ಪುತ್ತೂರು : ಅನ್ಯಕೋಮಿನ ಯುವಕರ ಜತೆ ಬಂದ ಹಿಂದೂ ಯುವತಿ | ಪೊಲೀಸ್ ಠಾಣೆಗೆ ಒಪ್ಪಿಸಿದ ಹಿಂ.ಜಾ.ವೇ

ಪುತ್ತೂರು : ವಿಟ್ಲಮೂಲದ ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಬಂದ ಘಟನೆಗೆ ಸಂಬಂಧಿಸಿದಂತೆ ಯುವತಿ ಮತ್ತು ಯುವಕರನ್ನು ಹಿಂದು ಜಾಗರಣ ವೇದಿಕೆ ಪುತ್ತೂರು ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.

ಪುತ್ತೂರು ಸರಕಾರಿ ಆಸ್ಪತ್ರೆಗೆ ಕಾರಿನಲ್ಲಿ 4 ಜನ ಬಂದಿದ್ದರು ಇದರಲ್ಲಿ ಒಂದು ಸಮುದಾಯಕ್ಕೆ ಸಂಬಂಧಿಸಿದ 2 ಮಂದಿ ಯುವಕರು, ಯುವತಿ ಜೊತೆ ಅನ್ಯ ಧರ್ಮದ ಯುವತಿ ಇದ್ದರೆಂಬ ವಿಚಾರದಲ್ಲಿ ಬಿಗುವಿನ ವಾತಾವರಣ ಉಂಟಾಗಿ ಸ್ಥಳಕ್ಕೆ ಆಗಮಿಸಿದ ಹಿಂದು ಜಾಗರಣ ವೇದಿಕೆ ಯ ಕಾರ್ಯಕರ್ತರು ಅವರನ್ನು ವಿಚಾರಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಅವರವರ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಮಹಿಳೆಯೊಬ್ಬರಿಗೆ ವೈದ್ಯಕೀಯ ಪರೀಕ್ಷೆಗಾಗಿ ಆ ಧರ್ಮದ ಮನೆಯವರೊಂದಿಗೆ ಪುತ್ತೂರು ಆಸ್ಪತ್ರೆಗೆ ಹೊರಟಾಗ ಅನ್ಯಧರ್ಮೀಯ ಯುವತಿಗೂ‌ ಅನಾರೋಗ್ಯದ ಹಿನ್ನಲೆಯಲ್ಲಿ ಆಕೆಯ ಮನೆಯವರೇ ಅವರೊಂದಿಗೆ ಕಳುಹಿಸಿರುವುದಾಗಿ ಯುವತಿ ತಂದೆಯೇ ನಮಗೆ ತಿಳಿಸಿದ್ಸಾರೆ. ಈ ನಿಟ್ಟಿನಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Ad Widget


Ad Widget

Leave a Reply

Ad Widget
error: Content is protected !!
Scroll to Top
%d bloggers like this: