ಸಿಮ್ ಆಕ್ಟಿವೇಟ್ ಮಾಡಿಕೊಡುವ ನೆಪ | ಕೆಇಬಿ ಜೂನಿಯರ್ ಇಂಜಿನಿಯರ್ ರ ಲಾಯರ್ ಪತ್ನಿಗೆ ಬಿತ್ತು ಆನ್ಲೈನ್ ವಂಚಕನಿಂದ ಟ್ಯಾಕ್ಸು !

ಬಿ ಎಸ್ ಎನ್ ಎಲ್ ಹಳೆಯ ಸಿಮ್ ಆಕ್ಟಿವೇಶನ್ ಮಾಡುವ ನೆಪ ಹೇಳಿಕೊಂಡು ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಆನ್ಲೈನ್ ವಂಚನೆ ಮಾಡಲಾಗಿದೆ.

ಮಂಗಳೂರು ಪಟ್ಟಣ ವ್ಯಾಪ್ತಿಯ ಕೆಇಬಿಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ರಾಜೇಶ್ ಎಂಬವರ ಪತ್ನಿಯ ಮೊಬೈಲಿಗೆ ಅಪರಿಚಿತರೊಬ್ಬರು ಬಿಎಸ್ಎನ್ಎಲ್ ನೌಕರರು ಎಂದು ಹೇಳಿಕೊಂಡು ಕರೆ ಮಾಡಿದ್ದರು. ನಿಮ್ಮ ಬಿಎಸ್ಎನ್ಎಲ್ ಹಳೆಯ ಸಿಮ್ ಆಕ್ಟಿವೇಟ್ ಮಾಡುವ ಸಮಯ ಆಗಿದೆ ಈಗ ಆಕ್ಟಿವೇಟ್ ಮಾಡದೆ ಹೋದರೆ ಆನಂದವನ್ನು ಬೇರೆಯವರಿಗೆ ಅಲಾಟ್ ಮಾಡಲಾಗುತ್ತದೆ. ಕೇವಲ ಹತ್ತು ರೂಪಾಯಿ ಮಾಡಿ ನಿಮ್ಮ ಸಿಮ್ ಅನ್ನು ಆಕ್ಟಿವೇಟ್ ಮಾಡಿಸಿಕೊಳ್ಳಿ ಎಂದಿತ್ತು ಅತ್ತ ಕಡೆಯ ಕರೆ ಮಾಡಿದ ವ್ಯಕ್ತಿ. ನೀವು ನಿನ್ನ ಹತ್ತಿರದ ಬಿಎಸ್ಎನ್ಎಲ್ ಕಚೇರಿಗೆ ಹೋಗಿ ಕೆಲಸ ಮುಗಿಸಿ ಕೊಳ್ಳಬಹುದು ಎಂದು ಹೇಳಿತ್ತು.

ಆನಂತರ ಮುಂದುವರಿದು ಮಾತನಾಡಿದ ಕರೆ ಮಾಡಿದ ವ್ಯಕ್ತಿ, ಒಂದು ವೇಳೆ ನಿಮಗೆ ಆಫೀಸಿಗೆ ಹೋಗಲು ಅನುಕೂಲವಿದ್ದರೆ ಆನ್ಲೈನ್ ಮೂಲಕ ಮಾಡಿಸಬಹುದು ಎಂದು ಸಲಹೆ ನೀ ಡಿತ್ತು. ಹತ್ತು ರೂಪಾಯಿಗಳ ಕೆಲಸಕ್ಕೆ ಯಾರೂ ಬಿಎಸ್ಎನ್ಎಲ್ ಆಫೀಸಿಗೆ ಹೋಗುತ್ತಾರೆ, ಅದು ಕೂಡಾ ಈ ಲಾಕ್ ಡೌನ್ ಇರುವ ಸನ್ನಿವೇಶದಲ್ಲಿ ಎಂದು ಯೋಚಿಸಿದ ರಾಜೇಶ್ ಅವರ ಲಾಯರ್ ಪತ್ನಿ ಕರೆ ಮಾಡಿದ ವ್ಯಕ್ತಿ ಹೇಳಿದ ಪ್ರೊಸೀಜರ್ ಅನ್ನು ಮೊಬೈಲ್ ನಲ್ಲಿಯೇ ಫಾಲೋ ಮಾಡಿದ್ದಾರೆ.

ಮೊದಲು ಕೇವಲ ಹತ್ತು ರೂಪಾಯಿ ಅಕೌಂಟಿನಿಂದ ಕಟ್ಟಾಗಿದೆ. ನಂತರದ ಕ್ಷಣಗಳಲ್ಲಿ 5000 ರೂಪಾಯಿ ಹೋಗಿದೆ. ಅದೃಷ್ಟವಶಾತ್ ಆ ಖಾತೆದಾರರ ಅಕೌಂಟಿನಲ್ಲಿ ಕಡಿಮೆ ಬ್ಯಾಲೆನ್ಸ್ ಇದ್ದುದಕ್ಕೆ ಸರಿಹೋಯಿತು. ಇಲ್ಲದೆ ಹೋದರೆ ಇನ್ನಷ್ಟು ಹಣ ಸೋರಿ ಹೋಗುವ ಸಂಭವವಿತ್ತು.

ಇದು ದಿನನಿತ್ಯ ನಡೆಯುತ್ತಿರುವ ಆನ್ಲೈನ್ ವಂಚನೆಯ ಒಂದು ಘಟನೆ ಅಷ್ಟೇ. ಇಲ್ಲಿ ಕೂಡ ವಂಚನೆಗೆ ಒಳಗಾದವರು ವಿದ್ಯಾವಂತರೇ. ಖುದ್ದು ಎಲ್ಲರನ್ನೂ ಅನುಮಾನದ ದೃಷ್ಟಿಯಿಂದ ಕಾಣುವ, ಕಾಣಬೇಕಾದ ಲಾಯರ್ ರೇ ಆನ್ಲೈನ್ ವಂಚಕರಿಂದ ಮೋಸ ಹೋಗಿದ್ದಾರೆ.

Leave A Reply

Your email address will not be published.