ಕಾಮಿಡಿ ಕಿಲಾಡಿ ಮನು ಕೇಸ್ ನಲ್ಲಿ ಬಿಗ್ ಟ್ವಿಸ್ಟ್: ಕೇಸ್ ಹಿಂಪಡೆಯುತ್ತಾರಾ ಸಂತ್ರಸ್ತೆ?

Bengaluru: ಒಂದೆರಡು ದಿನಗಳಿಂದ ಸಡ್ಡು ಮಾಡುತ್ತಿರುವ ಕಾಮಿಡಿ ಕಿಲಾಡಿ ಕಲಾವಿದ, ನಟ ಮಡೆನೂರು ಮನು ಅವರ ಬಂಧನ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ದೂರು ನೀಡಿ 24 ಗಂಟೆ ಕಳೆಯುವುದರೊಳಗೆ ಸಂತ್ರಸ್ತೆ ಯು ಟರ್ನ್ ಹೊಡೆದಿರುತ್ತಾರೆ. ಹಾಗೂ ನಾನು ಸತ್ತರೂ ಕೂಡ ಯಾರು ಕಾರಣರಲ್ಲ ಇದು ನನ್ನ ಸ್ವಂತ ನಿರ್ಧಾರ ಎಂದಿದ್ದಾರೆ.
ನನ್ನ ಮನು ಮಧ್ಯೆ ಒಂದಷ್ಟು ಜಗಳ ಗೊಂದಲಗಳಿದ್ದು, ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಪ್ರೊಡ್ಯೂಸರ್‌ಗೆ ಮೆಸೇಜ್ ಮಾಡಿದ್ದು ತನ್ನ ತಪ್ಪು. ಸಿನಿಮಾಗೆ ತೊಂದರೆ ಕೊಟ್ಟಿರುವುದು ತನ್ನ ತಪ್ಪಾಗಿದ್ದು, ಲಾಯರ್ ಭೇಟಿ ಮಾಡಿಸಿ ಎಲ್ಲವನ್ನು ತನಗೆ ಅರ್ಥ ಮಾಡಿಸಿಡಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಇದು ಬಲವಂತವಾಗಿ ಮನು ಮಾಡಿಸಿರೋ ವಿಡಿಯೋ ಎಂದ ಸಂತ್ರಸ್ತೆ ಹೇಳಿ ಆಕೆ ಯು ಟರ್ನ್ ಹೊಡೆದಿದ್ದಾರೆ.
ಮನು ವಿರುದ್ಧ ಕೇಸ್ ನೀಡಲು ಯಾರೂ ಕೂಡ ಒತ್ತಾಯ ಮಾಡಿರದೆ ತಾನೇ ನೀಡಿದ್ದಾಗಿಯೂ ಅವರ ಸಿನಿಮಾಗೆ ಒಳ್ಳೆಯದಾಗಲಿ ಎಂದು ಕೂಡ ಹೇಳಿರುತ್ತಾರೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಸಂತ್ರಸ್ತೆ ವಿಚಾರಣೆ ಮುಂದುವರಿದಿದ್ದು, ಸಂತ್ರಸ್ತೆ ಹೇಳಿಕೆಯ ಮೇಲೆ ಪ್ರಕರಣ ದಾರಿ ನಿರ್ಧಾರವಾಗಲಿದೆ.
Comments are closed.