Day: August 4, 2021

ಪರ್ಲಡ್ಕ ಸ.ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿಗೆ ಅಧ್ಯಕ್ಷರಾಗಿ ಸುಚಿತ್ರಾ, ಉಪಾಧ್ಯಕ್ಷರಾಗಿ ಉದಯ ಆಯ್ಕೆ

ಪುತ್ತೂರು: ಪರ್ಲಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ನೂತನ ಶಾಲಾಭಿವೃದ್ದಿ ಸಮಿತಿ ರಚನೆಗಾಗಿ ಪೋಷಕರ ಸಭೆಯು ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರ ಉಪಸ್ಥಿತಿಯಲ್ಲಿ ನಡೆಯಿತು. ಶಾಲಾ ಮುಖ್ಯಗುರು ಮನೋರಮಾ ಕೆ.ಅವರು ಎಸ್.ಡಿ.ಎಂ.ಸಿ ರಚನೆಯ ಪ್ರಕ್ರಿಯೆ ಹಾಗೂ ಸದಸ್ಯರ ಆಯ್ಕೆ ನಡೆಸಲಾಯಿತು.ಸಮಿತಿಗೆ18 ಸದಸ್ಯರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಸುಚಿತ್ರಾ,ಉಪಾಧ್ಯಕ್ಷರಾಗಿ ಉದಯ ಅವರನ್ನು ಆಯ್ಕೆ ಮಾಡಲಾಯಿತು.ನೂತನ ಸದಸ್ಯರಾಗಿ ಸೀತಾಲಕ್ಷ್ಮೀ,ರತ್ನಾವತಿ,ದಿವ್ಯಾ,ಗೀತಾ,ಸರ್ವಾಣಿ,ಶಹನಾಝ್,ರಮೀಝ,ಸಿದ್ದಪ್ಪ ಗೋವಿಂದಪ್ಪ ಕೋಲಕಾರ,ಸುಜಾತ,ಶ್ರೀಧರ ಪೂಜಾರಿ, ಪ್ರೇಮಾ,ಸುನಿತಾ,ಸೌಮ್ಯ, ರೇಖಾ,ರಾಜೀವಿ ಗೌಡ, ರಮೇಶ್ ಗೌಡ ಅವರನ್ನು ಆಯ್ಕೆಮಾಡಲಾಯಿತು. ಶಾಲಾ ಶಿಕ್ಷಕಿ ವತ್ಸಲಾ ಬಿ.ಅವರು …

ಪರ್ಲಡ್ಕ ಸ.ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿಗೆ ಅಧ್ಯಕ್ಷರಾಗಿ ಸುಚಿತ್ರಾ, ಉಪಾಧ್ಯಕ್ಷರಾಗಿ ಉದಯ ಆಯ್ಕೆ Read More »

ಮಹಿಳೆಯ ಖಾಸಗಿ ಫೋಟೋಗಳನ್ನು ವೈರಲ್ ಮಾಡಿದ ಯುವಕ | ಆರೋಪಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

ಮಹಿಳೆಯ ಖಾಸಗಿ ಫೋಟೊಗಳನ್ನು ಇಟ್ಟುಕೊಂಡು ಲೈಂಗಿಕ ದೌರ್ಜನ್ಯ ನೀಡಿ, ಕೊನೆಗೆ ನಗ್ನ ಚಿತ್ರಗಳನ್ನು ಹರಿಯಬಿಟ್ಟ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೂಡುಬಿದಿರೆಯ ಒಬ್ಬೆಟ್ಟು ಪಲ್ಕೆ ಕೂಡ್ಯಡ್ಕ ನಿವಾಸಿ ವಿಜಯಗೌಡ (33) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿಗಾರರರೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಮಹಿಳೆಯ ಮೊಬೈಲ್ ನಂಬರ್‌ನ್ನು ಪಡೆದು ಆಗಾಗ ಕರೆ ಮಾಡಿ, ಅಸಭ್ಯವಾಗಿ ವರ್ತಿಸುತ್ತಿದ್ದ. ವಾಟ್ಸ್ಆ್ಯಪ್ ಮೆಸೇಜ್, ಕಾಲ್ ಮಾಡಿ ಮಹಿಳೆಯಲ್ಲಿ ನಗ್ನ ಚಿತ್ರಗಳನ್ನು ಕಳುಹಿಸುವಂತೆ ಪೀಡಿಸುತ್ತಿದ್ದ. ಮಹಿಳೆಯು ತನ್ನ ನಗ್ನ ಚಿತ್ರಗಳನ್ನು ಕಳುಹಿಸಲು …

ಮಹಿಳೆಯ ಖಾಸಗಿ ಫೋಟೋಗಳನ್ನು ವೈರಲ್ ಮಾಡಿದ ಯುವಕ | ಆರೋಪಿಯನ್ನು ಬಂಧಿಸಿದ ಮಂಗಳೂರು ಪೊಲೀಸರು Read More »

ಒಲಿಂಪಿಕ್ ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ಬಲ್ಗೇರಿಯಾದ ಆಟಗಾರನನ್ನು ನೆಲಕ್ಕೆ ಕೆಡವಿ ಫೈನಲ್ ಪ್ರವೇಶಿಸಿದ ರವಿ ದಹಿಯಾ

ಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿ ಪಂದ್ಯಾಟದಲ್ಲಿ ರವಿ ದಹಿಯಾ ಫೈನಲ್ ಪ್ರವೇಶಿಸಿದ್ದಾರೆ. ಹಾಗಾಗಿ ಭಾರತಕ್ಕೆ ಮತ್ತೊಂದು ಪದಕ ಖಚಿತಗೊಂಡಿದೆ. ಇಂದು ನಡೆದ ಪುರುಷರ ಫ್ರೀಸ್ಟೈಲ್ 57 ಕೆಜಿ ಕುಸ್ತಿ ಸೆಮಿಫೈನಲ್‍ನಲ್ಲಿ ಬಲ್ಗೇರಿಯಾದ ಜಾರ್ಜಿ ವಾಂಗೆಲೋವ್ ವಿರುದ್ಧ ರವಿ ದಹಿಯಾ ಜಯಗಳಿಸಿದ್ದಾರೆ. ಫೈನಲ್‍ನಲ್ಲಿ ಅವರು ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ಅವರನ್ನು ಎದುರಿಸಲಿದ್ದಾರೆ. ಇಂದು ನಡೆದ ಬಾಕ್ಸಿಂಗ್ ಸ್ಪರ್ಧೆಯ 69 ಕೆಜಿ ವಿಭಾಗದಲ್ಲಿ ಟರ್ಕಿಯ ಬುಸೆನಾಜ್ ಸುರ್ ಮನೇಲಿ ವಿರುದ್ಧ ಲವ್ಲೀನಾ 0-5 ಅಂಕಗಳಿಂದ ಸೋತಿದ್ದರು. ಈ ಪಂದ್ಯ ಸೋತರೂ ಬಾಕ್ಸಿಂಗ್ …

ಒಲಿಂಪಿಕ್ ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ಬಲ್ಗೇರಿಯಾದ ಆಟಗಾರನನ್ನು ನೆಲಕ್ಕೆ ಕೆಡವಿ ಫೈನಲ್ ಪ್ರವೇಶಿಸಿದ ರವಿ ದಹಿಯಾ Read More »

ದಕ್ಷಿಣ ಕನ್ನಡ | ಧರ್ಮಸ್ಥಳ, ಕುಕ್ಕೆ ಮತ್ತು ಕಟೀಲು ದೇವಾಲಯಗಳಿಗೆ ವಾರಾಂತ್ಯದಲ್ಲಿ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ದೈನಂದಿನ ಪ್ರಕರಣದಲ್ಲಿ ಮತ್ತೆ ಏರಿಕೆಯಾಗುತ್ತಿರುವ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಇಂದಿನಿಂದ ಆ.15ರವರೆಗೆ ವಾರಂತ್ಯದಲ್ಲಿ‌ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದೇವಸ್ಥಾನಗಳಿಗೆ ಭಕ್ತಾದಿಗಳ ಪ್ರವೇಶ ಹಾಗೂ ವಸತಿಗೃಹದಲ್ಲಿ ತಂಗುವುದನ್ನು ಸಂಪೂರ್ಣ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ದಕ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 5.26ಕ್ಕೆ ಏರಿಕೆಯಾಗಿದೆ. ಈ ನಡುವೆ ಲಾಕ್ ಡೌನ್ ಸಡಿಲಿಕೆಯ ಬಳಿಕ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ, ಕರಾವಳಿಯ ಪ್ರತಿಷ್ಟಿತ ದೇವಸ್ಥಾನಗಳಾದ ಕಟೀಲು ಶ್ರೀ …

ದಕ್ಷಿಣ ಕನ್ನಡ | ಧರ್ಮಸ್ಥಳ, ಕುಕ್ಕೆ ಮತ್ತು ಕಟೀಲು ದೇವಾಲಯಗಳಿಗೆ ವಾರಾಂತ್ಯದಲ್ಲಿ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ Read More »

2016ರ ಮರಳು ನೀತಿಯನ್ನೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು

ಸರಕಾರ ಜಾರಿಗೆ ತಂದಿರುವ ನೂತನ ಮರಳು ನೀತಿಯಲ್ಲಿ ಬದಲಾವಣೆ ತರದೆ 2016ರ ಮರಳು ನೀತಿಯನ್ನೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು ನೀಡಿದೆ ಎಂದು ಮರಳು ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಮೆದು ಅವರು ತಿಳಿಸಿದ್ದಾರೆ. ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಮರಳುಗುತ್ತಿಗೆದಾರರ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ದ.ಕ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿ ಗುರುತಿಸಲಾದ ೩೦ ಹೊಸ ೧೭ ಹಳೆಯ ಒಟ್ಟು ೪೭ ಮರಳು ಬ್ಲಾಕ್‌ಗಳಲ್ಲಿ ಸಾಂಪ್ರದಾಯಿಕ …

2016ರ ಮರಳು ನೀತಿಯನ್ನೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು Read More »

ಆ.8 ರಂದು ನಡೆಯಲಿದ್ದ ಕ್ಯಾಂಪ್ಕೋ ಉದ್ಯೋಗ ಲಿಖಿತ ಪರೀಕ್ಷೆ ಮುಂದೂಡಿಕೆ

ಕ್ಯಾಂಪ್ಕೋ ಸಂಸ್ಥೆಯು 03/03/2021 ಮತ್ತು 17/04/2021 ರಂದು ಪ್ರಕಟಿಸಿದ ಅಧಿಸೂಚನೆಯ ಪ್ರಕಾರ, ಜೂನಿಯರ್ ಸಹಾಯಕ ಕಾರ್ಯನಿರ್ವಾಹಕ (ಎ / ಎಂ), ಜೂನಿಯರ್ ಗ್ರೇಡರ್, ಕಾರ್ಯನಿರ್ವಾಹಕ ಅಧಿಕಾರಿ ಎಚ್‌ಆರ್‌ಡಿ, ಕಾನೂನು ಅಧಿಕಾರಿ -ಐವಿ, ಸಹಾಯಕ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಜೂನಿಯರ್ ಎಂಜಿನಿಯರ್ ಗ್ರೇಡ್ – II ಗೆ ಲಿಖಿತ ಪರೀಕ್ಷೆ ದಿನಾಂಕ 08/08/2021 ರಂದು ಮಂಗಳೂರಿನಲ್ಲಿ ನಿಗದಿಯಾಗಿತ್ತು. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಕಾರಣದಿಂದ ಆ.8 ರಂದು ನಡೆಯಲಿದ್ದ ಪರೀಕ್ಷೆ ಮುಂದೂಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಂಡ ಅದೃಷ್ಟಶಾಲಿಗಳು ಇವರೇ ನೋಡಿ !

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ 29 ಮಂದಿ ಶಾಸಕರು ಇಂದು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯಾಹ್ನ 2:15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶಾಸಕರಿಗೆ ಪ್ರಮಾಣವಚನ ಬೋಧಿಸಿದರು. ನೂತನ ಸಚಿವರುಗಳ ಪಟ್ಟಿ ಇಂತಿದೆ : *ಗೋವಿಂದ ಕಾರಜೋಳ (ಮುಧೋಳ) *ಕೆ.ಎಸ್.ಈಶ್ವರಪ್ಪ (ಶಿವಮೊಗ್ಗ)*ಆರ್.ಅಶೋಕ್ (ಪದ್ಮನಾಭನಗರ)*ಶ್ರೀರಾಮುಲು (ಮೊಳಕಾಲ್ಮೂರು)*ಸೋಮಣ್ಣ (ಗೋವಿಂದರಾಜನಗರ)*ಉಮೇಶ್ ಕತ್ತಿ (ಹುಕ್ಕೇರಿ)*ಮಧುಸ್ವಾಮಿ (ಚಿಕ್ಕನಾಯಕನಹಳ್ಳಿ)*ಅರಗ ಜ್ಞಾನೇಂದ್ರ (ತೀರ್ಥಹಳ್ಳಿ)*ಡಾ.ಸಿ.ಎನ್.ಅಶ್ವತ್ಥ ನಾರಾಯಣ (ಮಲ್ಲೇಶ್ವರ)*ಬಿ.ಸಿ ಪಾಟೀಲ್ (ಹಿರೇಕೆರೂರು) *ಎಸ್.ಟಿ.ಸೋಮಶೇಖರ್ (ಯಶವಂತಪುರ) *ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ)*ಬೈರತಿ ಬಸವರಾಜ (ಕೆಆರ್ …

ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಂಡ ಅದೃಷ್ಟಶಾಲಿಗಳು ಇವರೇ ನೋಡಿ ! Read More »

ಮಹಿಳಾ ಬಾಕ್ಸಿಂಗ್ ವೆಲ್ಟರ್ ವೇಯ್ಟ್ ನಲ್ಲಿ ಸೋತರೂ ಕಂಚಿಗೆ ಕೊರಳೊಡ್ಡಿದ ಲವ್ಲಿ ಲವ್ಲಿನಾ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇಂದು ನಡೆದ ಮಹಿಳೆಯರ ಬಾಕ್ಸಿಂಗ್ ವೆಲ್ಟರ್‌ವೇಯ್ಟ್ ಕ್ಯಾಟಗರಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಪರಾಜಯ ಅನುಭವಿಸಿದರೂ, ಭಾರತಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಬಾಕ್ಸಿಂಗ್ ಕ್ಷೇತ್ರದಲ್ಲಿ ಭಾರತಕ್ಕೆ ಲಭಿಸಿರುವ ಈವರೆಗಿನ ಮೂರನೇ ಪದಕವಾಗಿದ್ದು, ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಒಟ್ಟಾರೆಯಾಗಿ ಲಭಿಸಿರುವ ಮೂರನೇ ಪದಕ ಕೂಡ ಆಗಿದೆ. ಇಂದು ನಡೆದ ಸೆಮಿಫೈನಲ್ಸ್‌ನಲ್ಲಿ ವರ್ಲ್ಡ್ ಚ್ಯಾಂಪಿಯನ್ ಆದ ಟರ್ಕಿಯ ಬುಸೆನಾಜ್ ಸೂರ್ಮೆನೆಲಿ ಅವರನ್ನು ಎದುರಿಸಿದ ಲವ್ಲಿನಾ, 0:5 ಸ್ಕೋರ್‌ನೊಂದಿಗೆ ಸೋಲನುಭವಿಸಿದರು. ಮೂರು ಸುತ್ತುಗಳ ಪಂದ್ಯದಲ್ಲಿ …

ಮಹಿಳಾ ಬಾಕ್ಸಿಂಗ್ ವೆಲ್ಟರ್ ವೇಯ್ಟ್ ನಲ್ಲಿ ಸೋತರೂ ಕಂಚಿಗೆ ಕೊರಳೊಡ್ಡಿದ ಲವ್ಲಿ ಲವ್ಲಿನಾ Read More »

ಅವಿಭಜಿತ ದ.ಕ.ಜಿಲ್ಲೆಗೆ 2 ಸಚಿವ ಸ್ಥಾನ

ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು,ಅವಿಭಜಿತ ದ.ಕ.ಜಿಲ್ಲೆಗೆ ಎರಡು ಮಂತ್ರಿ ಸ್ಥಾನ ಪಕ್ಕಾ ಆಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಸ್ ಅಂಗಾರ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಬಹುತೇಕ ಖಚಿತವಾಗಿದೆ. ಸಂಭಾವ್ಯ ಸಚಿವರುಗಳ ಖಾತೆಗಳ ಪಟ್ಟಿ ಇಂತಿದೆ: ಸಿಎಂ- ಹಣಕಾಸು, ಆಡಳಿತ ಸುಧಾರಣೆ ಆರ್. ಅಶೋಕ್- ಗೃಹ ಖಾತೆ ಮಾಧುಸ್ವಾಮಿ- …

ಅವಿಭಜಿತ ದ.ಕ.ಜಿಲ್ಲೆಗೆ 2 ಸಚಿವ ಸ್ಥಾನ Read More »

ಪುತ್ತೂರು ತಾಲೂಕು ಯುವ ಮೋರ್ಚಾದ ಕಾರ್ಯದರ್ಶಿಯಾಗಿ ಯುವ ನಾಯಕ ಚಂದ್ರಹಾಸ ಈಶ್ವರಮಂಗಲ ಆಯ್ಕೆ

ಪುತ್ತೂರು ತಾಲೂಕು ಬಿಜೆಪಿ ಯುವ ಮೋರ್ಚಾ ದ ಕಾರ್ಯದರ್ಶಿಯಾಗಿ ಯುವ ನಾಯಕ, ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯತ್ ಸದಸ್ಯ, ಚಂದ್ರಹಾಸ ಈಶ್ವರಮಂಗಲ ಆಯ್ಕೆಯಾಗಿದ್ದಾರೆ. ಅನೇಕ ಜನಪರ ಕೆಲಸ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಗ್ರಾಮದೆಲ್ಲೆಡೆ ಗ್ರಾಮದ ಜನರ ಹಿತಕ್ಕಾಗಿ ರಾತ್ರಿ ಹಗಲೆನ್ನದೆ ದುಡಿಯುವ ಯುವ ನಾಯಕ ಕಳೆದ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಧಿಕ ಮತಗಳನ್ನು ಹಿಡಿದು ಗೆಲುವು ಸಾಧಿಸಿದ್ದರು. ನೆಟ್ಟಣಿಗೆ ಮೂಡ್ನೂರು ಗ್ರಾಮದ ನಿವಾಸಿ ದಾಮೋದರ ಡಿ ಹಾಗೂ ಗೀತಾ ದಂಪತಿಯ ಪುತ್ರರಾಗಿರುವ ಚಂದ್ರಹಾಸ ಅವರು …

ಪುತ್ತೂರು ತಾಲೂಕು ಯುವ ಮೋರ್ಚಾದ ಕಾರ್ಯದರ್ಶಿಯಾಗಿ ಯುವ ನಾಯಕ ಚಂದ್ರಹಾಸ ಈಶ್ವರಮಂಗಲ ಆಯ್ಕೆ Read More »

error: Content is protected !!
Scroll to Top