Day: August 31, 2021

ಪಡಿತರ ಚೀಟಿದಾರರ ಇ-ಕೆವೈಸಿಗೆ ಸೆ.10ರ ವರೆಗೆ ಅಂತಿಮ ಅವಕಾಶ | ಇ-ಕೆವೈಸಿ ಮಾಡದ ಪಡಿತರ ಚೀಟಿ ರದ್ದು

ಮಂಗಳೂರು : ಸೆಪ್ಟಂಬರ್ 1 ರಿಂದ 10 ವರೆಗೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಬಾಕಿ ಉಳಿದಿರುವ ಫಲಾನುಭವಿಗಳ ಇ-ಕೆವೈಸಿ ನಡೆಸಲಾಗುತ್ತಿದೆ.2021ರ ಸೆಪ್ಟಂಬರ್ ಮಾಹೆಯಲ್ಲಿ ಇ-ಕೆವೈಸಿ ಮಾಡಲು ಕೊನೆಯ ಅವಕಾಶವಾಗಿದ್ದು, ನಂತರ ಇ-ಕೆವೈಸಿ ಮಾಡದ ಪಡಿತರ ಚೀಟಿದಾರರ ಪಡಿತರ ತಡೆಹಿಡಿಯಲಾಗುವುದು.ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ನೀಡಬೇಕಾಗಿದೆ. ಜಿಲ್ಲೆಯಲ್ಲಿ ಚಾಲ್ತಿ ಇರುವ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಇ-ಕೆವೈಸಿ ನೀಡಲು ಆಧಾರ್ ಕಾರ್ಡ್, ಎಲ್.ಪಿ.ಜಿ ದಾಖಲೆ, ಜಾತಿ ಪ್ರಮಾಣ ಪತ್ರ(ಇದ್ದಲ್ಲಿ), ಆದಾಯ ಪ್ರಮಾಣ ಪತ್ರ, …

ಪಡಿತರ ಚೀಟಿದಾರರ ಇ-ಕೆವೈಸಿಗೆ ಸೆ.10ರ ವರೆಗೆ ಅಂತಿಮ ಅವಕಾಶ | ಇ-ಕೆವೈಸಿ ಮಾಡದ ಪಡಿತರ ಚೀಟಿ ರದ್ದು Read More »

ಹಾವು ಕಚ್ಚಿ ಯುವಕ ಸಾವು | ಕೆಲಸಕ್ಕೆ ಹೋಗಿದ್ದ ವೇಳೆ ಕಚ್ಚಿದ ಹಾವು

ಹಾವಿನ ಕಡಿತಕ್ಕೊಳಗಾಗಿ ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನಿಂದ ವರದಿಯಾಗಿದೆ. ಬಡಗಕಜೆಕಾರು ಗ್ರಾಮದ ಪಾಂಡವರ ಕಲ್ಲು ನಿವಾಸಿ ಉಸ್ಮಾನ್ ಅವರ ಪುತ್ರ ಆಸಿದ್(26) ಮೃತಪಟ್ಟವರು. ಆಸಿದ್ ಅವರು ಕೂಲಿ ಕಾರ್ಮಿಕರಾಗಿದ್ದು, ವಾಮದಪದವು ಬಳಿ ಮಂಗಳವಾರ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಾವಿನ ಕಡಿತಕ್ಕೊಳಗಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪಕ್ಕದ ಬಾರ್‌ಗೆ ಬಿಯರ್ ಕುಡಿಯಲು ಹೋಗುತ್ತಾನೆಂದು ಯುವಕನಿಗೆ ಹಲ್ಲೆ | ವೈನ್ ಶಾಪ್ ಮಾಲಕ ಸಹಿತ ಮೂವರ ವಿರುದ್ಧ ಪ್ರಕರಣ

ಪಕ್ಕದ ಬಾರ್ ಗೆ ಬಿಯರ್ ಕುಡಿಯಲು ಹೋಗುತ್ತಾನೆ ಎಂದು ವ್ಯಕ್ತಿಯೊಬ್ಬರಿಗೆ ಮೂರು ಜನ ಹಲ್ಲೆ ನಡೆಸಿರುವ ಘಟನೆ ಸಿದ್ಧಕಟ್ಟೆಯಲ್ಲಿ ಆ.30 ರಂದು ನಡೆದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಗಬೆಟ್ಟು ಗ್ರಾಮದ ಆರಂಬೋಡಿ ನಿವಾಸಿ ಬಾಲರಾಜ್(26) ದೂರುದಾರಾಗಿದ್ದಾರೆ. ಆರೋಪಿಗಳನ್ನು ಗಣೇಶ್ ಸಲೂನ್, ನಾಮಸಂತು, ವೈನ್ ಶಾಪ್ ಮಾಲಕ ಭೋಜಶೆಟ್ಟಿ ಎಂದು ಗುರುತಿಸಲಾಗಿದೆ. ಬಾಲರಾಜ್ ರವರು ಆ.30 ರಂದು ರಾಮಚಂದ್ರ ಮತ್ತು ಯಶೋಧರ(ಕುಟ್ಟಿ ಶೆಟ್ಟಿ) ಯವರೊಂದಿಗೆ ಸಿದ್ಧಕಟ್ಟೆಯಲ್ಲಿರುವ ನವರಂಗ ವೈನ್ ಶಾಪ್ ಗೆ ಹೋಗಿ …

ಪಕ್ಕದ ಬಾರ್‌ಗೆ ಬಿಯರ್ ಕುಡಿಯಲು ಹೋಗುತ್ತಾನೆಂದು ಯುವಕನಿಗೆ ಹಲ್ಲೆ | ವೈನ್ ಶಾಪ್ ಮಾಲಕ ಸಹಿತ ಮೂವರ ವಿರುದ್ಧ ಪ್ರಕರಣ Read More »

ಮತ್ತೆ ಬಂದ್ ಆಗಲಿದೆ ಶಿರಾಡಿಘಾಟ್ !! | ವಾಹನಗಳ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ ಹಾಸನ ಜಿಲ್ಲಾಧಿಕಾರಿ

ಶಿರಾಡಿಘಾಟ್‌ನಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಸನ ಜಿಲ್ಲಾಧಿಕಾರಿ ಇದೀಗ ಆದೇಶ ಹೊರಡಿಸಿದ್ದಾರೆ. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಕಲೇಶಪುರ ಸಮೀಪದ ದೋಣಿಗಲ್ ಬಳಿ ತಿಂಗಳ ಹಿಂದೆ ರಸ್ತೆಯ ಒಂದು ಭಾಗದಲ್ಲಿ ಭೂ ಕುಸಿತವುಂಟಾಗಿದ್ದರಿಂದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ರಸ್ತೆ ದುರಸ್ತಿಯಾಗಿದ್ದರಿಂದ 20 ಟನ್ ಸರಕು ಸಾಗಾಣೆಯ ಲಾರಿಗಳು, ಟ್ಯಾಂಕರ್‌ಗಳು ಸೇರಿದಂತೆ ಎಲ್ಲ ವಾಹನಗಳ ಸಂಚಾರಕ್ಕೆ ಆಗಸ್ಟ್ 16 ರಿಂದ ಅನುಮತಿ ನೀಡಲಾಗಿತ್ತು. ಆದರೆ ಈಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರ …

ಮತ್ತೆ ಬಂದ್ ಆಗಲಿದೆ ಶಿರಾಡಿಘಾಟ್ !! | ವಾಹನಗಳ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ ಹಾಸನ ಜಿಲ್ಲಾಧಿಕಾರಿ Read More »

ಆಲಂಕಾರು : ಕಡಬ ಎಸೈ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ | ಮಾಸ್ಕ್ ಧರಿಸದ ವ್ಯಕ್ತಿಗೆ ದಂಡ,ಕೆಟ್ಟ ಪದ ಬಳಕೆ ಆರೋಪ

ಕಡಬ : ಆಲಂಕಾರು ಗಸ್ತಿನಲ್ಲಿದ್ದ ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ಅವರು ಮಾಸ್ಕ್ ಧರಿಸದ ವ್ಯಕ್ತಿಯೊಬ್ಬರಿಗೆ ದಂಡ ವಿಧಿಸಿದ್ದು ,ಈ ವೇಳೆ ಎಸೈ ಅವರು ಅವಾಚ್ಯ ಪದ ಬಳಕೆ ಮಾಡಿದರೆಂದು ಆರೋಪಿಸಿ ಮಾತಿನ ಚಕಮಕಿ ನಡೆದ ಘಟನೆ ಆ 31ರಂದು ಸಂಜೆ ನಡೆದಿದೆ. ಎಸ್.ಐ ಮತ್ತು ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರಿದ್ದರು. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಈ ವೀಡಿಯೋದಲ್ಲಿ ಪೊಲೀಸರು ಕೆಟ್ಟ ಪದ …

ಆಲಂಕಾರು : ಕಡಬ ಎಸೈ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ | ಮಾಸ್ಕ್ ಧರಿಸದ ವ್ಯಕ್ತಿಗೆ ದಂಡ,ಕೆಟ್ಟ ಪದ ಬಳಕೆ ಆರೋಪ Read More »

ಮಂಗಳೂರು : ಹೋಮ್ ನರ್ಸ್ ನಾಪತ್ತೆ | ಊರಿಗೆ ಹೋಗುತ್ತೇನೆ ಎಂದವರ ಮೊಬೈಲ್ ಸ್ವಿಚ್‌ಆಫ್

ಮಂಗಳೂರು: ನಂದಿಗುಡ್ಡೆಯ ‘ವಿ ಕೇರ್ ನರ್ಸಿಂಗ್ ಹೋಮ್ ಪಿಜಿ’ಯಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಯುವತಿ ಯೊಬ್ಬರು ನಾಪತ್ತೆಯಾದ ಘಟನೆ ನಡೆದಿದೆ. ಪಂಜಾಬ್ ಮೂಲದ ಲಿಶ್ಚ (21) ನಾಪತ್ತೆಯಾದ ಯುವತಿ ಎಂದು ತಿಳಿದುಬಂದಿದೆ. ಕೇರ್ ನರ್ಸಿಂಗ್ ಹೋಮ್ ಪಿಜಿ’ಯಲ್ಲಿ ಕೆಲಸ ಮಾಡುತ್ತಾ ಅದೇ ಪಿಜಿಯಲ್ಲಿ ನೆಲೆಸಿದ್ದರು. ಈಕೆಗೆ ಜ್ವರ ಬಂದ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದರು. ಆ.17ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಊರಿಗೆ ಹೋಗಿ ಬರುವುದಾಗಿ ಪಿಜಿ ಮಾಲಕರಿಗೆ ತಿಳಿಸಿದ ಯುವತಿ ನಾಪತ್ತೆಯಾಗಿದ್ದಾರೆ. ಮರುದಿನ (ಆ.18) ಬೆಳಗ್ಗೆ …

ಮಂಗಳೂರು : ಹೋಮ್ ನರ್ಸ್ ನಾಪತ್ತೆ | ಊರಿಗೆ ಹೋಗುತ್ತೇನೆ ಎಂದವರ ಮೊಬೈಲ್ ಸ್ವಿಚ್‌ಆಫ್ Read More »

ದ.ಕ : ನೈಟ್ ಕರ್ಫ್ಯೂ, ವೀಕೆಂಡ್ ಕಫ್ರ್ಯೂ ಮಾರ್ಗಸೂಚಿಗಳು ಪ್ರಕಟ | ಕೋವಿಡ್ ಸೋಂಕು ನಿಯಂತ್ರಣಕ್ಕೆ ನಿರ್ಬಂಧಗಳನ್ನು ಜಾರಿ ಮಾಡಿದ ಜಿಲ್ಲಾಧಿಕಾರಿ

ಸರಕಾರದ ಆದೇಶ ಹಾಗೂ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿ ಕೋವಿಡ್-19 ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾ ದಂಡಾಧಿಕಾರಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 34 ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 (3) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೆಲವು ನಿರ್ಬಂಧಗಳನ್ನು ಜಾರಿ ಮಾಡಿರುತ್ತಾರೆ. ಮುಂದಿನ ಆದೇಶದವರೆಗೆ ಜಿಲ್ಲೆಯಾದ್ಯಂತ ರಾತ್ರಿ 9 ಗಂಟೆಯಿಂದ …

ದ.ಕ : ನೈಟ್ ಕರ್ಫ್ಯೂ, ವೀಕೆಂಡ್ ಕಫ್ರ್ಯೂ ಮಾರ್ಗಸೂಚಿಗಳು ಪ್ರಕಟ | ಕೋವಿಡ್ ಸೋಂಕು ನಿಯಂತ್ರಣಕ್ಕೆ ನಿರ್ಬಂಧಗಳನ್ನು ಜಾರಿ ಮಾಡಿದ ಜಿಲ್ಲಾಧಿಕಾರಿ Read More »

ಅತ್ಯಾಚಾರ ಪ್ರಕರಣದ ಆರೋಪಿ 2.5 ವರ್ಷದ ಬಳಿಕ ಬಂಧನ | ಪೊಲೀಸರನ್ನು ಯಾಮಾರಿಸುತ್ತಿದ್ದ ಪುತ್ತೂರಿನ ಯುವಕ OLXನಲ್ಲಿ ಸಿಕ್ಕಿ ಬಿದ್ದ

ಸುಮಾರು ಎರಡೂವರೆ ವರ್ಷಗಳ ಹಿಂದೆ ಕೇರಳದ ಕಾಕ್ಕನಾಡ್ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ದಕ್ಷಿಣ ಕನ್ನಡದ ಪುತ್ತೂರು ಮೂಲದ ಪ್ರವೀಣ್ ಎಂಬಾತನನ್ನು ಕೇರಳ ಪೊಲೀಸರು OLX ಮೂಲಕ ಬಂಧಿಸಿದ್ದಾರೆ. ಅದು ಹೇಗೆಂದು ಹುಬ್ಬೇರಿಸುತ್ತೀರಾ..ಇಲ್ಲಿದೆ ಡಿಟೇಲ್ಸ್ ಆರೋಪಿ ಪ್ರವೀಣ್ ಯುವತಿಯ ಅತ್ಯಾಚಾರ ನಡೆಸಿದ ಕಳೆದ ಎರಡೂವರೆ ವರ್ಷಗಳಿಂದ ಪೊಲೀಸರನ್ನು ಯಾಮಾರಿಸಿ ಅಲೆದಾಡುತ್ತಿದ್ದ. ಪೊಲೀಸರು ಎಷ್ಟೇ ಶ್ರಮಿಸಿದರೂ ಆತ ಸಿಗಲೇ ಇಲ್ಲ.ಕೇರಳ ಪೊಲೀಸರಿಗೆ ಸಹಾಯ ಮಾಡಿದ್ದು ವಾಹನಗಳ ಮಾರಾಟ ಜಾಲತಾಣ OLX. 2019ರಲ್ಲಿ ಪ್ರವೀಣ್ ಕೇರಳದ ಚೊಟ್ಟಾನಿಕ್ಕರೆ ಭಗವತಿ ದೇವಸ್ಥಾನದಲ್ಲಿದ್ದ ಸಂದರ್ಭದಲ್ಲಿ …

ಅತ್ಯಾಚಾರ ಪ್ರಕರಣದ ಆರೋಪಿ 2.5 ವರ್ಷದ ಬಳಿಕ ಬಂಧನ | ಪೊಲೀಸರನ್ನು ಯಾಮಾರಿಸುತ್ತಿದ್ದ ಪುತ್ತೂರಿನ ಯುವಕ OLXನಲ್ಲಿ ಸಿಕ್ಕಿ ಬಿದ್ದ Read More »

ಬಾಲಕಿಗೆ ಕಿರುಕುಳ ಪ್ರಕರಣದ ಆರೋಪಿ ಕೋರ್ಟ್ ನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ | ನಾನೇನೂ ತಪ್ಪು ಮಾಡಿಲ್ಲ ಎಂದು ಮನನೊಂದು ಆತ್ಮಹತ್ಯೆ

ಮಂಗಳೂರು : ಪೋಕ್ಸೊ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಆರೋಪಿಯೊಬ್ಬ ಮಂಗಳೂರು ನ್ಯಾಯಾಲಯದ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಮೃತರನ್ನು ಕಿನ್ಯಾ ನಿವಾಸಿ ರವಿರಾಜ್‌ (31) ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದ ಆರೋಪದ ಹಿನ್ನೆಲೆ ಆರೋಪಿ ರವಿರಾಜ್‌‌‌‌ ಅವರನ್ನು ಬಂಧಿಸಲಾಗಿತ್ತು. ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಮನನೊಂದು ಜಿಲ್ಲಾ ನ್ಯಾಯಾಲಯದ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೆರಡು ವರ್ಷ ಜಲಪ್ರಳಯ, 5 ವರ್ಷಗಳ ತನಕ ಕೋರೋನಾ ಕಂಟಕ ಖಚಿತ | ನಿಜವಾಗಲಿದೆಯೇ ಕೋಡಿ ಸ್ವಾಮಿ ನುಡಿದ ಭವಿಷ್ಯ ?!

ಇಡೀ ವಿಶ್ವವೇ ಕೊರೋನ ಮಹಾಮಾರಿಯಿಂದ ಬಹಳಷ್ಟು ಕುಗ್ಗಿ ಹೋಗಿದೆ. ಸಾಲು ಸಾಲು ಹೆಣಗಳ ರಾಶಿ ಕಣ್ಣ ಮುಂದೆಯೇ ಸುಟ್ಟು ಬೂದಿಯಾಗಿವೆ. ಇಂತಹ ಸಂಕಷ್ಟಗಳ ನಡುವೆಯೇ ಇದೀಗ ಕೋಡಿ ಮಠದ ಸ್ವಾಮೀಜಿ ದೊಡ್ಡ ಆತಂಕಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹೌದು, ಹಲವು ಸಾವು-ನೋವುಗಳಿಂದ ಕೂಡಿದ ಜನತೆಗೆ ಇವರ ಈ ಮಾತು ಭಯ ಹುಟ್ಟಿಸುವಂತಾಗಿದೆ. ಅಷ್ಟಕ್ಕೂ ಸ್ವಾಮೀಜಿ ಬಿಚ್ಚಿಟ್ಟ ರಹಸ್ಯ ಆದರೂ ಏನು? ಮುಂದಿನ ಎರಡು ವರ್ಷಗಳಲ್ಲಿ ಜಲಪ್ರಳಯಸಂಭವಿಸಲಿದ್ದು, ಜನರು ತತ್ತರಿಸಲಿದ್ದಾರೆ ಎಂದು ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ …

ಇನ್ನೆರಡು ವರ್ಷ ಜಲಪ್ರಳಯ, 5 ವರ್ಷಗಳ ತನಕ ಕೋರೋನಾ ಕಂಟಕ ಖಚಿತ | ನಿಜವಾಗಲಿದೆಯೇ ಕೋಡಿ ಸ್ವಾಮಿ ನುಡಿದ ಭವಿಷ್ಯ ?! Read More »

error: Content is protected !!
Scroll to Top