Bengaluru : ‘ನಮ್ಮ ಮೆಟ್ರೋ’ದಲ್ಲಿ ಯುವತಿಯರ ಫೋಟೋ, ವಿಡಿಯೋ ತೆಗೆಯುತ್ತಿದ್ದ ಕಾಮುಕ ಅರೆಸ್ಟ್ !!

Share the Article

Bengaluru : ನಮ್ಮ ಮೆಟ್ರೋದಲ್ಲಿ ಓಡಾಡುವ ಮಹಿಳೆಯರ ಫೋಟೋವನ್ನು, ವಿಡಿಯೋವನ್ನು ಅವರಿಗೆ ಅರಿವಿಲ್ಲದೆ ತೆಗೆದು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ಅದನ್ನು ಇನ್‌ಸ್ಟಾಗ್ರಾಂನಲ್ಲಿ (Instagram) ಅಪ್‌ಲೋಡ್‌ ಮಾಡುತ್ತಿರುವ ಆಘಾತಕಾರಿ ಸಂಗತಿ ವರದಿಯಾಗಿತ್ತು. ಇದೀಗ ಈ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

 

ಹೌದು, “ಬೆಂಗಳೂರು ಮೆಟ್ರೋ ಕ್ಲಿಕ್ಸ್” (@metro_chicks) ಎಂಬ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹೀಗೆ ಮಾಡಲಾಗುತ್ತಿದೆ ಎಂದು ಗೊತ್ತಾಗಿದ್ದು, ಈ ಕುರಿತು ಅನೇಕರು ನಮ್ಮ ಮೆಟ್ರೋ ಆಡಳಿತ ಬಿಎಂಆರ್‌ಸಿಎಲ್‌ (BMRCL) ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಯುವತಿಯರ ಆಕ್ಷೇಪಾರ್ಹ ವೀಡಿಯೋಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

 

ಆರೋಪಿಯನ್ನು ದಿಗಂತ್ ಎಂದು ಗುರುತಿಸಲಾಗಿದೆ. ಹಾವೇರಿ ಮೂಲದ ಈತನನ್ನು ಬನಶಂಕರಿ ಪೊಲೀಸರು ಪೀಣ್ಯದ ಸಮೀಪ ಬಂಧಿಸಿದ್ದಾರೆ. ಈತ ‘ಮೆಟ್ರೋ ಚಿಕ್ಸ್’ ಎಂಬ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಯುವತಿಯರ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ, ಅಶ್ಲೀಲ ರೀತಿಯಲ್ಲಿ ವೀಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದ. ಈ ಕೃತ್ಯವನ್ನು ಆರೋಪಿ ತನ್ನ ಖಾತೆಗೆ ಹೆಚ್ಚಿನ ವೀಕ್ಷಣೆಗಳು (ವೀವ್ಸ್) ಬರಲೆಂದು ಮಾಡುತ್ತಿದ್ದನು ಎಂದು ತಿಳಿದುಬಂದಿದೆ

Comments are closed.