ವಿದ್ಯುತ್‌ ತಂತಿ ತಗುಲಿ ವ್ಯಕ್ತಿ ಸಾವು | ಮೇಯಲು ಬಿಟ್ಟ ದನ ಕರೆತರಲು ಹೋದಾಗ ಘಟನೆ

Share the Article

ಉಡುಪಿ : ವಿದ್ಯುತ್‌ ತಂತಿ ತಗುಲಿ ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ಕಾಪು ತಾಲೂಕು ಎಲ್ಲೂರು ಗ್ರಾಮದ ಕೊಳಚೂರು ಕುದಿಮಾರು ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ರಮೇಶ್‌ ಪೂಜಾರಿ (49) ಎಂಬವರೇ ಮೃತಪಟ್ಟ ದುರ್ದೈವಿ. ಮೇಯಲು ಬಿಟ್ಟ ದನವನ್ನು ಕರೆತರಲೆಂದು ಹೋಗಿದ್ದ ವೇಳೆ ಅವಘಡ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪಡುಬಿದ್ರಿ ಪೊಲೀಸರು ಆಗಮಿಸಿ, ತನಿಖೆ ನಡೆಸಿದ್ದಾರೆ.

Leave A Reply

Your email address will not be published.