Day: May 17, 2021

ಉಡುಪಿ | ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿಗೆ ಬೈಕ್ ಸವಾರ ಡಿಕ್ಕಿ, ತಂತಿ ಉರುಳಾಗಿ ಗೋಣು ತುಂಡಾಗಿ ಸ್ಥಳದಲ್ಲೇ ಸಾವು

ಉಡುಪಿಯಲ್ಲಿ ವಿದ್ಯುತ್ ಗುತ್ತಿಗೆದಾರರೊಬ್ಬರ  ನಿರ್ಲಕ್ಷ್ಯದಿಂದಾಗಿ ದ್ವಿಚಕ್ರ ವಾಹನ ಸವಾರರೊಬ್ಬರು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಂತಾಗಿದೆ. ರಸ್ತೆಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕೊರಳಿಗೆ ಉರುಳಿನಂತೆ ಸಿಕ್ಕಿಹಾಕಿಕೊಂಡಿದ್ದರಿಂದ ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಂದೂರಿನ ಹೇರೂರು-ಅರೆಹೊಳೆ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು,ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಆಲಗದ್ದೆ ಯರುಕೋಣೆ ನಿವಾಸಿ ಶೇಖರ್ ಶೆಟ್ಟಿ (68) ಮೃತಪಟ್ಟವರು. ನಿನ್ನೆ ರಾತ್ರಿ ಬೈಂದೂರು ಸುತ್ತಮುತ್ತ ಸುರಿದ ಭಾರಿ ಗಾಳಿಮಳೆಯಿಂದಾಗಿ ವಿದ್ಯುತ್ ತಂತಿಗಳು ಬಿದ್ದಿದ್ದವು. ವಿದ್ಯುತ್ ತಂತಿಗಳನ್ನು ದುರಸ್ತಿ ಪಡಿಸುವ ಸಂದರ್ಭ ರಸ್ತೆಯಲ್ಲಿ ಯಾವುದೇ ಸೂಚನ …

ಉಡುಪಿ | ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿಗೆ ಬೈಕ್ ಸವಾರ ಡಿಕ್ಕಿ, ತಂತಿ ಉರುಳಾಗಿ ಗೋಣು ತುಂಡಾಗಿ ಸ್ಥಳದಲ್ಲೇ ಸಾವು Read More »

ತಾಯಿಯ ಗರ್ಭದಿಂದ ಮಗುವಿನ ಕಾಲು ಮೊದಲು ಹೊರಬಂದು ನೇತಾಡುತ್ತಿತ್ತು | ತಕ್ಷಣಕ್ಕೆ ಹೆರಿಗೆ ಮಾಡಿಸಲು ಅಲ್ಲಿ ಯಾರೂ ಇರಲಿಲ್ಲ !!

ಕೋರೊನಾ ರೋಗದ ಕಾರಣದಿಂದ ಕೋವಿಡ್ ರೋಗಿಗಳು ಮಾತ್ರವಲ್ಲ ನಾನ್ ಕೋವಿಡ್ ರೋಗಿಗಳು ಕೂಡ ಸಮಾನವಾಗಿ ತೊಂದರೆಗೆ ಒಳಪಡುತ್ತಿದ್ದಾರೆ.ನಾನ್ ಕೋವಿಡ್ ರೋಗಿಗಳು ಕೂಡ ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ ಮತ್ತು ಈನಾನ್ ಕೋವಿಡ್ ಗ್ರೂಪ್ ರೋಗಿಗಳ ಪರಿಸ್ಥಿತಿ ಎಷ್ಟು ಕರುಣಾಜನಕವಾಾಗುಟ್ಟಿಿದೆ ಎಂಬುದಕ್ಕೆ ವಿಜಯಪುರದಲ್ಲಿ ಇಂದು ನಡೆದ ಒಂದು ಘಟನೆಯೇ ಸಾಕ್ಷಿ. ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಹಣಮವ್ವ ಕೊರವರ ಎಂಬ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಆಕೆಯನ್ನು ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ದರೂ ಎಲ್ಲಿಯೂ ದಾಖಲಿಸಿಕೊಂಡಿಲ್ಲ. ಆಸ್ಪತ್ರೆಯಿಂದ …

ತಾಯಿಯ ಗರ್ಭದಿಂದ ಮಗುವಿನ ಕಾಲು ಮೊದಲು ಹೊರಬಂದು ನೇತಾಡುತ್ತಿತ್ತು | ತಕ್ಷಣಕ್ಕೆ ಹೆರಿಗೆ ಮಾಡಿಸಲು ಅಲ್ಲಿ ಯಾರೂ ಇರಲಿಲ್ಲ !! Read More »

ಕಾರಿನಲ್ಲಿ ಕೂತು ಸಿಗರೇಟು ಸೇದುತ್ತಿದ್ದ ವ್ಯಕ್ತಿ ಕೈಗೆ ಸ್ಯಾನಿಟೈಸರ್ ಹಾಕಿಕೊಂಡ | ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾದ ಕಾರು

ಒಂದೇ ಒಂದು ನಿರ್ಲಕ್ಷ್ಯ..ಒಂದು ಮೈ ಮರೆವು ; ಕಾರು ಸಂಪೂರ್ಣ ಭಸ್ಮವಾಗಿದೆ. ಚಾಲಕನಿಗೂ ಸುಟ್ಟ ಗಾಯಗಳಾಗಿದೆ. ಆತನ ಅದೃಷ್ಟ ಗಟ್ಟಿಯಾಗಿತ್ತುು, ದೇವರ ದಯದಿಂದ ಆತ ಬದುಕಿಕೊಂಡಿದ್ದಾನೆ. ಗುರುವಾರ ಸಂಜೆ ಕಾರಿನೊಳಗೆ ಕುಳಿತಿದ್ದ ಚಾಲಕ ಸಿಗರೇಟು ಸೇದುತ್ತಿದ್ದ. ಇದರ ಜೊತೆಗೆ ಹ್ಯಾಂಡ್ ಸ್ಯಾನಿಟೈಸರ್ ಕೂಡಾ ಬಳಸಿದ್ದ. ಪರಿಣಾಮ, ಬೆಂಕಿ ಹೊತ್ತಿಕೊಂಡಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈತನಿಗೆ ಸ್ವಲ್ಪ ಸುಟ್ಟ ಗಾಯಗಳಾಗಿದ್ದರೂ ಅದೃಷ್ಟವಶಾತ್ ಪ್ರಾಣಕ್ಕೇನು ಅಪಾಯವಾಗಿಲ್ಲ. ಕೊರೊನಾ …

ಕಾರಿನಲ್ಲಿ ಕೂತು ಸಿಗರೇಟು ಸೇದುತ್ತಿದ್ದ ವ್ಯಕ್ತಿ ಕೈಗೆ ಸ್ಯಾನಿಟೈಸರ್ ಹಾಕಿಕೊಂಡ | ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾದ ಕಾರು Read More »

ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದ ಪುತ್ತೂರಿನ ನವ ವಿವಾಹಿತ ಅನಾರೋಗ್ಯದಿಂದ ಮೃತ್ಯು

ಬೆಂಗಳೂರಿನಲ್ಲಿ ಮೊಬೈಲ್ ಶಾಪ್ ಹೊಂದಿರುವ ಪುತ್ತೂರಿನ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ, ಕುಂಬ್ರದಲ್ಲಿ ಅಡಿಕೆ ವ್ಯಾಪಾರಿಯಾಗಿರುವ ಅಬ್ದುಲ್ ಅಝೀಝ್ ಕಿನ್ನಿಜಾಲು ಅವರ ಪುತ್ರ ಅಶ್ರಪ್ ಎಂಬವರೇ ಮೃತಪಟ್ಟ ಯುವಕ. ಅಶ್ರಫ್ ಅವರು ಬೆಂಗಳೂರಿನಲ್ಲಿ ಮೊಬೈಲ್ ಶಾಪ್ ಹೊಂದಿದ್ದರು. ಒಂದೂವರೆ ತಿಂಗಳ ಹಿಂದೆಯಷ್ಟೇ ಅವರ ವಿವಾಹ ನಡೆದಿತ್ತು.ಕೆಲದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಬೆಳಿಗ್ಗೆ ಮೃತಪಟ್ಟರು ಎನ್ನಲಾಗಿದೆ.

ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದ ಪುತ್ತೂರಿನ ನವ ವಿವಾಹಿತ ಅನಾರೋಗ್ಯದಿಂದ ಮೃತ್ಯು

ಬೆಂಗಳೂರಿನಲ್ಲಿ ಮೊಬೈಲ್ ಶಾಪ್ ಹೊಂದಿರುವ ಪುತ್ತೂರಿನ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ, ಕುಂಬ್ರದಲ್ಲಿ ಅಡಿಕೆ ವ್ಯಾಪಾರಿಯಾಗಿರುವ ಅಬ್ದುಲ್ ಅಝೀಝ್ ಕಿನ್ನಿಜಾಲು ಅವರ ಪುತ್ರ ಅಶ್ರಪ್ ಎಂಬವರೇ ಮೃತಪಟ್ಟ ಯುವಕ. ಅಶ್ರಫ್ ಅವರು ಬೆಂಗಳೂರಿನಲ್ಲಿ ಮೊಬೈಲ್ ಶಾಪ್ ಹೊಂದಿದ್ದರು. ಒಂದೂವರೆ ತಿಂಗಳ ಹಿಂದೆಯಷ್ಟೇ ಅವರ ವಿವಾಹ ನಡೆದಿತ್ತು.ಕೆಲದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಬೆಳಿಗ್ಗೆ ಮೃತಪಟ್ಟರು ಎನ್ನಲಾಗಿದೆ.

ಬೆಳ್ತಂಗಡಿ ಮೂಲದ, ಬೆಂಗಳೂರಿನ ವಕೀಲ ಕೊರೋನಾ ವ್ಯಾಧಿಗೆ ವಿಧಿವಶ

ಮೂಲತಃ ನಾವೂರಿನ ಸದ್ಯ ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ರಮೇಶ್ ಪಿ.ಎನ್ ರವರು ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲಿ ಮೇ.17 ರಂದು ಮೃತಪಟ್ಟಿದ್ದಾರೆ. ಮೃತರು ನಾವೂರಿನ ಇಂಚರ ಮನೆ ನಿವಾಸಿ ನೇಮಣ್ಣ ಮೂಲ್ಯ ರವರ ಪುತ್ರರಾಗಿದ್ದಾರೆ. ಅವರು ಬೆಂಗಳೂರಿನಲ್ಲಿ ವಕೀಲ ವೃತ್ತಿಯನ್ನು ನಡೆಸುತ್ತಿದ್ದರು. ಇವರಿಗೆ ಇತ್ತೀಚೆಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಪರೀಕ್ಷೆಯ ವೇಳೆ ಕೊರೊನಾ ಸೋಂಕು ಧೃಢಪಟ್ಟಿತ್ತು. ಇವರನ್ನು ಚಿಕಿತ್ಸೆಗಾಗಿ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ …

ಬೆಳ್ತಂಗಡಿ ಮೂಲದ, ಬೆಂಗಳೂರಿನ ವಕೀಲ ಕೊರೋನಾ ವ್ಯಾಧಿಗೆ ವಿಧಿವಶ Read More »

ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿದ ಮರ | ಸವಾರ ಗಂಭೀರ

ಚಲಿಸುತ್ತಿದ್ದ ಬೈಕ್ ಗಳ‌ ಮೇಲೆ ಮರ ಉರುಳಿ ಬಿದ್ದು, ಓರ್ವ ಸವಾರ ಗಂಭೀರ ಗಾಯಗೊಂಡು, ಮತ್ತೋರ್ವನಿಗೆ ಸಣ್ಣ-ಪುಟ್ಟ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ಕೊಡಚಾದ್ರಿ ಕಾಲೇಜು ಎದುರು ಸೋಮವಾರ ನಡೆದಿದೆ. ಭಾರಿ ಗಾಳಿ-ಮಳೆಯಿಂದಾಗಿ ರಸ್ತೆ ಪಕ್ಕದಲ್ಲಿದ್ದ ಬೃಹತ್ ಮರ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಪರಿಣಾಮ ಮಾವಿನಕೊಪ್ಪ ಬಡಾವಣೆಯ ಸಾಧಿಕ್ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಈತ ಬೈಕ್ ನಲ್ಲಿ ತೆರಳುವಾಗ ಮರ ಬಿದ್ದಿದೆ. ಚಿಕಿತ್ಸೆಗಾಗಿ ಈತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವ ಬೈಕ್ ಸವಾರ ಪ್ರತೀಕ್ ಹಾಗೂ …

ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿದ ಮರ | ಸವಾರ ಗಂಭೀರ Read More »

ಕರಾಯ : ಮನೆಗೆ ನುಗ್ಗಿ ನಗ-ನಗದು ಕಳವು

ಉಪ್ಪಿನಂಗಡಿ ಠಾಣಾ ವ್ಯಾಪ್ತಿಗೆ ಬರುವ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಮುರಿಯಾಳ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಐದು ಪವನ್ ಚಿನ್ನ ಹಾಗೂ ನಗದು ಕಳವುಗೈದು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಮನೆ ಮಾಲಕಿ ಶಾಹಿದಾ ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆ ಮಾಲಕಿ ಶಾಹಿದಾ ಕಳೆದ ನಾಲ್ಕು ದಿನಗಳ ಹಿಂದೆ ತಮ್ಮ ತವರು ಮನೆಗೆ ಹೋಗಿದ್ದು, ಹಿಂದೆ ಬಂದು ನೋಡುವಾಗ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಪುತ್ತೂರು ಡಿವೈಎಸ್‌ಪಿ ಗಾನ ಪಿ.ಕುಮಾರ್ ಭೇಟಿ …

ಕರಾಯ : ಮನೆಗೆ ನುಗ್ಗಿ ನಗ-ನಗದು ಕಳವು Read More »

ಮಂಗಳೂರಿನಲ್ಲಿ ಚಂಡಮಾರುತದಿಂದ ಹಾನಿ ಕುರಿತು ಮಾಹಿತಿ ಪಡೆದ ಕಂದಾಯ ಸಚಿವ ಅಶೋಕ್

ಮಂಗಳೂರು : ತೌಕ್ತೆ ಚಂಡಮಾರುತದಿಂದ ದ.ಕ. ಜಿಲ್ಲೆಯಲ್ಲಿ ವ್ಯಾಪಕ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಸೋಮವಾರ ಮಂಗಳೂರಿಗೆ ಆಗಮಿಸಿ ಅಧಿಕಾರಿಗಳ ಜತೆ ಸಭೆ ನಡೆಸಿದರು. ಎನ್.ಎಂ.ಪಿ.ಟಿ.ಗೆ ಆಗಮಿಸಿದ ಸಚಿವರು ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿ ಕೋಸ್ಟ್ ಗಾರ್ಡ್ ಹಾಗೂ ನೌಕಾಪಡೆಯ ಜಂಟಿ ಕಾರ್ಯಾಚರಣೆ ಮೂಲಕ ರಕ್ಷಿಸಲಾದ ಕೋರಮಂಡಲ್ ಸರೆಂಡರ್‌ನ 9 ಮಂದಿ ಸಿಬ್ಬಂದಿಗಳನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ಎನ್.ಎಂ.ಪಿ.ಟಿ. ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚಂಡಮಾರುತದ ಪರಿಣಾಮದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬೆಳ್ತಂಗಡಿ | ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿನಿ, ಧರ್ಮಸ್ಥಳ ಮೂಲದ ದಿವ್ಯಾ ಕೆಂಗುಡೇಲು ವಿಧಿವಶ

ಮೆದುಳಿನಲ್ಲಿಿ ಬೆಳೆದ ಗೆಡ್ಡೆಯ ಪರಿಣಾಮವಾಗಿ ದೀರ್ಘಕಾಲದ ಬಳಲಿಕೆಯಿಂದ ಯುವತಿಯೊಬ್ಬಳು ಅಸುನೀಗಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಸಾವನ್ನಪ್ಪಿದ ಯುವತಿ ಧರ್ಮಸ್ಥಳ ಗ್ರಾಮದ ನಾರ್ಯ ಮೂಲದ ದಿವ್ಯ ಎಂದು ತಿಳಿದುಬಂದಿದೆ. ಇವರು ಉಜಿರೆ ಎಸ್ ಡಿ ಯಂ ಕಾಲೇಜಿನಲ್ಲಿ ಎಂಕಾಂ ಪದವೀಧರೆಯಾಗಿದ್ದು, ಕೊಕ್ಕಡದ ಕೆಂಗುಡೇಲು ಶಿವಪ್ರಸಾದ್ ಗೌಡ ಎಂಬವರನ್ನ ವಿವಾಹವಾಗಿ, ಪ್ರಸ್ತುತ ಅಲ್ಲಿಯೇ ನೆಲೆಸಿದ್ದರು. ಇವರಿಗೆ ಒಂದೂವರೆ ವರ್ಷದ ಗಂಡು ಮಗುವಿದ್ದು, ಗಂಡ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಕೆಯೂ ತಮ್ಮ ಕುಟುಂಬದ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದು ಅಲ್ಲಿ …

ಬೆಳ್ತಂಗಡಿ | ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿನಿ, ಧರ್ಮಸ್ಥಳ ಮೂಲದ ದಿವ್ಯಾ ಕೆಂಗುಡೇಲು ವಿಧಿವಶ Read More »

error: Content is protected !!
Scroll to Top