ಪುತ್ತೂರು ತಾಲೂಕು ಯುವ ಮೋರ್ಚಾದ ಕಾರ್ಯದರ್ಶಿಯಾಗಿ ಯುವ ನಾಯಕ ಚಂದ್ರಹಾಸ ಈಶ್ವರಮಂಗಲ ಆಯ್ಕೆ

Share the Article

ಪುತ್ತೂರು ತಾಲೂಕು ಬಿಜೆಪಿ ಯುವ ಮೋರ್ಚಾ ದ ಕಾರ್ಯದರ್ಶಿಯಾಗಿ ಯುವ ನಾಯಕ, ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯತ್ ಸದಸ್ಯ, ಚಂದ್ರಹಾಸ ಈಶ್ವರಮಂಗಲ ಆಯ್ಕೆಯಾಗಿದ್ದಾರೆ.

ಅನೇಕ ಜನಪರ ಕೆಲಸ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಗ್ರಾಮದೆಲ್ಲೆಡೆ ಗ್ರಾಮದ ಜನರ ಹಿತಕ್ಕಾಗಿ ರಾತ್ರಿ ಹಗಲೆನ್ನದೆ ದುಡಿಯುವ ಯುವ ನಾಯಕ ಕಳೆದ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಧಿಕ ಮತಗಳನ್ನು ಹಿಡಿದು ಗೆಲುವು ಸಾಧಿಸಿದ್ದರು.

ನೆಟ್ಟಣಿಗೆ ಮೂಡ್ನೂರು ಗ್ರಾಮದ ನಿವಾಸಿ ದಾಮೋದರ ಡಿ ಹಾಗೂ ಗೀತಾ ದಂಪತಿಯ ಪುತ್ರರಾಗಿರುವ ಚಂದ್ರಹಾಸ ಅವರು ಪುತ್ತೂರಿನಲ್ಲಿ ಕಾನೂನು ಪದವಿ ವ್ಯಾಸಂಗವನ್ನು ಮಾಡುತ್ತಿದ್ದಾರೆ.

Leave A Reply