ಪಕ್ಕದ ಬಾರ್‌ಗೆ ಬಿಯರ್ ಕುಡಿಯಲು ಹೋಗುತ್ತಾನೆಂದು ಯುವಕನಿಗೆ ಹಲ್ಲೆ | ವೈನ್ ಶಾಪ್ ಮಾಲಕ ಸಹಿತ ಮೂವರ ವಿರುದ್ಧ ಪ್ರಕರಣ

ಪಕ್ಕದ ಬಾರ್ ಗೆ ಬಿಯರ್ ಕುಡಿಯಲು ಹೋಗುತ್ತಾನೆ ಎಂದು ವ್ಯಕ್ತಿಯೊಬ್ಬರಿಗೆ ಮೂರು ಜನ ಹಲ್ಲೆ ನಡೆಸಿರುವ ಘಟನೆ ಸಿದ್ಧಕಟ್ಟೆಯಲ್ಲಿ ಆ.30 ರಂದು ನಡೆದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಗಬೆಟ್ಟು ಗ್ರಾಮದ ಆರಂಬೋಡಿ ನಿವಾಸಿ ಬಾಲರಾಜ್(26) ದೂರುದಾರಾಗಿದ್ದಾರೆ. ಆರೋಪಿಗಳನ್ನು ಗಣೇಶ್ ಸಲೂನ್, ನಾಮಸಂತು, ವೈನ್ ಶಾಪ್ ಮಾಲಕ ಭೋಜಶೆಟ್ಟಿ ಎಂದು ಗುರುತಿಸಲಾಗಿದೆ.

ಬಾಲರಾಜ್ ರವರು ಆ.30 ರಂದು ರಾಮಚಂದ್ರ ಮತ್ತು ಯಶೋಧರ(ಕುಟ್ಟಿ ಶೆಟ್ಟಿ) ಯವರೊಂದಿಗೆ ಸಿದ್ಧಕಟ್ಟೆಯಲ್ಲಿರುವ ನವರಂಗ ವೈನ್ ಶಾಪ್ ಗೆ ಹೋಗಿ ಬಿಯರ್ ಕುಡಿಯುತ್ತಿರುವ ವೇಳೆ ವೈನ್ ಶಾಪ್ ಮಾಲಕ ಭೋಜ ಶೆಟ್ಟಿ, ನಾಮ ಸಂತು, ಗಣೇಶ್ ಸೆಲೂನ್ ರವರು ಬಂದು ಬಾಲರಾಜ್ ರವರಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು, ಕೆನ್ನೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ, ಅವಾಚ್ಯ ಶಬ್ದಗಳಿಂದ ಬೈದು ನಿಮಗೆ ಬುದ್ದಿ ಕಲಿಸುತ್ತೇವೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ದೂರಿನಲ್ಲಿ ಬಾಲರಾಜ್ ತಿಳಿಸಿದ್ದಾರೆ.

ಪಕ್ಕದಲ್ಲಿರುವ ರೇಷ್ಮಾ ಬಾರ್ ಗೆ ಬಿಯರ್ ಕುಡಿಯಲು ಹೋಗುತ್ತಿರುವ ದ್ವೇಷದಿಂದಾಗಿ ಆರೋಪಿಗಳು ಈ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಕ್ರ: 99/2021, ಕಲಂ 504,323,324,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

Leave A Reply

Your email address will not be published.