‘ನಾನು ಚಿಪ್ಸ್ ಕದ್ದಿಲ್ಲ’ ಎಂದು ಡೆತ್ ನೋಟ್ ಬರೆದಿಟ್ಟು ಬಾಲಕ ಆತ್ಮಹತ್ಯೆ

Kolkata: ಸಣ್ಣ-ಪುಟ್ಟ ವಿಷಯಗಳಿಗೆ ಮಕ್ಕಳಿಗೆ ಗದರುವುದು ಕೆಲವೊಮ್ಮೆ ದೊಡ್ಡ ಅನಾಹುತಗಳಿಗೆ ಎಡೆಮಾಡಿಕೊಡಬಹುದು. ಮಕ್ಕಳ ಮನಸ್ಸು ಸೂಕ್ಷ್ಮ ವಾಗಿರುವುದರಿಂದ ಅವರನ್ನು ಚಿಕ್ಕ ಪುಟ್ಟ ವಿಷಯಗಳಿಗೆ ನಿಂದಿಸುವುದು ಸೂಕ್ತವಲ್ಲ. ಇದೆ ರೀತಿಯ ಒಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. 7ನೆ ತರಗತಿಯ ಬಾಲಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಕುಲ್ಡ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಈತನ ಹೆಸರು ಕೃಷ್ನೆಂದು ದಾಸ್, ಈತ ಒಂದು ಸ್ವೀಟ್ ಸ್ಟಾಲ್ ನಲ್ಲಿ 3 ಪ್ಯಾಕೆಟ್ ಚಿಪ್ಸ್ ಕದ್ದಿದ್ದಾನೆ ಎಂದು ಆರೋಪ ಬಂದಿದ್ದು, ಅಂಗಡಿ ಮಾಲೀಕರು ಇಲ್ಲದಿದ್ದಾಗ ಕದ್ದಿದ್ದಾನೆ ಎಂದು ಜನರು ಹೇಳಿದ್ದರು.
ಅಂಗಡಿ ಮಾಲೀಕ ನೋಡುವಾಗ ಆತನ ಕೈಯಲ್ಲಿ ಚಿಪ್ಸ್ ಇರುವುದು ಕಂಡು ಬಂದಿರುತ್ತದೆ. ಆದ್ದರಿಂದ ಬಾಲಕ ಹಣವನ್ನು ಕೊಟ್ಟಿರುತ್ತಾನೆ. ಆದರೂ ಕೂಡ ಅಂಗಡಿಯೊಳಗೆ ಕರೆದೊಯ್ದು ಥಳಿಸಿರುತ್ತಾನೆ ಹಾಗೂ ಎಲ್ಲರ ಮುಂದೆ ಕ್ಷಮೆ ಕೇಳುವಂತೆ ಹೇಳುತ್ತಾನೆ.
ಇದೆಲ್ಲ ತಿಳಿದ ತಾಯಿ ಕೂಡ ಆತನನ್ನು ಮತ್ತೊಮ್ಮೆ ಶಾಪ್ ಬಳಿ ಕರೆದೊಯ್ದು ಎಲ್ಲರ ಮುಂದೆ ಗದರಿರುತ್ತಾರೆ. ಇದರಿಂದ ಮನನೊಂದ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದು, ಮನೆಯವರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿರುತ್ತಾರೆ ಹಾಗೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪಿರುತ್ತಾನೆ.
ಸ್ವೀಟ್ ಶಾಪ್ ನ ಮಾಲೀಕನೆ ಇದಕ್ಕೆಲ್ಲ ಕಾರಣ ಎಂದು ಕುಟುಂಬದವರು ಆರೋಪಿಸಿದ್ದು, ಇದೀಗ ಮಾಲೀಕ ತಲೆ ಮರೆಸಿಕೊಂಡಿದ್ದಾನೆ. ಹಾಗೂ ಸಾರ್ವಜನಿಕ ವಾಗಿ ಮಗುವಿನ ಮನಸ್ಸು ನೋಯಿಸಿರುವುದು ತಪ್ಪು ಎಂದು ಕುಟುಂಬದವರು ಕೂಡ ಒಪ್ಪಿಕೊಂಡಿರುತ್ತಾರೆ.
Comments are closed.