗಳೂರು …

ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ದ.ಕ.ದಿಂದ ಸವಣೂರು ಪ.ಪೂ.ಕಾಲೇಜಿನ ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಆಯ್ಕೆ Read More »

ಹೊಸ ಮರಳು ನೀತಿಯ ಬಗ್ಗೆ ವಿಧಾನಸೌಧದಲ್ಲಿ ಸಭೆ

ಹೊಸ ಮರಳು ನೀತಿಯ ಬಗ್ಗೆ ವಿಧಾನಸೌಧದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ದಕ್ಷಿಣಕನ್ನಡ ಮತ್ತು ಉಡುಪಿಯ ಎಲ್ಲಾ ಶಾಸಕರು ಹಾಗೂ ಕಾರವಾರ ಜಿಲ್ಲೆಯ ಶಾಸಕರು ಉಪಸ್ಥಿತರಿದ್ದು ಚರ್ಚಿಸಲಾಯಿತು. ಆ ಬಳಿಕ ಈ ಹಿಂದಿನ ಮರಳು ನೀತಿ ಏನಿತ್ತೋ ಅದರಲ್ಲಿ ಒಂದಷ್ಟು ಸರಳೀಕರಣ ಮಾಡಿಕೊಂಡು ಮತ್ತು ನ್ಯಾಯಾಲಯದ ಮೊರೆ ಹೋಗಿರುವ 30 ಬ್ಲಾಕ್ ಗಳನ್ನು ನ್ಯಾಯಾಲಯದ ಆದೇಶದ ಪ್ರಕಾರ ಜಿಲ್ಲಾಡಳಿತ ಮತ್ತು ಗಣಿ ಇಲಾಖೆಯು ತಕ್ಷಣ ಟೆಂಡರ್ ಪ್ರಕ್ರಿಯೆಯನ್ನು ನಡಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮರಳು …

ಹೊಸ ಮರಳು ನೀತಿಯ ಬಗ್ಗೆ ವಿಧಾನಸೌಧದಲ್ಲಿ ಸಭೆ Read More »

ಪುತ್ತೂರು:ಸಂಪ್ಯದಲ್ಲಿ ಕಳೆದ ಹತ್ತುದಿನಗಳಿಂದ ಪಸರಿಸುತ್ತಿದ್ದ ವಿಷಗಾಳಿಗೆ ಅಗ್ನಿಶಾಮಕದಳದಿಂದ ಮುಕ್ತಿ

ಪುತ್ತೂರು: ಕಳೆದ ಹತ್ತುದಿನಗಳಿಂದ ಸಂಪ್ಯ ಪರಿಸರದಲ್ಲಿ ಪಸರಿಸುತ್ತಿದ್ದ ವಿಷಗಾಳಿಗೆ ಪುತ್ತೂರು ಅಗ್ನಿಶಾಮಕ ದಳದ ಅಧಿಕಾರಿಗಳು ಬುಧವಾರ ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆ ಮೂಲಕ ಮುಕ್ತಿ ನೀಡಿದ್ದಾರೆ.ಸಂಪ್ಯ ಕಮ್ಮಾಡಿ ಮೈದಾನದಲ್ಲಿ ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯೊಂದು ಹಾಕಿದ್ದ ಕೆಎಸ್ ಆರ್ ಟಿ ಸಿ ಬಸ್ಸಿನ ತ್ಯಾಜ್ಯ ರಾಶಿಯ ಬೆಂಕಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ನಂದಿಸಿದ್ದಾರೆ. ಘಟನೆ ವಿವರ: ಬೆಂಗಳೂರು ಮೂಲದ ರಾಯಲ್ ಆಟೋ ಮೊಬೈಲ್ಸ್ ಸಂಸ್ಥೆ ಕಳೆದ ಎರಡು ತಿಂಗಳಿನಿಂದ ಕೆಎಸ್ ಆರ್ ಟಿಸಿ ಸಂಸ್ಥೆಯಿಂದ ಏಲಂ ನಲ್ಲಿ …

ಪುತ್ತೂರು:ಸಂಪ್ಯದಲ್ಲಿ ಕಳೆದ ಹತ್ತುದಿನಗಳಿಂದ ಪಸರಿಸುತ್ತಿದ್ದ ವಿಷಗಾಳಿಗೆ ಅಗ್ನಿಶಾಮಕದಳದಿಂದ ಮುಕ್ತಿ Read More »

ಅಟ್ಲಾಂಟಾ ಮೃಗಾಲಯದ ಗೊರಿಲ್ಲಾಗಳಿಗೆ ಕೊರೋನಸೋಂಕು ಧೃಡ

ಅಟ್ಲಾಂಟ ಮೃಗಾಲಯದ ಗೊರಿಲ್ಲಾ ಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಕೊರೋನ ವೈರಸ್ನಿಂದ ಹರಡುವ ರೋಗವಾಗಿದೆ. ಈಗಾಗಲೇ ಮನುಷ್ಯರಲ್ಲಿ ಕೊರೋನ ಸೋಂಕು ಹರಡುತ್ತಿದೆ. ಆದರೆ ಈಗ ಕೊರೋನ ಸೋಂಕು ಪ್ರಾಣಿಗಳಲ್ಲಿ ಕಂಡುಬಂದ ವಿಚಾರ ಅಮೇರಿಕಾದಲ್ಲಿ ದೃಡಪಟ್ಟಿದೆ.ಅಮೇರಿಕಾದ ಅಟ್ಲಾಂಟ ಮೃಗಾಲಯದಲ್ಲಿರುವ ಗೊರಿಲ್ಲಾ ಗಳಿಗೆ ಕೊರೋನ ಸೋಂಕು ದೃಡಪಟ್ಟಿದೆ. ಕೊರೋನಾದ ಸಾಮಾನ್ಯ ಲಕ್ಷಣಗಳಾದ ಕೆಮ್ಮು, ನೆಗಡಿ ಮತ್ತು ಹಸಿವಿಲ್ಲದಿರುವಿಕೆ ಮುಂತಾದ ಲಕ್ಷಣಗಳು ಗೊರಿಲ್ಲಾ ಗಳಲ್ಲಿ ಕಂಡು ಬಂದಿರುವುದನ್ನು ಮೃಗಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಮನಿಸಿದ್ದಾರೆ. ಆದ್ದರಿಂದ ಗೊರಿಲ್ಲಾಗಳ ಮಲ, ಮೂಗಿನ ಹಾಗೂ …

ಅಟ್ಲಾಂಟಾ ಮೃಗಾಲಯದ ಗೊರಿಲ್ಲಾಗಳಿಗೆ ಕೊರೋನಸೋಂಕು ಧೃಡ Read More »

ಪ್ರಿಯತಮೆಯನ್ನು ಪಡೆಯಲು ಯಾರಿಗೂ ತಿಳಿಯದಂತೆ ಹತ್ತು ವರ್ಷಗಳ ಕಾಲ ಮನೆಯ ಒಂಟಿ ಕೋಣೆಯಲ್ಲಿ ಬಚ್ಚಿಟ್ಟಿದ್ದ ಪಾಗಲ್ ಪ್ರೇಮಿಯೊಂದಿಗೆ ಕೊನೆಗೂ ನೆರವೇರಿತು ಆಕೆಯ ಮದುವೆ !! | ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಪ್ರೇಮ್ ಕಹಾನಿ

ಪಾಲಕ್ಕಾಡ್‌ : ಪ್ರಿಯತಮೆಯನ್ನು ಪಡೆಯುವ ಸಲುವಾಗಿ ಯಾರಿಗೂ ತಿಳಿಯದಂತೆ 10 ವರ್ಷಗಳ ಕಾಲ ತನ್ನ ಮನೆಯ ಒಂಟಿ ಕೋಣೆಯಲ್ಲಿ ಬಚ್ಚಿಟ್ಟು ಸುದ್ದಿಯಾಗಿದ್ದ ವ್ಯಕ್ತಿ, ಕೊನೆಗೂ ಆಕೆಯನ್ನು ವಿವಾಹವಾಗಿದ್ದಾನೆ. ರೆಹಮಾನ್‌ ಎಂಬಾತ ತನ್ನ ಪ್ರಿಯತಮೆ ಸಾಜಿತಾ ಎಂಬಾಕೆಯನ್ನು ಹತ್ತು ವರ್ಷಗಳ ಕಾಲ ಬಚ್ಚಿಟ್ಟಿದ್ದ ಎಂದು ಸುದ್ದಿಯಾಗಿದ್ದು, ಬುಧವಾರ ಇಬ್ಬರು ಪಾಲಕ್ಕಾಡ್‌‌ ನೇನ್ಮರದಲ್ಲಿ ರಿಜಿಸ್ಟರ್‌‌ ವಿವಾಹವಾಗಿದ್ದಾರೆ. ವಿವಾಹದ ಬಳಿಕ ಎಲ್ಲರಿಗೂ ಸಿಹಿ ಹಂಚಿ ತಮ್ಮನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಬಳಿಕ ಮಾತನಾಡಿದ ರೆಹಮಾನ್‌‌, ನಾವಿಬ್ಬರು ಸಂತೋಷ ಹಾಗೂ ಶಾಂತಿಯುತ ಜೀವನ …

ಪ್ರಿಯತಮೆಯನ್ನು ಪಡೆಯಲು ಯಾರಿಗೂ ತಿಳಿಯದಂತೆ ಹತ್ತು ವರ್ಷಗಳ ಕಾಲ ಮನೆಯ ಒಂಟಿ ಕೋಣೆಯಲ್ಲಿ ಬಚ್ಚಿಟ್ಟಿದ್ದ ಪಾಗಲ್ ಪ್ರೇಮಿಯೊಂದಿಗೆ ಕೊನೆಗೂ ನೆರವೇರಿತು ಆಕೆಯ ಮದುವೆ !! | ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಪ್ರೇಮ್ ಕಹಾನಿ Read More »

ಸುಳ್ಯ : ನಾಪತ್ತೆಯಾದ ಗ್ರಾ.ಪಂ.ಸದಸ್ಯೆ ಹಾಗೂ ನೆರೆಮನೆಯ ವ್ಯಕ್ತಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಸುಳ್ಯ : ಗ್ರಾ.ಪಂ. ಸದಸ್ಯೆಯಾಗಿರುವ ಮಹಿಳೆಯನ್ನು ವ್ಯಕ್ತಿಯೋರ್ವ ಸೇತುವೆಯಿಂದ ನದಿಗೆ ತಳ್ಳಿ ಹಾಕಿದ ಮತ್ತು ಇಬ್ಬರೂ ಕಾಣೆಯಾದ ಘಟನೆಗೆ ಸಂಬಂಧಿಸಿದಂತೆ ಈಗ ಅವರು ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುಳ್ಯ ತಾಲೂಕಿನ ಅಂಚಿನಲ್ಲಿರುವ ಕೊಡಗಿನ ಚೆಂಬು ಗ್ರಾಮ ಪಂಚಾಯತ್‌ನ ಸದಸ್ಯೆ ದಬ್ಬಡ್ಕ ಕಮಲ ಎಂಬವರು ನಿನ್ನೆ ಸಂಜೆ ಇತರರೊಂದಿಗೆ ಹತ್ತಿರದ ಮನೆಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ದಬ್ಬಡ್ಕ ಸೇತುವೆ ಮೇಲೆ ನೆರೆ ಮನೆಯ ಮುತ್ತು ಎಂಬಾತ ಆಕೆಯನ್ನು ಸೇತುವೆಯಿಂದ ಕೆಳಗೆ ತಳ್ಳಿ ಹಾಕಿದನೆನ್ನಲಾಗಿದೆ.ಬಳಿಕ ಮುತ್ತು ಕೂಡಾ ನಾಪತ್ತೆಯಾಗಿದ್ದು, …

ಸುಳ್ಯ : ನಾಪತ್ತೆಯಾದ ಗ್ರಾ.ಪಂ.ಸದಸ್ಯೆ ಹಾಗೂ ನೆರೆಮನೆಯ ವ್ಯಕ್ತಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ವಾಹನ ಸವಾರರೇ ಗಮನಿಸಿ !! |ನಿಮ್ಮ ವಾಹನವನ್ನು ನೀವು ಏಪ್ರಿಲ್ 2019ರ ಮುಂಚೆ ಖರೀದಿಸಿದ್ದೀರಾ??‌ | ಹಾಗಿದ್ದರೆ ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ ಇಲ್ಲದಿದ್ದರೆ ಭಾರಿ ದಂಡ ತೆರಬೇಕಾದೀತು ?!

ವಾಹನ ಸವಾರರಿಗೆ ಹೊಸದೊಂದು ಶಾಕಿಂಗ್ ನ್ಯೂಸ್ ಇದೆ. ಅದೇನೆಂದರೆ, ಏಪ್ರಿಲ್ 2019 ಕ್ಕಿಂತ ಮೊದಲು ಖರೀದಿಸಿದ ಕಾರು ಮತ್ತು ಬೈಕ್‌ಗಳಿಗೆ ಸೆಪ್ಟೆಂಬರ್ 30ಕ್ಕಿಂತ ಮುನ್ನ ಹೈ ಸೆಕ್ಯುರಿಟಿ ಲೈಸೆನ್ಸ್ ಪ್ಲೇಟ್‌ಗಳನ್ನು ಹಾಕುವುದು ಕಡ್ಡಾಯವಾಗಿದೆ. ಒಂದು ವೇಳೆ ಇದು ಆಗದಿದ್ದರೆ, ಭಾರೀ ದಂಡವನ್ನು ಪಾವತಿಸಬೇಕಾಗಬಹುದು. ಈ ಹಿಂದೆ ಹಲವು ರಾಜ್ಯಗಳಲ್ಲಿ ಇದರ ಗಡುವನ್ನು  ಏಪ್ರಿಲ್ 15 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಕೊರೋನಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮತ್ತೆ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿತ್ತು. ಹೈ ಸೆಕ್ಯುರಿಟಿ ರೆಜಿಸ್ಟ್ರೇಶನ್ ಪ್ಲೇಟ್ …

ವಾಹನ ಸವಾರರೇ ಗಮನಿಸಿ !! |ನಿಮ್ಮ ವಾಹನವನ್ನು ನೀವು ಏಪ್ರಿಲ್ 2019ರ ಮುಂಚೆ ಖರೀದಿಸಿದ್ದೀರಾ??‌ | ಹಾಗಿದ್ದರೆ ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ ಇಲ್ಲದಿದ್ದರೆ ಭಾರಿ ದಂಡ ತೆರಬೇಕಾದೀತು ?! Read More »

error: Content is protected !!
Scroll to Top