Day: June 1, 2021

ಕಡಬ,ಮೂಲ್ಕಿ,ಕೈರಂಗಳಕ್ಕೆ ಅಗ್ನಿಶಾಮಕ ಠಾಣೆ ಮಂಜೂರು

ಮಂಗಳೂರು: ಹೊಸದಾಗಿ ರಚನೆಗೊಂಡ ತಾಲೂಕು ಹಾಗೂ ಹೋಬಳಿ ಕೇಂದ್ರಗಳಿಗೆ ಹೊಸದಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣೆ ತೆರೆಯುವ ಕುರಿತು ಇಲಾಖೆಯ ಮಹಾ ನಿರ್ದೇಶಕರು ಎಲ್ಲಾ ಪ್ರಾದೇಶಿಕ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದ್ದಾರೆ. ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಕಡಬ,ಕೈರಂಗಳ/ಪಜೀರು ಇವುಗಳ ಹೆಸರೂ ಇದ್ದು ಮುಂದಿನ ದಿನಗಳಲ್ಲಿ ಇಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಗಳು ಆರಂಭಗೊಳ್ಳಲಿದೆ.

ದ.ಕ.ಜಿಲ್ಲೆಯಲ್ಲಿ ಎಂಆರ್‌ಎಫ್ ಘಟಕ ಸ್ಥಾಪನೆ: ಸಂಸದರ,ಸಚಿವರ ಉಪಸ್ಥಿತಿಯಲ್ಲಿ ಸಭೆ

ಮಂಗಳೂರು : ರಾಜ್ಯದಲ್ಲಿಯೇ ಪ್ರಥಮವಾಗಿ ಬೆಂಗಳೂರಿನ ಗ್ರಾಮೀಣ ಭಾಗದ ಜಿಗಣಿಯಲ್ಲಿ ಒಣ ಕಸಗಳಾದ ಪ್ಲಾಸ್ಟಿಕ್, ರಟ್ಟು, ಗಾಜಿನ ಬಾಟಲ್‌ಗಳು ಸೇರಿದಂತೆ ಮತ್ತಿತರ ವಸ್ತುಗಳ ಮರು ಉತ್ಪಾದನೆ ಮಾಡಿ ಆರ್ಥಿಕ ಲಾಭ ಗಳಿಸಲಾಗಿದೆ. ಅದಕ್ಕೆ ಪೂರಕವಾಗಿ ಇದೀಗ ರಾಜ್ಯ ಸರಕಾರವು ಪೈಲೆಟ್ ಕಾರ್ಯಕ್ರಮದಡಿ ದ.ಕ.ಸಹಿತ ರಾಮನಗರ, ಉಡುಪಿ, ಬಳ್ಳಾರಿ ಜಿಲ್ಲೆಗಳಲ್ಲಿ ಎಂಆರ್‌ಎಫ್ ಘಟಕಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ದ.ಕ.ಜಿಪಂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಅಡಿಯಲ್ಲಿ ಎಂ.ಆರ್.ಎಫ್ …

ದ.ಕ.ಜಿಲ್ಲೆಯಲ್ಲಿ ಎಂಆರ್‌ಎಫ್ ಘಟಕ ಸ್ಥಾಪನೆ: ಸಂಸದರ,ಸಚಿವರ ಉಪಸ್ಥಿತಿಯಲ್ಲಿ ಸಭೆ Read More »

ಕಾಡೆಮ್ಮೆಯನ್ನು ಗುಂಡಿಕ್ಕಿ ಹತ್ಯೆ | ಅರಣ್ಯ ಇಲಾಖೆಯಿಂದ ಪರಿಶೀಲನೆ

ಉಡುಪಿ : ಕಾಡೆಮ್ಮೆಯೊಂದನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ದೊಡ್ಡಬೆಳ್ಳಾರ್ ಎಂಬಲ್ಲಿ ನಡೆದಿದೆ. ಸೋಮವಾರ ಈ ವಿಚಾರ ಸ್ಥಳೀಯರ ಗಮನಕ್ಕೆ ಬಂದಿದ್ದು, ಸ್ಥಳೀಯರು ಶಂಕರನಾರಾಯಣ ಅರಣ್ಯ ಇಲಾಖೆಗೆ ಹಾಗೂ ಹೆಂಗವಳ್ಳಿ ಗ್ರಾಮ ಪಂಚಾಯತ್‌ಗೆ ಮಾಹಿತಿಯನ್ನು ನೀಡಿದ್ದಾರೆ. ಮಾಹಿತಿ ಪಡೆದು ಕೊಂಡು ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಕಾಡೆಮ್ಮೆಯನ್ನು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನಡೆಸಿದರು. ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಶಂಕರನಾರಾಯಣ ವಲಯ ಅರಣ್ಯಧಿಕಾರಿ ಚಿದಾ …

ಕಾಡೆಮ್ಮೆಯನ್ನು ಗುಂಡಿಕ್ಕಿ ಹತ್ಯೆ | ಅರಣ್ಯ ಇಲಾಖೆಯಿಂದ ಪರಿಶೀಲನೆ Read More »

ಸಿಬಿಎಸ್ಇ 12ನೇ ತರಗತಿಯ ಪರೀಕ್ಷೆಗಳು ರದ್ದು | ಮೋದಿ ಸರ್ಕಾರದ ಮಹತ್ವದ ಸಭೆಯ ನಂತರ ಘೋಷಣೆ

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಮಧ್ಯೆ 2021 ರ ಸಾಲಿನ ಸಿಬಿಎಸ್ಇ 12 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಿರ್ಧರಿಸಿದೆ. ಎಲ್ಲಾ ಮಧ್ಯಸ್ಥಗಾರರೊಂದಿಗೆ ವ್ಯಾಪಕ ಚರ್ಚೆಯ ನಂತರ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ. ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆಗೆ ಎರಡು ದಿನಗಳ ಮುಂಚಿತವಾಗಿ ಈ ಸಭೆ ನಡೆದಿದೆ. ಈ ಸಂದರ್ಭದಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿದ ಮನವಿಗೆ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಸಿಬಿಎಸ್ಇ 12 …

ಸಿಬಿಎಸ್ಇ 12ನೇ ತರಗತಿಯ ಪರೀಕ್ಷೆಗಳು ರದ್ದು | ಮೋದಿ ಸರ್ಕಾರದ ಮಹತ್ವದ ಸಭೆಯ ನಂತರ ಘೋಷಣೆ Read More »

ರಾಜ್ಯಾದ್ಯಂತ ಜೂನ್ 07 ರಿಂದ ಅನ್’ಲಾಕ್ ಖಚಿತ..ತಜ್ಞರ ಸಲಹೆಯ ಬಳಿಕ ಕೈಗೊಳ್ಳಬೇಕಿದೆ ನಿರ್ಧಾರ..ಉಪ ಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್

ರಾಜ್ಯಾದ್ಯಂತ ಕೊರೊನ ಸೋ೦ಕಿನ ನಿಯಂತ್ರಣಕ್ಕೆ ಸರ್ಕಾರ ಈಗಾಗಲೇ ಜೂನ್ 7ರವರೆಗೆ ಲಾಕ್ ಡೌನ್ ನ್ನು ವಿಸ್ತರಿಸಿದ್ದು, ಅಗತ್ಯತೆ ಇದ್ದರೆ ಇನ್ನಷ್ಟು ದಿನ ಮುಂದುವರೆಸುವ ಕುರಿತು ಚರ್ಚೆಗಳು ನಡೆಯುತ್ತಿದೆ. ಈ ನಡುವೆ ರಾಜ್ಯ ವಿಪಕ್ಷಗಳು ಲಾಕ್‌ಡೌನ್ ಮುಂದುವರೆಸಬೇಕೆಂದು ಸರ್ಕಾರಕ್ಕೆ ಪದೇ ಪದೇ ಸಲಹೆಯನ್ನು ಕೂಡಾ ನೀಡುತ್ತಿವೆ. ಕೋವಿಡ್ ಸಲಹಾ ಸಮಿತಿಯ ತಜ್ಞರು ಕೂಡ ಲಾಕ್‌ಡೌನ್‌ ಕುರಿತು ಸರ್ಕಾರಕ್ಕೆ ಈಗಾಗಲೇ ಸಮಿತಿಯ ತೀರ್ಮಾನದ ಮಾಹಿತಿ ನೀಡಿದ್ದಾರೆ. ಈ ನಡುವೆ ವಿಧಿಸಲಾದ ಲಾಕ್‌ಡೌನ್‌ ಕುರಿತು ಜೂನ್ 5 ಅಥವಾ 6ರಂದು ಪರಿಸ್ಥಿತಿ …

ರಾಜ್ಯಾದ್ಯಂತ ಜೂನ್ 07 ರಿಂದ ಅನ್’ಲಾಕ್ ಖಚಿತ..ತಜ್ಞರ ಸಲಹೆಯ ಬಳಿಕ ಕೈಗೊಳ್ಳಬೇಕಿದೆ ನಿರ್ಧಾರ..ಉಪ ಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ Read More »

ಸಿಮ್ ಆಕ್ಟಿವೇಟ್ ಮಾಡಿಕೊಡುವ ನೆಪ | ಕೆಇಬಿ ಜೂನಿಯರ್ ಇಂಜಿನಿಯರ್ ರ ಲಾಯರ್ ಪತ್ನಿಗೆ ಬಿತ್ತು ಆನ್ಲೈನ್ ವಂಚಕನಿಂದ ಟ್ಯಾಕ್ಸು !

ಬಿ ಎಸ್ ಎನ್ ಎಲ್ ಹಳೆಯ ಸಿಮ್ ಆಕ್ಟಿವೇಶನ್ ಮಾಡುವ ನೆಪ ಹೇಳಿಕೊಂಡು ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಆನ್ಲೈನ್ ವಂಚನೆ ಮಾಡಲಾಗಿದೆ. ಮಂಗಳೂರು ಪಟ್ಟಣ ವ್ಯಾಪ್ತಿಯ ಕೆಇಬಿಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ರಾಜೇಶ್ ಎಂಬವರ ಪತ್ನಿಯ ಮೊಬೈಲಿಗೆ ಅಪರಿಚಿತರೊಬ್ಬರು ಬಿಎಸ್ಎನ್ಎಲ್ ನೌಕರರು ಎಂದು ಹೇಳಿಕೊಂಡು ಕರೆ ಮಾಡಿದ್ದರು. ನಿಮ್ಮ ಬಿಎಸ್ಎನ್ಎಲ್ ಹಳೆಯ ಸಿಮ್ ಆಕ್ಟಿವೇಟ್ ಮಾಡುವ ಸಮಯ ಆಗಿದೆ ಈಗ ಆಕ್ಟಿವೇಟ್ ಮಾಡದೆ ಹೋದರೆ ಆನಂದವನ್ನು ಬೇರೆಯವರಿಗೆ ಅಲಾಟ್ ಮಾಡಲಾಗುತ್ತದೆ. ಕೇವಲ ಹತ್ತು ರೂಪಾಯಿ ಮಾಡಿ ನಿಮ್ಮ ಸಿಮ್ …

ಸಿಮ್ ಆಕ್ಟಿವೇಟ್ ಮಾಡಿಕೊಡುವ ನೆಪ | ಕೆಇಬಿ ಜೂನಿಯರ್ ಇಂಜಿನಿಯರ್ ರ ಲಾಯರ್ ಪತ್ನಿಗೆ ಬಿತ್ತು ಆನ್ಲೈನ್ ವಂಚಕನಿಂದ ಟ್ಯಾಕ್ಸು ! Read More »

ಶಾಲೆಗೆ ಸ್ಕರ್ಟ್ ಧರಿಸಿ ಬರುತ್ತಿದ್ದಾರೆ ಇಲ್ಲಿನ ಪುರುಷ ಶಿಕ್ಷಕರು | ಇಲ್ಲಿದೆ ಇದರ ಹಿಂದಿನ ಅಸಲಿ ಕಹಾನಿ

ಸ್ಪೇನ್ ದೇಶದಲ್ಲಿ ಇದೀಗ ಹೊಸದೊಂದು ಟ್ರೆಂಡ್ ಶುರುವಾಗಿದೆ. ಅಲ್ಲಿನ ಶಾಲೆಗಳ ಮಹಿಳಾ ಶಿಕ್ಷಕರ ಜತೆ ಪುರುಷ ಶಿಕ್ಷಕರೂ ಸ್ಕರ್ಟ್ ಧರಿಸಿ ಶಾಲೆಗೆ ಬರಲಾರಂಭಿಸಿದ್ದಾರೆ. ಇದೇನು ವಿಚಿತ್ರ ಎಂದುಕೊಳ್ಳುತ್ತಿದ್ದೀರಾ??ಅಂದ ಹಾಗೆ ಇದಕ್ಕೂ‌ ಒಂದು ಮುಖ್ಯ ಕಾರಣವಿದೆ. ಇಲ್ಲಿನ ಶಾಲೆಯೊಂದರಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳನ್ನು ಶಾಲೆಯಿಂದ ಡಿಬಾರ್ ಮಾಡಲಾಗಿದೆ. ಆಕೆ ಮೊಣಕಾಲಿಗಿಂತ ಮೇಲೆ ಸ್ಕರ್ಟ್ ಧರಿಸಿದ್ದಳು ಎನ್ನುವ ಒಂದೇ ಒಂದು ಕಾರಣಕ್ಕೆ ಆಕೆಯನ್ನು ಶಾಲೆಯಿಂದ ಹೊರ ಹಾಕಲಾಗಿದೆ. ಇದು ಅವಳ ಪೋಷಕರ ಮತ್ತು ಪೋಷಕರ ಸಂಘದವರ ಕೋಪಕ್ಕೆ ಕಾರಣವಾಗಿದೆ. ಅವರು ಈ …

ಶಾಲೆಗೆ ಸ್ಕರ್ಟ್ ಧರಿಸಿ ಬರುತ್ತಿದ್ದಾರೆ ಇಲ್ಲಿನ ಪುರುಷ ಶಿಕ್ಷಕರು | ಇಲ್ಲಿದೆ ಇದರ ಹಿಂದಿನ ಅಸಲಿ ಕಹಾನಿ Read More »

ಮೀನುಗಾರನ ಅದೃಷ್ಟವನ್ನೇ ಬದಲಾಯಿಸಿದ ಈ ಮೀನು | ಇಲ್ಲಿ ಕೇಳಿ ಮೀನಿನ ಕಥೆ

ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನಾವು ಕೇಳಿದ್ದೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಮೀನುಗಾರನೊಬ್ಬನ ಬದುಕಲ್ಲಿ ನಡೆದಿದ್ದು ಎಲ್ಲರನ್ನೂ ಅಚ್ಚರಿಗೆ ನೂಕಿದೆ. ಹೌದು. ಪಾಕಿಸ್ತಾನ ಮೂಲದ ಮೀನುಗಾರನೊಬ್ಬ ತನ್ನ ಬಲೆಗೆ ಬಿದ್ದ 48 ಕೆ.ಜಿ. ತೂಕದ ಅಟ್ಲಾಂಟಿಕ್ ಕ್ರೋಕರ್ ಎಂಬ ಹೆಸರಿನ ವಿರಾಳಾತಿವಿರಳ ಮೀನನ್ನು ಬರೋಬ್ಬರಿ 72 ಲಕ್ಷ ರೂಪಾಯಿ (46,706 ಡಾಲರ್) ಗೆ ಮಾರಾಟ ಮಾಡಿದ್ದಾನೆ. …

ಮೀನುಗಾರನ ಅದೃಷ್ಟವನ್ನೇ ಬದಲಾಯಿಸಿದ ಈ ಮೀನು | ಇಲ್ಲಿ ಕೇಳಿ ಮೀನಿನ ಕಥೆ Read More »

ಮಾಸ್ಕ್ ಸರಿಯಾಗಿ ಧರಿಸದ ಕಾರಣಕ್ಕೆ ಹಲ್ಲೆ | ಬೀದಿ ರಂಪ ಮಾಡಿ ಪೊಲೀಸರ ಅತಿಥಿಯಾದ ಯುವತಿ

ಮಾಸ್ಕ್ ಸರಿಯಾಗಿ ಧರಿಸದ ಯುವತಿ ಮೇಲೆ ಮತ್ತೊಬ್ಬ ಯುವತಿ ಹಲ್ಲೆ ನಡೆಸಿರುವ ಘಟನೆ ಬೆಳಿಗ್ಗೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ. ಮೂಗಿನ ಕೆಳಗೆ ಮಾಸ್ಕ್ ಹಾಕಲಾಗಿದೆ ಎಂಬ ಕಾರಣಕ್ಕೆ ಅದ್ವೈತ ಅರುಣ್ ಕುಮಾರ್ ಎಂಬ ಯುವತಿ ಮತ್ತೊಬ್ಬ ಯುವತಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾಳೆ. ಅದ್ವೈತ ತನ್ನ ಎರಡು ನಾಯಿಗಳೊಂದಿಗೆ ವಾಕಿಂಗ್ ಹೋಗುತ್ತಿದ್ದಾಗ ಎದುರಿನಿಂದ ಯುವತಿ ಬರುತ್ತಿದ್ದರು. ಮೂಗಿನ ಕೆಳಗೆ ಮಾಸ್ಕ್ ಹಾಕಿದ ಹಿನ್ನೆಲೆಯಲ್ಲಿ ಏಕಾಏಕಿ ಅದ್ವೈತ ದೊಣ್ಣೆಯಿಂದ ಹಲ್ಲೆ ಮಾಡಿದ್ದಾಳೆ. ಮಾಸ್ಕ್ ಸರಿಯಾಗಿ ಹಾಕದಿದ್ದರೆ ಕೇಳಲು ಪೊಲೀಸರಿದ್ದಾರೆ. …

ಮಾಸ್ಕ್ ಸರಿಯಾಗಿ ಧರಿಸದ ಕಾರಣಕ್ಕೆ ಹಲ್ಲೆ | ಬೀದಿ ರಂಪ ಮಾಡಿ ಪೊಲೀಸರ ಅತಿಥಿಯಾದ ಯುವತಿ Read More »

ಇನ್ನು ಮುಂದೆ ಹೋಂ ಡೆಲಿವರಿಯಲ್ಲಿ ದೊರೆಯಲಿದೆ ಮದ್ಯ | ಮದ್ಯ ಪ್ರಿಯರಿಗೊಂದು ಸಿಹಿ ಸುದ್ದಿ

ಕೋವಿಡ್-19 ನಿರ್ಬಂಧಗಳು ಜಾರಿಯಲ್ಲಿರುವುದರಿಂದ ದೇಶೀಯ ಮದ್ಯ ಮತ್ತು ವಿದೇಶಿ ಮದ್ಯಗಳನ್ನು ಹೋಂ ಡೆಲಿವರಿ ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ದೆಹಲಿಯ ಹೊಸ ಅಬಕಾರಿ ನಿಯಮಗಳ ಅನುಗುಣವಾಗಿ ಆನ್‍ಲೈನ್ ಹಾಗೂ ಪೋರ್ಟಲ್‍ಗಳ ಮೂಲಕ ಮದ್ಯವನ್ನು ಆರ್ಡರ್ ಮಾಡಿ ಹೋಂ ಡೆಲಿವರಿ ಪಡೆಯಬಹುದು ಎಂದು ತಿಳಿಸಲಾಗಿದೆ. ಈ ಹಿಂದೆ ಕೂಡ ಮದ್ಯವನ್ನು ಹೋಂ ಡೆಲಿವರಿ ನೀಡಲಾಗುತ್ತಿತ್ತು. ಆದರೆ ಎಲ್-13 ಪರವಾನಗಿ ಹೊಂದಿದವವರಿಗೆ ಮಾತ್ರ ಹೋಂ ಡೆಲಿವರಿ ಅನುಮತಿ ನೀಡಿತ್ತು. ಆದರೆ ಈ ಬಾರಿ ಹೊಸ ಅಬಕಾರಿ ನಿಯಮಗಳ ಪ್ರಕಾರ …

ಇನ್ನು ಮುಂದೆ ಹೋಂ ಡೆಲಿವರಿಯಲ್ಲಿ ದೊರೆಯಲಿದೆ ಮದ್ಯ | ಮದ್ಯ ಪ್ರಿಯರಿಗೊಂದು ಸಿಹಿ ಸುದ್ದಿ Read More »

error: Content is protected !!
Scroll to Top