Day: June 17, 2021

ತನ್ನ ಇಬ್ಬರು ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ | ಆರೋಪಿಯ ಬಂಧನ | ಇಂತಹ ಅಪ್ಪ ಯಾರಿಗೂ ಇರಬಾರದು

ತನ್ನಿಬ್ಬರು ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳ ಮೇಲೆ 3 ವರ್ಷಗಳಿಂದ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಪಾಪಿ ತಂದೆಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಸುರತ್ಕಲ್ ನಿವಾಸಿಯಾಗಿದ್ದಾನೆ. ಈತ ತನ್ನ, ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ಸದಾ ದೈಹಿಕವಾಗಿ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದ. ಅಲ್ಲದೆ, ಈತ ಸಮಯ ಸಾಧಿಸಿ ಈ ಮಕ್ಕಳ ಮೇಲೆಯೇ ಅತ್ಯಾಚಾರ ನಡೆಸುತ್ತಿದ್ದ. ಕೆಲ ದಿನಗಳ ಹಿಂದೆ ಆರೋಪಿ ತನ್ನ ಪತ್ನಿ ಮತ್ತು ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ …

ತನ್ನ ಇಬ್ಬರು ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ | ಆರೋಪಿಯ ಬಂಧನ | ಇಂತಹ ಅಪ್ಪ ಯಾರಿಗೂ ಇರಬಾರದು Read More »

ಕೊಂಬಾರು : ಸಿರಿಬಾಗಿಲು ಪ್ರದೇಶದಲ್ಲಿ ನಿಲ್ಲದ ಕಾಡಾನೆ ದಾಳಿ

ಕಡಬ: ಕೊಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ಕಾಡಂಚಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಕೃಷಿ ತೋಟಗಳಿಗೆ ದಾಳಿಮಾಡಿ ಹಾನಿಯುಂಟು ಮಾಡುತ್ತಿವೆ. ಗುರುವಾರ ಬೆಳ್ಳಂ ಬೆಳಗ್ಗೆ ಕೃಷಿ ತೋಟಗಳಲ್ಲಿ ಕಾಡಾನೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಪಿಲಿಕಜೆ ಎಂಬಲ್ಲಿ ಪಿ.ಸಿ.ಸುಂದರ ಗೌಡ ಎಂಬುವರ ತೋಟಕ್ಕೆ ಲಗ್ಗೆಯಿಟ್ಟ ಆನೆ ಅಡಕೆ, ತೆಂಗು, ಕೊಕ್ಕೋ, ಬಾಳೆ ಮೊದಲಾದ ಕೃಷಿಯನ್ನು ನಾಶಪಡಿಸಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಪುತ್ತೂರು : ಅನ್ಯಕೋಮಿನ ಯುವಕರ ಜತೆ ಬಂದ ಹಿಂದೂ ಯುವತಿ | ಪೊಲೀಸ್ ಠಾಣೆಗೆ ಒಪ್ಪಿಸಿದ ಹಿಂ.ಜಾ.ವೇ

ಪುತ್ತೂರು : ವಿಟ್ಲಮೂಲದ ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಬಂದ ಘಟನೆಗೆ ಸಂಬಂಧಿಸಿದಂತೆ ಯುವತಿ ಮತ್ತು ಯುವಕರನ್ನು ಹಿಂದು ಜಾಗರಣ ವೇದಿಕೆ ಪುತ್ತೂರು ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ. ಪುತ್ತೂರು ಸರಕಾರಿ ಆಸ್ಪತ್ರೆಗೆ ಕಾರಿನಲ್ಲಿ 4 ಜನ ಬಂದಿದ್ದರು ಇದರಲ್ಲಿ ಒಂದು ಸಮುದಾಯಕ್ಕೆ ಸಂಬಂಧಿಸಿದ 2 ಮಂದಿ ಯುವಕರು, ಯುವತಿ ಜೊತೆ ಅನ್ಯ ಧರ್ಮದ ಯುವತಿ ಇದ್ದರೆಂಬ ವಿಚಾರದಲ್ಲಿ ಬಿಗುವಿನ ವಾತಾವರಣ ಉಂಟಾಗಿ ಸ್ಥಳಕ್ಕೆ ಆಗಮಿಸಿದ ಹಿಂದು …

ಪುತ್ತೂರು : ಅನ್ಯಕೋಮಿನ ಯುವಕರ ಜತೆ ಬಂದ ಹಿಂದೂ ಯುವತಿ | ಪೊಲೀಸ್ ಠಾಣೆಗೆ ಒಪ್ಪಿಸಿದ ಹಿಂ.ಜಾ.ವೇ Read More »

ಕೊಯಿಲ : ಯುವತಿಗೆ ಗರ್ಭದಾನ | ರಿಕ್ಷಾ ಚಾಲಕ ಯುವರಾಜನ ಗುಟ್ಟು ರಟ್ಟಾಯಿತು | ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ಕಡಬ : ರಿಕ್ಷಾಚಾಲಕನೋರ್ವ ಯುವತಿಯೊಬ್ಬಳೊಂದಿಗೆ ಬಲವಂತದಿಂದ ಲೈಂಗಿಕ ಸಂಪರ್ಕಗೊಳಿಸಿದರಿಂದ ಯುವತಿ ಈಗ 8 ತಿಂಗಳ ಗರ್ಭಿಣಿಯಾಗಿದ್ದು,ಯುವತಿ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ರಿಕ್ಷಾ ಚಾಲಕ ಯುವರಾಜ ಎಂಬಾತನು, ಪ್ರೌಢಶಾಲಾ ದಿನಗಳಲ್ಲಿ ಯುವತಿಯನ್ನು ಶಾಲೆಗೆ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದು,ಬಳಿಕ 2019ರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಯುವತಿಯೊಂದಿಗೆ ಕೊಯಿಲ ಗ್ರಾಮದ ಬುಡಲೂರು ಗುಡ್ಡೆಯಲ್ಲಿ ಬಲವಂತದಿಂದ ಲೈಂಗಿಕ ಸಂಪರ್ಕ‌ ಮಾಡಿದ್ದು ಬಳಿಕ 2020ರ ಅಕ್ಟೋಬರ್ ತನಕ ಬಲವಂತದಿಂದ ಈ ಕೃತ್ಯ ನಡೆಸುತ್ತಿದ್ದ.ಇದರ ಪರಿಣಾಮ ಯುವತಿ ಈಗ …

ಕೊಯಿಲ : ಯುವತಿಗೆ ಗರ್ಭದಾನ | ರಿಕ್ಷಾ ಚಾಲಕ ಯುವರಾಜನ ಗುಟ್ಟು ರಟ್ಟಾಯಿತು | ಕಡಬ ಠಾಣೆಯಲ್ಲಿ ಪ್ರಕರಣ ದಾಖಲು Read More »

ತನ್ನ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಬರೆದುಕೊಂಡ ನಟಿ..ನಿರ್ದೇಶಕ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಹಿತ ಹಲವರ ಮೇಲೆ ಆರೋಪ

ಹಲವಾರು ರಂಗಗಳಲ್ಲಿ ಮಹಿಳೆಯರ ಮೇಲೆ ಹಲವಾರು ರೀತಿಯಲ್ಲಿ ಲೈಂಗಿಕ ಕಿರುಕುಳಾಗುತ್ತಿದ್ದು, ಇದರ ವಿರುದ್ಧ ದನಿ ಎತ್ತುವವರು ಕಡಿಮೆ. ಆದರೆ ಇದೀಗ ನಟಿಯೊಬ್ಬರು ಮೂರು ವರ್ಷಗಳ ಹಿಂದೆ ತನಗಾದ ಲೈಂಗಿಕ ಕಿರುಕುಳದ ವಿರುದ್ಧ ಸೋಶಿಯಲ್ ಮೀಡಿಯಾ ದಲ್ಲಿ ಹೇಳಿಕೊಂಡಿದ್ದಾರೆ. ‘ಪಟ್ನಾಗರ್’ ಎಂಬ ಚಿತ್ರದ ಮೂಲಕ ಮಾಲಿವುಡ್‌ಗೆ ಕಾಲಿಟ್ಟ ಮಲಯಾಳಂ ನಟಿ ರೇವತಿ ಸಂಪತ್ ಚಿತ್ರರಂಗಕ್ಕೆ ಬಂದು ಮೂರು ವರ್ಷಗಳಾಗಿವೆ ಆದರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಮಗೆ ಕಿರುಕುಳ ನೀಡಿದ ಎಲ್ಲಾ ಜನರ ಹೆಸರುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬಯಲಿಗೆಳೆದಿದ್ದಾರೆ. ಮೂರು …

ತನ್ನ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಬರೆದುಕೊಂಡ ನಟಿ..ನಿರ್ದೇಶಕ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಹಿತ ಹಲವರ ಮೇಲೆ ಆರೋಪ Read More »

ತಾಯಿಯ ಮಮತೆಯ ಮುಂದೆ ಸೋತು ಹೋದ ಯಮ | ಮಗ ಸತ್ತನೆಂದು ವೈದ್ಯರು ಘೋಷಿಸಿದ ಹಲವು ಗಂಟೆಗಳ ನಂತರ ಆತ ಎದ್ದು ಕೂತ !

ಈ ತಾಯಿಯ ಮಮತೆಯನ್ನು ಕಂಡು ಯಮರಾಜನೇ ಅಸಹಾಯಕನಾಗಿ, ಸತ್ತ ಆಕೆಯ ಮಗನನ್ನು ಬಿಟ್ಟು ಕಳಿಸಿದ ಕಥೆ ಇದು. ಕಳೆದ 20 ದಿನಗಳ ಹಿಂದೆ ಆಕೆಯ ಆರು ವರ್ಷದ ಮಗನನ್ನು ವೈದ್ಯರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆಂದು ಘೋಷಿಸಿದ್ದರು. ಅತ್ತ ಕುಟುಂಬ ಸದಸ್ಯರು ಅಂತಿಮ ಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಇತ್ತ ತಾಯಿ ಮಾತ್ರ ಮಗನ ಹಣೆಗೆ ಮುತ್ತಿಡುತ್ತಾ ಕಣ್ಣೀರು ಕೆಡವುತ್ತಿದ್ದಳು. ಪದೇ ಪದೇ ಮರಳಿ ಬಾ ಕಂದ, ನೀನಿಲ್ಲದೇ ನಾನು ಹೇಗೆ ಇರಲಿ ಎಂದಷ್ಟೇ ಹೇಳಿಕೊಂಡಿದ್ದಳು. ಆದರೆ ಅಷ್ಟರಲ್ಲೇ …

ತಾಯಿಯ ಮಮತೆಯ ಮುಂದೆ ಸೋತು ಹೋದ ಯಮ | ಮಗ ಸತ್ತನೆಂದು ವೈದ್ಯರು ಘೋಷಿಸಿದ ಹಲವು ಗಂಟೆಗಳ ನಂತರ ಆತ ಎದ್ದು ಕೂತ ! Read More »

ಸವಣೂರು : ಸೀಲ್‌ಡೌನ್ ಆಗಿದ್ದರೂ ಸಂಚಾರಿ ಬೀಡಿ ಬ್ರಾಂಚ್ ಓಪನ್ | ದಂಡ

ಸವಣೂರು: ಜಿಲ್ಲಾಧಿಕಾರಿಯವರ ಆದೇಶದಂತೆ ಸೀಲ್‌ಡೌನ್ ಆಗಿರುವ ಸವಣೂರು ಗ್ರಾ.ಪಂ.ವ್ಯಾಪ್ತಿಯ ಕಾಯರ್ಗದಲ್ಲಿ ನಿಯಮ ಉಲ್ಲಂಘಿಸಿ ಬೀಡಿ ಬ್ರಾಂಚ್ ವ್ಯವಹಾರ ಮಾಡುತ್ತಿರುವುದನ್ನು ಪತ್ತೆ ಮಾಡಿ ದಂಡ ವಿಧಿಸಲಾಗಿದೆ. ಸವಣೂರು ಗ್ರಾಮದ ಕಾಯರ್ಗ ಸಮೀಪ ಪಿಕಪ್ ವಾಹನದಲ್ಲಿ ಬೀಡಿ ಬ್ರಾಂಚ್ ನಡೆಸುತ್ತಿರುವ ಮಾಹಿತಿ ಪಡೆದ ಸವಣೂರು ಗ್ರಾ.ಪಂ.ನ ಕೋವಿಡ್ ಕಾರ್ಯಪಡೆ ದಾಳಿ ನಡೆಸಿ ದಂಡ ವಿಧಿಸಿದೆ. ಸೀಲ್‌ಡೌನ್ ಪ್ರದೇಶದಲ್ಲಿ ಮೆಡಿಕಲ್ ಎಮರ್ಜೆನ್ಸಿ ಹೊರತು ಪಡೆಸಿ ಎಲ್ಲಾ ವ್ಯವಹಾರಗಳಿಗೆ ನಿರ್ಬಂಧ ಇದ್ದರೂ ಕೆಲವೆಡೆ ಉಲ್ಲಂಘನೆಯಾಗುತ್ತಿರುವುದನ್ನು ಪತ್ತೆ ಮಾಡಿ ದಂಡ ವಿಧಿಸಲಾಗುತ್ತದೆ.

ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ನರಸಿಂಹ ಯುವಕ ಮಂಡಲದ ನೇತೃತ್ವದಲ್ಲಿ ನಿರ್ಮಾಣಗೊಂಡ ಬಾಳಿಗೊಂದು ಆಸರೆ ಮನೆ ನಾಳೆ ಹಸ್ತಾಂತರ

ಕಾಣಿಯೂರು: ಕಡಬ ತಾಲೂಕು ಕಾಣಿಯೂರು ಗ್ರಾಮದ ಎಲುವೆ ಎಂಬಲ್ಲಿ ವಾಸವಿರುವ ಬೊಮ್ಮಿ ಎಂಬವರ ಮನೆಯ ಗೋಡೆ ಮತ್ತು ಛಾವಣಿ ಕುಸಿತಗೊಂಡು ಬೀಳುವ ಸ್ಥಿತಿಯಲ್ಲಿದ್ದ ಕಾರಣ ಬಡಕುಟುಂಬದ ನೆರವಿಗೆ ಧಾವಿಸಿದ ಕಾಣಿಯೂರುಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲವು ಸದಸ್ಯರೊಂದಿಗೆ,ಊರಿನ ಉತ್ಸಾಹಿ ಯುವಕರನ್ನು ಸೇರಿಸಿ ಲಾಕ್ ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು ಸದಾ ನೆನಪಿನಲ್ಲಿ ಉಳಿಯುವಂತಹ ಕೆಲಸವನ್ನು ಮಾಡಿದೆ. ಕಳೆದ ಒಂದು ತಿಂಗಳಿನಿಂದ ಅವಿರತವಾಗಿ ಶ್ರಮದಾನದ ಮೂಲಕ ದುಡಿದು ಬೊಮ್ಮಿ ಮತ್ತು ಸೀತಾರಾಮ-ಕಾವೇರಿ ಬಡಕುಟುಂಬಕ್ಕೆ ನೂತನ‌ ಮನೆಯನ್ನು ನಿರ್ಮಿಸಿ ಕೊಟ್ಟಿರುತ್ತಾರೆ. ಮನೆಯ ನಿರ್ಮಾಣಕ್ಕೆ …

ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ನರಸಿಂಹ ಯುವಕ ಮಂಡಲದ ನೇತೃತ್ವದಲ್ಲಿ ನಿರ್ಮಾಣಗೊಂಡ ಬಾಳಿಗೊಂದು ಆಸರೆ ಮನೆ ನಾಳೆ ಹಸ್ತಾಂತರ Read More »

ಬಂಟ್ವಾಳ : ಚಾಲಕನ‌ ನಿಯಂತ್ರಣ ತಪ್ಪಿ ಬರೆಗೆ ಲಾರಿ ಡಿಕ್ಕಿ | ಚಾಲಕ,ನಿರ್ವಾಹಕಗೆ ಗಾಯ

ಮಂಗಳೂರು: ಬಂಟ್ವಾಳದಲ್ಲಿ ಚಾಲಕ‌ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆ ಬದಿಯ ಬರೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಘಟನೆಯಿಂದ ಚಾಲಕ ಹಾಗೂ ನಿರ್ವಾಹಕರಿಗೆ ಗಾಯವಾಗಿದ್ದು,ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರಿಗೆ ಶಿವಮೊಗ್ಗದಿಂದ ಅಕ್ಕಿ ಚೀಲಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿ ಬಂಟ್ವಾಳದ ಎಸ್.ವಿ.ಎಸ್.ಶಾಲಾಬಳಿ ಚಾಲಕನ‌ ನಿಯಂತ್ರಣ ತಪ್ಪಿ ಬರೆಗೆ ಡಿಕ್ಕಿಹೊಡೆಯಿತು ಎನ್ನಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಮಹಾಭಾರತದ ಕರ್ಣನ ಕಥೆ ನೆನಪಿಸುವ ಒಂದು ಘಟನೆ | 21 ದಿನದ ಮಗುವನ್ನು ಗಂಗೆಯಲ್ಲಿ ತೇಲಿ ಬಿಟ್ಟದ್ದು ಯಾಕಿರಬಹುದು ?

ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ದಾದ್ರಿ ಘಾಟ್ ಪ್ರದೇಶದಲ್ಲಿ 21 ದಿನದ ಹೆಣ್ಣು ಮಗುವನ್ನು ಮರದ ಬಾಕ್ಸ್ ಒಂದರಲ್ಲಿ ಇರಿಸಿ ನದಿಯಲ್ಲಿ ತೇಲಿ ಬಿಡಲಾಗಿದೆ. ಆ ಮಗುವಿನ ಜನ್ಮಕುಂಡಲಿಯನ್ನೂ ಜೊತೆಯಲ್ಲಿ ಇಟ್ಟು, ಮಗುವಿನ ಹೆಸರು ಗಂಗಾ ಎಂದು ಬರೆದು ತೇಲಿ ಬಿಡಲಾಗಿದೆ. ಅದರ ಜೊತೆಯಲ್ಲಿ ಒಂದು ದೇವರ ಫೋಟೋ ಕೂಡ ಅಂಟಿಸಲಾಗಿದೆ. ಮರದ ಬಾಕ್ಸ್‌ನಲ್ಲಿದ್ದ ಮಗುವಿನ ಚೀರಾಟ ಕಂಡು ಬಾಕ್ಸ್ ಬಳಿ ತೆರಳಿದ ಮೀನುಗಾರರಿಗೆ ಮಗು ಪತ್ತೆಯಾಗಿತ್ತು. ಇದಾದ ಬಳಿಕ ಈ ಅಚ್ಚರಿಯನ್ನು ನೋಡಲು ಸ್ಥಳಕ್ಕೆ ನೂರಾರು …

ಮಹಾಭಾರತದ ಕರ್ಣನ ಕಥೆ ನೆನಪಿಸುವ ಒಂದು ಘಟನೆ | 21 ದಿನದ ಮಗುವನ್ನು ಗಂಗೆಯಲ್ಲಿ ತೇಲಿ ಬಿಟ್ಟದ್ದು ಯಾಕಿರಬಹುದು ? Read More »

error: Content is protected !!
Scroll to Top