ವಾಹನ ಸವಾರರೇ ಗಮನಿಸಿ !! |ನಿಮ್ಮ ವಾಹನವನ್ನು ನೀವು ಏಪ್ರಿಲ್ 2019ರ ಮುಂಚೆ ಖರೀದಿಸಿದ್ದೀರಾ??‌ | ಹಾಗಿದ್ದರೆ ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ ಇಲ್ಲದಿದ್ದರೆ ಭಾರಿ ದಂಡ ತೆರಬೇಕಾದೀತು ?!

ವಾಹನ ಸವಾರರಿಗೆ ಹೊಸದೊಂದು ಶಾಕಿಂಗ್ ನ್ಯೂಸ್ ಇದೆ. ಅದೇನೆಂದರೆ, ಏಪ್ರಿಲ್ 2019 ಕ್ಕಿಂತ ಮೊದಲು ಖರೀದಿಸಿದ ಕಾರು ಮತ್ತು ಬೈಕ್‌ಗಳಿಗೆ ಸೆಪ್ಟೆಂಬರ್ 30ಕ್ಕಿಂತ ಮುನ್ನ ಹೈ ಸೆಕ್ಯುರಿಟಿ ಲೈಸೆನ್ಸ್ ಪ್ಲೇಟ್‌ಗಳನ್ನು ಹಾಕುವುದು ಕಡ್ಡಾಯವಾಗಿದೆ.

ಒಂದು ವೇಳೆ ಇದು ಆಗದಿದ್ದರೆ, ಭಾರೀ ದಂಡವನ್ನು ಪಾವತಿಸಬೇಕಾಗಬಹುದು. ಈ ಹಿಂದೆ ಹಲವು ರಾಜ್ಯಗಳಲ್ಲಿ ಇದರ ಗಡುವನ್ನು  ಏಪ್ರಿಲ್ 15 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಕೊರೋನಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮತ್ತೆ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿತ್ತು.

ಹೈ ಸೆಕ್ಯುರಿಟಿ ರೆಜಿಸ್ಟ್ರೇಶನ್ ಪ್ಲೇಟ್ ಎಂದರೇನು?

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಹೈ ಸೆಕ್ಯುರಿಟಿ ರೆಜಿಸ್ಟ್ರೇಶನ್ ಪ್ಲೇಟ್  (high security number plate) ಒಂದು ಹೊಲೊಗ್ರಾಮ್ ಸ್ಟಿಕ್ಕರ್ ಆಗಿದೆ. ಇದು ವಾಹನದ ಎಂಜಿನ್ ಮತ್ತು ಚಾಸಿಸ್ ಸಂಖ್ಯೆಯನ್ನು ಒಳಗೊಂಡಿದೆ. ಈ ಸಂಖ್ಯೆಯನ್ನು ಕೈಯಿಂದ ಬರೆಯಲಾಗುವುದಿಲ್ಲ. ಇದನ್ನು ಬಲ್ಕಿ ಪ್ರೆಶರ್ ಮೆಷಿನ್ ಸಹಾಯದಿಂದ  ಬರೆಯಲಾಗುತ್ತದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗೆ ಇದನ್ನು ಅಗತ್ಯವಾಗಿ ಹಾಕಿಸಿಕೊಳ್ಳಲೇ ಬೇಕು.

ಎಚ್‌ಎಸ್‌ಆರ್‌ಪಿಯ ಪ್ರಯೋಜನಗಳೇನು?

*ದೇಶಾದ್ಯಂತ ಎಲ್ಲಾ ವಾಹನಗಳ ನಂಬರ್ ಪ್ಲೇಟ್‌ಗಳು ಒಂದೇ ರೀತಿ ಆಗಿರುತ್ತವೆ.
*ನಂಬರ್ ಪ್ಲೇಟ್ ನಲ್ಲಿ ಯಾರಿಗೂ ಯಾವುದೇ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ.
*ವಾಹನಗಳ ದುರುಪಯೋಗ ಮತ್ತು ಕಳ್ಳತನ, ನಂಬರ್ ಪ್ಲೇಟ್‌ ಅವ್ಯವಹಾರವನ್ನು ತಡೆಯಬಹುದು.
*ಇದು ರಸ್ತೆ ಸಂಬಂಧಿತ ಅಪರಾಧಗಳ ವಿಚಾರದಲ್ಲಿ ಕಾನೂನನ್ನು ಜಾರಿಗೊಳಿಸಲು ಅಧಿಕಾರಿಗಳಿಗೆ ಸಹಾಯವಾಗಲಿದೆ.
*ಎಚ್‌ಎಸ್‌ಆರ್‌ಪಿ (HSRP) ಮೂಲಕ ಅಕ್ರಮ ನಂಬರ್ ಪ್ಲೇಟ್‌ಗಳ ಮಾರಾಟಗಳ ಮೇಲೆ ಕಡಿವಾಣ ಹಾಕಬಹುದು. 
*ಪೊಲೀಸರು ನಿಮ್ಮ ವಾಹನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಂಬರ್ ಪ್ಲೇಟ್ ಮೂಲಕ  ಪಡೆಯುತ್ತಾರೆ.
*ಡೇಟಾವನ್ನು ಡಿಜಿಟಲೀಕರಣಗೊಳಿಸಲಾಗುವುದು.

HSRP ನಂಬರ್ ಪ್ಲೇಟ್ ಬುಕ್ ಮಾಡುವುದು ಹೇಗೆ ?

ನಿಮ್ಮ ಮನೆಯಿಂದಲೇ ಹೈ ಸೆಕ್ಯುರಿಟಿ ರೆಜಿಸ್ಟ್ರೇಶನ್ ಪ್ಲೇಟ್ ಅನ್ನು ಬುಕ್ ಮಾಡಬಹುದು.
1. ಮೊದಲಿಗೆ www.bookmyhsrp.com ಗೆ ಹೋಗಿ.
2. ಇಲ್ಲಿ ದ್ವಿಚಕ್ರ ವಾಹನ, ಮೂರು ಚಕ್ರ, ನಾಲ್ಕು ಚಕ್ರ, ಭಾರೀ ವಾಹನಗಳ ಆಯ್ಕೆಗಳು ಲಭ್ಯವಿರುತ್ತವೆ. ನಿಮ್ಮ ವಾಹನದ ಪ್ರಕಾರ ಅದನ್ನು ಆಯ್ಕೆ ಮಾಡಿ.
3. ಇದರ ನಂತರ ವಾಹನದ ಕಂಪನಿಯನ್ನು ಆಯ್ಕೆ ಮಾಡಿ.
4. ಕಂಪನಿಯನ್ನು ಆಯ್ಕೆ ಮಾಡಿದ ನಂತರ, ನೀವು ರಾಜ್ಯದ ಆಯ್ಕೆಯನ್ನು ಪಡೆಯುತ್ತೀರಿ. ಅಲ್ಲಿ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಬಹುದು.
5. ಇದರ ನಂತರ ವಾಹನದ ಬಗ್ಗೆ ಸಂಪೂರ್ಣ ಮಾಹಿತಿ ಕೇಳಲಾಗುತ್ತದೆ. ಆ ಮಾಹಿತಿಯನ್ನು ಭರ್ತಿ ಮಾಡಿ.
6. ಮಾಹಿತಿಯನ್ನು ತುಂಬಿದ ನಂತರ ಹೊಸ ವಿಂಡೋ ತೆರೆಯುತ್ತದೆ. ಇದರಲ್ಲಿ, ವಾಹನದ ಆರ್‌ಸಿ ಮತ್ತು ಐಡಿ ಪುರಾವೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
7. ನಿಮ್ಮ ಮೊಬೈಲ್ ನಲ್ಲಿ OTP ಬರುತ್ತದೆ. ಭರ್ತಿ ಮಾಡಿ ಮತ್ತು ಸಲ್ಲಿಸಿ.
8. ಇದರ ನಂತರ ಪೇಮೆಂಟ್ ಆಯ್ಕೆ ಕಾಣಿಸುತ್ತದೆ. ಪಾವತಿ ಮಾಡಿದ ನಂತರ ರಶೀದಿ ಸಿಗುತ್ತದೆ. ನಂತರ ನಿಗದಿತ ಸಮಯಕ್ಕೆ  RTO ಕಚೇರಿಗೆ ಹೋಗಿ ನಂಬರ್ ಪ್ಲೇಟ್ ಪಡೆಯಬಹುದು.

ಹೈ ಸೆಕ್ಯುರಿಟಿ ರೆಜಿಸ್ಟ್ರೇಶನ್ ಪ್ಲೇಟ್ ಹಾಕುವ ಮೂಲಕ  ವಾಹನದ ಮಾಲೀಕರು, ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ನಂಬರ್ ಪ್ಲೇಟ್‌ಗಳ ಟ್ಯಾಂಪರಿಂಗ್ ಮತ್ತು ವಾಹನಗಳ ದುರುಪಯೋಗಕ್ಕೆ ಕಡಿವಾಣ ಹಾಕಲಾಗುವುದು. ಒಂದು ವೇಳೆ ವಾಹನ ಕಳುವಾದರೆ, ವಾಹನವನ್ನು ಹುಡುಕುವುದು ಪೋಲಿಸರಿಗೆ  ಸುಲಭವಾಗುತ್ತದೆ.

ಹಾಗಾಗಿ ಯಾರ ಬಳಿ 2019ರ ಮುಂಚಿನ ವಾಹನಗಳಿವೆಯೋ ಅವರು ಆದಷ್ಟು ಬೇಗ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಿ. ಇಲ್ಲದಿದ್ದರೆ ಇದಕ್ಕೆ ನೀವು ದಂಡ ತೆರಬೇಕಾದೀತು.

Leave a Reply

error: Content is protected !!
Scroll to Top
%d bloggers like this: