ಮಂಗಳೂರು : ಹೋಮ್ ನರ್ಸ್ ನಾಪತ್ತೆ | ಊರಿಗೆ ಹೋಗುತ್ತೇನೆ ಎಂದವರ ಮೊಬೈಲ್ ಸ್ವಿಚ್‌ಆಫ್

ಮಂಗಳೂರು: ನಂದಿಗುಡ್ಡೆಯ ‘ವಿ ಕೇರ್ ನರ್ಸಿಂಗ್ ಹೋಮ್ ಪಿಜಿ’ಯಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಯುವತಿ ಯೊಬ್ಬರು ನಾಪತ್ತೆಯಾದ ಘಟನೆ ನಡೆದಿದೆ.

ಪಂಜಾಬ್ ಮೂಲದ ಲಿಶ್ಚ (21) ನಾಪತ್ತೆಯಾದ ಯುವತಿ ಎಂದು ತಿಳಿದುಬಂದಿದೆ.

ಕೇರ್ ನರ್ಸಿಂಗ್ ಹೋಮ್ ಪಿಜಿ’ಯಲ್ಲಿ ಕೆಲಸ ಮಾಡುತ್ತಾ ಅದೇ ಪಿಜಿಯಲ್ಲಿ ನೆಲೆಸಿದ್ದರು. ಈಕೆಗೆ ಜ್ವರ ಬಂದ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದರು. ಆ.17ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಊರಿಗೆ ಹೋಗಿ ಬರುವುದಾಗಿ ಪಿಜಿ ಮಾಲಕರಿಗೆ ತಿಳಿಸಿದ ಯುವತಿ ನಾಪತ್ತೆಯಾಗಿದ್ದಾರೆ.

ಮರುದಿನ (ಆ.18) ಬೆಳಗ್ಗೆ 9 ಗಂಟೆ ಸುಮಾರಿಗೆ ಯುವತಿಯ ತಾಯಿ ಮಂಜಿತ್ ಅವರು ಲಿಶ್ಚ ಅವರಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್‌ಆಫ್ ಎಂದು ಬಂದಿದೆ. ನಂತರ ಪಿಜಿ ಮಾಲಕರು ಹಾಗೂ ಪರಿಚಯಸ್ಥರಲ್ಲಿ ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚಹರೆ: 5.3 ಅಡಿ ಎತ್ತರ, ಪಿಜಿಯಿಂದ ಯುವತಿ ತೆರಳುವ ಸಂದರ್ಭ ನೀಲಿ ಬಣ್ಣದ ಜೀನ್ಸ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿದ್ದರು. ಹಿಂದಿ, ಪಂಜಾಬಿ ಮಾತನಾಡುತ್ತಾರೆ.

ನಾಪತ್ತೆಯಾದ ಯುವತಿಯ ಬಗ್ಗೆ ತಿಳಿದುಬಂದಲ್ಲಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆ (0824 2220518, 9480805339 )ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Leave A Reply

Your email address will not be published.