ತಮನ್ನಾರನ್ನು ರಾಯಭಾರಿ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳ ಭಾರಿ ಪ್ರತಿಭಟನೆ, ಮೈಸೂರ್ ಸ್ಯಾಂಡಲ್ ಕಚೇರಿಗೆ ಮುತ್ತಿಗೆ ಯತ್ನ!

Mysore : ಪ್ರಧಾನಿ ಮೋದಿ ಹೆಸರಲ್ಲಿ ಅಗ್ಗದ ಬೆಲೆಗೆ ಜನಸಾಮಾನ್ಯರಿಗೆ ಔಷಧಿಗಳನ್ನು ನೀಡುವ ಮೋದಿ ಮೆಡಿಕಲ್ ಎಂದೇ ಪರಿಚಿತವಾಗಿದ್ದ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ದಿಡೀರನೆ ರದ್ದುಗೊಳಿಸಿದ ಬೆನ್ನಲ್ಲೇ ಈ ಮೋದಿ ಮೆಡಿಕಲ್ ಗಳಲ್ಲಿ ಅತಿ ಕಡಿಮೆಗೆ ಅತ್ಯಂತ ಹೆಚ್ಚು ಮಾರಾಟವಾಗುತ್ತಿದ್ದ ಮೈಸೂರು ಸ್ಯಾಂಡಲ್ ಸೋಪ್ ಗೆ ಕೋಟಿ ಕೋಟಿ ದುಡ್ಡು ಚೆಲ್ಲಿ ಪರಭಾಷಾ ನಟಿ ತಮನ್ನಾ ಭಾಟಿಯರನ್ನು ರಾಯಭಾರಿಯನ್ನಾಗಿ ಮಾಡಿದ್ದರ ಬಗ್ಗೆ ಕೆಂಡಮಂಡಲವಾಗಿರುವ ಕನ್ನಡಪರ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿ ಇದೀಗ ಮೈಸೂರು ಸ್ಯಾಂಡಲ್ ಸೋಪ್ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದ ಘಟನೆ ನಡೆದಿದೆ.
ಖಾಲಿಯಾಗಿರುವ ಗ್ಯಾರೆಂಟಿ ಜೋಳಿಗೆಯನ್ನು ತುಂಬಿಸಿಕೊಳ್ಳಲೆಂದೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರಧಾನಿ ಮೋದಿ ಅವರ ಹೆಸರಲ್ಲಿ ನೀಡಲಾಗುತ್ತಿದ್ದ ವಿವಿಧ ಜನ ಉಪಯೋಗಿ ಜನೌಷಷಧಿ ಕೇಂದ್ರಗಳನ್ನು ಮುಚ್ಚಿ ಇದೀಗ ಖಾಸಗಿ ಮೆಡಿಕಲ್ ಸಂಸ್ಥೆಗಳೊಂದಿಗೆ ಡೀಲ್ ಮಾಡಿಕೊಂಡು ಬಡ ಜನರಿಗೆ ಕಡಿಮೆ ಬೆಲೆಗೆ ಸಿಗುತ್ತಿದ್ದ ಔಷಧಿಗಳನ್ನು ಇನ್ನು ಮುಂದೆ ಮೆಡಿಕಲ್ ಶಾಪ್ ಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತೆ ಕಾಂಗ್ರೆಸ್ ಸರಕಾರ ರಹಸ್ಯ ಡೀಲ್ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎನ್ನಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಜನೌಷಷಧಿ ಕೇಂದ್ರಗಳಲ್ಲಿ ಈ ಮೈಸೂರು ಸ್ಯಾಂಡಲ್ ಸೋಪು ಕೂಡ ಅತಿ ಕಡಿಮೆ ಬೆಲೆಗೆ ಜನಸಾಮಾನ್ಯರಿಗೆ ಸಿಗುವಂತಾಗುತ್ತಿತ್ತು.
ಆದರೆ ಇದೀಗ ಕಾಂಗ್ರೆಸ್ ಸರಕಾರ ಖಾಸಗಿ ಮೆಡಿಕಲ್ ಲಾಬಿಗಳ ಒತ್ತಡಕ್ಕೆ ಮಣಿದು ಪರಭಾಷಾ ನಟಿ ತಮನ್ನಾ ಭಾಟಿಯಾಗೆ ಕೋಟಿ ಕೋಟಿ ದುಡ್ಡು ಚೆಲ್ಲಿ ಈಕೆಯನ್ನು ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯನ್ನಾಗಿ ನೇಮಿಸುವ ಮೂಲಕ ಇನ್ನು ಮುಂದೆ ಕಡಿಮೆ ಬೆಲೆಗೆ ಸಿಗುತ್ತಿದ್ದ ಮೈಸೂರು ಸ್ಯಾಂಡಲ್ ಸೋಪ್ ಮೆಡಿಕಲ್ ಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಗೊಳಿಸುವುದು ಕಾಂಗ್ರೆಸ್ ನ ಹುನ್ನಾಾರಎನ್ನಲಾಗುತ್ತಿದೆ.ಅಲ್ಲದೆ ಜನಪ್ರಿಯವಾಗಿದ್ದ ಈ ಮೈಸೂರ್ ಸ್ಯಾಂಡಲ್ ಸೋಪಿಗೆ ಪರಭಾಷಾ ನಟಿ ತಮನ್ನಾ ಭಾಟಿಯರನ್ನು ರಾಯಭಾರಿಯನ್ನಾಗಿ ಮಾಡುವ ಮೂಲಕ ಕನ್ನಡದ ನಟರನ್ನು ಕೂಡ ಕೈಸರ್ಕಾರ ಕಡೆಗಣಿಸಿದೆ ಎನ್ನಲಾಗುತ್ತಿದೆ. ಇದರಿಂದ ರೊಚ್ಚಿಗೆದ್ದಿರುವ ಕನ್ನಡಪರ ಸಂಘಟನೆಗಳು ಇಂದು ಮೈಸೂರು ಸ್ಯಾಂಡಲ್ ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಿ ಮೈಸೂರು ಸ್ಯಾಂಡಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಕೂಡ ನಡೆದಿದೆ.
Comments are closed.