ಅತ್ಯಾಚಾರ ಪ್ರಕರಣದ ಆರೋಪಿ 2.5 ವರ್ಷದ ಬಳಿಕ ಬಂಧನ | ಪೊಲೀಸರನ್ನು ಯಾಮಾರಿಸುತ್ತಿದ್ದ ಪುತ್ತೂರಿನ ಯುವಕ OLXನಲ್ಲಿ ಸಿಕ್ಕಿ ಬಿದ್ದ

ಸುಮಾರು ಎರಡೂವರೆ ವರ್ಷಗಳ ಹಿಂದೆ ಕೇರಳದ ಕಾಕ್ಕನಾಡ್ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ದಕ್ಷಿಣ ಕನ್ನಡದ ಪುತ್ತೂರು ಮೂಲದ ಪ್ರವೀಣ್ ಎಂಬಾತನನ್ನು ಕೇರಳ ಪೊಲೀಸರು OLX ಮೂಲಕ ಬಂಧಿಸಿದ್ದಾರೆ.

ಅದು ಹೇಗೆಂದು ಹುಬ್ಬೇರಿಸುತ್ತೀರಾ..ಇಲ್ಲಿದೆ ಡಿಟೇಲ್ಸ್ ಆರೋಪಿ ಪ್ರವೀಣ್ ಯುವತಿಯ ಅತ್ಯಾಚಾರ ನಡೆಸಿದ ಕಳೆದ ಎರಡೂವರೆ ವರ್ಷಗಳಿಂದ ಪೊಲೀಸರನ್ನು ಯಾಮಾರಿಸಿ ಅಲೆದಾಡುತ್ತಿದ್ದ.

ಪೊಲೀಸರು ಎಷ್ಟೇ ಶ್ರಮಿಸಿದರೂ ಆತ ಸಿಗಲೇ ಇಲ್ಲ.ಕೇರಳ ಪೊಲೀಸರಿಗೆ ಸಹಾಯ ಮಾಡಿದ್ದು ವಾಹನಗಳ ಮಾರಾಟ ಜಾಲತಾಣ OLX.

2019ರಲ್ಲಿ ಪ್ರವೀಣ್ ಕೇರಳದ ಚೊಟ್ಟಾನಿಕ್ಕರೆ ಭಗವತಿ ದೇವಸ್ಥಾನದಲ್ಲಿದ್ದ ಸಂದರ್ಭದಲ್ಲಿ ಆತ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ.ಈ ಪ್ರೀತಿಯ ಕಾರಣದಿಂದ ಇಬ್ಬರೂ ಲೀವಿನ್ ರಿಲೇಶನ್ ಶಿಪ್ ನಲ್ಲಿ ಒಂದೇ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.

ಯುವತಿಯು ಪ್ರವೀಣ್ ಜತೆ ತಾನು ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದುದಾಗಿ ಹೇಳಿದ್ದಳು. ಆದರೆ ವಾಸ್ತವದಲ್ಲಿ ಆಕೆ ನಿರುದ್ಯೋಗಿಯಾಗಿದ್ದಳು.

ಈ ವಿಚಾರ ತಡವಾಗಿ ಪ್ರವೀಣ್ ಗೆ ತಿಳಿಯಿತು. ಈ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದು ಅವರಿಬ್ಬರ ಸಂಬಂಧ ಮುರಿದು ಬಿದ್ದಿತ್ತು. ನಂತರ ಯುವತಿಯು ಪ್ರವೀಣನ ಮೇಲೆ ಅತ್ಯಾಚಾರ ಲೈಂಗಿಕ ದೌರ್ಜನ್ಯ ಕುರಿತು ದೂರು ದಾಖಲಿಸಿದ್ದಳು.

ಆದರೆ ಆರೋಪಿ ಪ್ರವೀಣ್ ಪತ್ತೆಗಾಗಿ ಕೇರಳದ ಪೊಲೀಸರು ಹರಸಾಹಸ ಪಟ್ಟರೂ ಆತನನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಈತನ್ಮದ್ಯೆ ಈತ ತನ್ನ ಕಾರನ್ನು OLXನಲ್ಲಿ ಮಾರಾಟಕ್ಕಿಟ್ಟಿದ್ದಾನೆ.

ಇದು ಪೊಲೀಸರಿಗೆ ತಿಳಿದು ಅವರು,ಗ್ರಾಹಕರ ಸೋಗಿನಲ್ಲಿ ವ್ಯವಹಾರ ಕುದುರಿಸಿದರು. ಕಾರು ಕೊಳ್ಳುವ ನೆಪದಲ್ಲಿ ಬಂದು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

Leave A Reply

Your email address will not be published.