ಒಲಿಂಪಿಕ್ ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ಬಲ್ಗೇರಿಯಾದ ಆಟಗಾರನನ್ನು ನೆಲಕ್ಕೆ ಕೆಡವಿ ಫೈನಲ್ ಪ್ರವೇಶಿಸಿದ ರವಿ ದಹಿಯಾ

ಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿ ಪಂದ್ಯಾಟದಲ್ಲಿ ರವಿ ದಹಿಯಾ ಫೈನಲ್ ಪ್ರವೇಶಿಸಿದ್ದಾರೆ. ಹಾಗಾಗಿ ಭಾರತಕ್ಕೆ ಮತ್ತೊಂದು ಪದಕ ಖಚಿತಗೊಂಡಿದೆ.

ಇಂದು ನಡೆದ ಪುರುಷರ ಫ್ರೀಸ್ಟೈಲ್ 57 ಕೆಜಿ ಕುಸ್ತಿ ಸೆಮಿಫೈನಲ್‍ನಲ್ಲಿ ಬಲ್ಗೇರಿಯಾದ ಜಾರ್ಜಿ ವಾಂಗೆಲೋವ್ ವಿರುದ್ಧ ರವಿ ದಹಿಯಾ ಜಯಗಳಿಸಿದ್ದಾರೆ. ಫೈನಲ್‍ನಲ್ಲಿ ಅವರು ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ಅವರನ್ನು ಎದುರಿಸಲಿದ್ದಾರೆ.

ಇಂದು ನಡೆದ ಬಾಕ್ಸಿಂಗ್ ಸ್ಪರ್ಧೆಯ 69 ಕೆಜಿ ವಿಭಾಗದಲ್ಲಿ ಟರ್ಕಿಯ ಬುಸೆನಾಜ್ ಸುರ್ ಮನೇಲಿ ವಿರುದ್ಧ ಲವ್ಲೀನಾ 0-5 ಅಂಕಗಳಿಂದ ಸೋತಿದ್ದರು. ಈ ಪಂದ್ಯ ಸೋತರೂ ಬಾಕ್ಸಿಂಗ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಎಲ್ಲ ಸ್ಪರ್ಧಿಗಳಿಗೆ ಪದಕ ನೀಡುವ ಕಾರಣ ಲವ್ಲೀನಾ ಕಂಚಿನ ಪದಕಕ್ಕೆ ಪಾತ್ರರಾಗಿದ್ದಾರೆ.

Ad Widget
Ad Widget

Ad Widget

Ad Widget

ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕವನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 62ನೇ ಸ್ಥಾನದಲ್ಲಿದೆ.

Leave a Reply

error: Content is protected !!
Scroll to Top
%d bloggers like this: