ಆಲಂಕಾರು : ಕಡಬ ಎಸೈ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ | ಮಾಸ್ಕ್ ಧರಿಸದ ವ್ಯಕ್ತಿಗೆ ದಂಡ,ಕೆಟ್ಟ ಪದ ಬಳಕೆ ಆರೋಪ

ಕಡಬ : ಆಲಂಕಾರು ಗಸ್ತಿನಲ್ಲಿದ್ದ ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ಅವರು ಮಾಸ್ಕ್ ಧರಿಸದ ವ್ಯಕ್ತಿಯೊಬ್ಬರಿಗೆ ದಂಡ ವಿಧಿಸಿದ್ದು ,ಈ ವೇಳೆ ಎಸೈ ಅವರು ಅವಾಚ್ಯ ಪದ ಬಳಕೆ ಮಾಡಿದರೆಂದು ಆರೋಪಿಸಿ ಮಾತಿನ ಚಕಮಕಿ ನಡೆದ ಘಟನೆ ಆ 31ರಂದು ಸಂಜೆ ನಡೆದಿದೆ.

ಎಸ್.ಐ ಮತ್ತು ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರಿದ್ದರು.

ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಈ ವೀಡಿಯೋದಲ್ಲಿ ಪೊಲೀಸರು ಕೆಟ್ಟ ಪದ ಬಳಕೆ ಮಾಡಿದರೆಂದು ವ್ಯಕ್ತಿಯೊಬ್ಬರು ಹೇಳುತ್ತಿರುವ ವಿಚಾರವೂ ಉಲ್ಲೇಖಗೊಂಡಿದೆ.

ಸಾರ್ವಜನಿಕರು ಈ ವೇಳೆ ಸೇರಿದಾಗ ಎಸ್.ಐ ಮನವರಿಕೆ ಮಾಡಿದ್ದು ಬಳಿಕ ಪರಿಸ್ಥಿತಿ ಶಾಂತಗೊಂಡಿತ್ತು.

Leave A Reply

Your email address will not be published.