ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಂಡ ಅದೃಷ್ಟಶಾಲಿಗಳು ಇವರೇ ನೋಡಿ !

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ 29 ಮಂದಿ ಶಾಸಕರು ಇಂದು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಸಚಿವರುಗಳು

ಮಧ್ಯಾಹ್ನ 2:15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶಾಸಕರಿಗೆ ಪ್ರಮಾಣವಚನ ಬೋಧಿಸಿದರು.

ನೂತನ ಸಚಿವರುಗಳ ಪಟ್ಟಿ ಇಂತಿದೆ :

*ಗೋವಿಂದ ಕಾರಜೋಳ (ಮುಧೋಳ) *ಕೆ.ಎಸ್.ಈಶ್ವರಪ್ಪ (ಶಿವಮೊಗ್ಗ)
*ಆರ್.ಅಶೋಕ್ (ಪದ್ಮನಾಭನಗರ)
*ಶ್ರೀರಾಮುಲು (ಮೊಳಕಾಲ್ಮೂರು)
*ಸೋಮಣ್ಣ (ಗೋವಿಂದರಾಜನಗರ)
*ಉಮೇಶ್ ಕತ್ತಿ (ಹುಕ್ಕೇರಿ)
*ಮಧುಸ್ವಾಮಿ (ಚಿಕ್ಕನಾಯಕನಹಳ್ಳಿ)
*ಅರಗ ಜ್ಞಾನೇಂದ್ರ (ತೀರ್ಥಹಳ್ಳಿ)
*ಡಾ.ಸಿ.ಎನ್.ಅಶ್ವತ್ಥ ನಾರಾಯಣ (ಮಲ್ಲೇಶ್ವರ)
*ಬಿ.ಸಿ ಪಾಟೀಲ್ (ಹಿರೇಕೆರೂರು) *ಎಸ್.ಟಿ.ಸೋಮಶೇಖರ್ (ಯಶವಂತಪುರ) *ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ)
*ಬೈರತಿ ಬಸವರಾಜ (ಕೆಆರ್ ಪುರಂ)
*ಮುರುಗೇಶ್ ನಿರಾಣಿ (ಬೀಳಗಿ)
*ಶಿವರಾಂ ಹೆಬ್ಬಾರ್ (ಯಲ್ಲಾಪುರ)
*ಶಶಿಕಲಾ ಜೊಲ್ಲೆ (ನಿಪ್ಪಾಣಿ)
*ಕೆ.ಸಿ ನಾರಾಯಣಗೌಡ (ಕೆಆರ್ ಪೇಟೆ)
*ಸುನೀಲ್ ಕುಮಾರ್ (ಕಾರ್ಕಳ)
*ಮುನಿರತ್ನ (ಆರ್ ಆರ್ ನಗರ)
*ಎಂಟಿಬಿ ನಾಗರಾಜ್ (ಎಂಎಲ್‍ಸಿ)
*ಕೆ. ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್)
*ಹಾಲಪ್ಪ ಆಚಾರ್ (ಯಲ್ಬುರ್ಗ)
*ಶಂಕರ್ ಪಾಟೀಲ್ ಮುನೇನಕೊಪ್ಪ (ನವಲುಗುಂದ) *ಕೋಟಾ ಶ್ರೀನಿವಾಸ ಪೂಜಾರಿ (ಎಂಎಲ್‍ಸಿ)
*ಪ್ರಭು ಚೌವ್ಹಾಣ್ (ಔರಾದ್)
*ಎಸ್ ಅಂಗಾರ (ಸುಳ್ಯ)
*ಆನಂದ್ ಸಿಂಗ್ (ಹೊಸಪೇಟೆ)
*ಸಿ.ಸಿ.ಪಾಟೀಲ್ (ನರಗುಂದ)
*ಬಿ.ಸಿ.ನಾಗೇಶ್(ತಿಪಟೂರು)

ಮೂರು ದಿನಗಳಿಂದ ದೆಹಲಿಯಲ್ಲಿಯೇ ಉಳಿದುಕೊಂಡಿದ್ದ ಸಿಎಂ ಬೊಮ್ಮಾಯಿ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಎಲ್ಲರಿಗೂ ಶುಭ ಕೋರಿದರು.

ಈ ಬಾರಿ ಯಾವುದೇ ಡಿಸಿಎಂ ಹುದ್ದೆ ಸೃಷ್ಟಿಗೆ ಬಿಜೆಪಿ ಹೈಕಮಾಂಡ್ ಮುಂದಾಗಿಲ್ಲ. 8 ಲಿಂಗಾಯತ, 7 ಒಕ್ಕಲಿಗ, 7 ಒಬಿಸಿ, 3 ದಲಿತ, 3 ಎಸ್.ಸಿ., 1 ಎಸ್.ಟಿ ಮತ್ತು ಮಹಿಳೆ ಶಾಸಕಿಗೂ ಸ್ಥಾನ ನೀಡಲಾಗಿದೆ ಎಂದು ಈ ಸಂದರ್ಭದಲ್ಲಿ ಸಿಎಂ ತಿಳಿಸಿದ್ದರು.

Leave A Reply

Your email address will not be published.