Day: April 15, 2021

ದ.ಕ.ಜಿಲ್ಲೆಯಲ್ಲಿ ಇಂದು 166 ಜನರಿಗೆ ಕೊರೊನಾ

ಮಂಗಳೂರು: ಜಿಲ್ಲೆಯಲ್ಲಿಂದು 166 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 37,306ಕ್ಕೆ ಏರಿಕೆಯಾಗಿದೆ. ಗುರುವಾರ 68 ಜನ  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 35,313ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 741 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ಎರಡನೇ ಅಲೆ ಭೀಕರತೆ ಸೃಷ್ಟಿಸುತ್ತಿದ್ದು ಇದೇ ಮೊದಲ ಬಾರಿಗೆ 14,738 ಕೊರೋನಾ ಪ್ರಕರಣಗಳು ವರದಿಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 11,09,650ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ …

ದ.ಕ.ಜಿಲ್ಲೆಯಲ್ಲಿ ಇಂದು 166 ಜನರಿಗೆ ಕೊರೊನಾ Read More »

ಮಂಗಳೂರು: ವಾಹನ‌ ಅಡ್ಡಗಟ್ಟಿ ದರೋಡೆ ಮತ್ತೆ 6 ಮಂದಿಯ ಬಂಧನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಕಳ್ಳತನ, ದರೋಡೆ ಜೊತೆಗೆ ವಾಹನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿ ಮತ್ತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ತಮ್ಮ‌ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಏಪ್ರಿಲ್ 1ರಂದು ಮೂಡಬಿದ್ರೆ, ಮುಲ್ಕಿ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಮೂಲಕ 28 ಅಧಿಕೃತ ಪ್ರಕರಣಗಳಿಗೆ …

ಮಂಗಳೂರು: ವಾಹನ‌ ಅಡ್ಡಗಟ್ಟಿ ದರೋಡೆ ಮತ್ತೆ 6 ಮಂದಿಯ ಬಂಧನ Read More »

ಇಬ್ಬರ ಜತೆ ಯುವಕನ ಪ್ರೇಮ‌ ಪ್ರಸಂಗ | ಮೋಸದಿಂದ ಒಬ್ಬಾಕೆಯನ್ನು ನೇಣು ಹಾಕಿಸಿದ ಧೂರ್ತ

ಇಲ್ಲೊಬ್ಬ ಕಿರಾತಕ ಇಬ್ಬರು ಯುವತಿಯರನ್ನು ಪ್ರೀತಿಸುವ ನೆಪದಲ್ಲಿ ಒಬ್ಬಾಕೆಯನ್ನು ಉಪಾಯವಾಗಿ ನೇಣು ಹಾಕಿಕೊಳ್ಳುವಂತೆ ಮಾಡಿದ ಬಗ್ಗೆ ಚಾಮರಾಜನಗರದಿಂದ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯಕೊಳ್ಳೇಗಾಲ ತಾಲೂಕಿನ‌ ಆಂಜನೇಯಪುರ ಗ್ರಾಮದ ಸಿದ್ದಪ್ಪಸ್ವಾಮಿ ಅಲಿಯಾಸ್ ಉಪೇಂದ್ರ ಎಂಬಾತನೇ ಈ ಕಹಾನಿಯ ಕತರ್ನಾಕ್ ಉಪೇಂದ್ರ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದ. ಈತ ಬೆಂಗಳೂರಿನಲ್ಲಿ ನರ್ಸಿಂಗ್​ ಓದುತ್ತಿದ್ದ ನಂಜಮ್ಮಣಿಗೆ ಗೊತ್ತಾಗದಂತೆ ಆಂಜನೇಯಪುರದಲ್ಲಿ ಮತ್ತೊಬ್ಬ ಪ್ರೇಯಸಿ ಜತೆಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು. 20 ದಿನದ ಹಿಂದೆ ನಂಜಮಣಿಯು ಗ್ರಾಮಕ್ಕೆ ಬಂದಾಗ ಈತನ ವಿಷಯ ಗೊತ್ತಾಗಿದೆ. ಸಿದ್ದಪ್ಪಸ್ವಾಮಿ ಅಲಿಯಾಸ್ ಉಪೇಂದ್ರ, …

ಇಬ್ಬರ ಜತೆ ಯುವಕನ ಪ್ರೇಮ‌ ಪ್ರಸಂಗ | ಮೋಸದಿಂದ ಒಬ್ಬಾಕೆಯನ್ನು ನೇಣು ಹಾಕಿಸಿದ ಧೂರ್ತ Read More »

ರಾಜಕೀಯದ ಅಬ್ಬೇಪಾರಿಯಂತೆ ಅಲೆಯುತ್ತಿದ್ದ ‘ಲೂಟಿ ರವಿ’ ಎಂಬ ಮತಿಗೆಟ್ಟ ಆಸಾಮಿಯ ಖಜಾನೆ ತುಂಬಿದ್ದು ಹೇಗೆ ?

ಚಿಕ್ಕಮಗಳೂರಿನಲ್ಲಿ ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ. ರವಿ ಅನ್ನೋ ಮತಿಗೆಟ್ಟ ಆಸಾಮಿಯ ಖಜಾನೆ ಕೆಲವೇ ವರ್ಷದಲ್ಲಿ ತುಂಬಿದ್ದು ಹೇಗೆ?’ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಕೋಟ್ಯಂತರ ಬೆಲೆಯ ಆಸ್ತಿ ಬಂದಿದ್ದು ಹೇಗೆ? ಲೋಕಾಯುಕ್ತ ಕೋರ್ಟ್‌ನಲ್ಲಿ 409, 420, 120, 463, 466, 120ಬಿ ಪ್ರಕರಣಗಳು ಇರುವುದೇಕೆ. ಇದಕ್ಕೆ ಲೂಟಿ ರವಿ ಉತ್ತರಿಸುವರೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ. ಜನತೆ ಸಂಕಷ್ಟದಲ್ಲಿದ್ದಾರೆ. ಪ್ರತಿ ಕುಟುಂಬಕ್ಕೆ 10 ಸಾವಿರ ರು ನೀಡಿ ಎನ್ನುವ ಸಿದ್ದರಾಮಯ್ಯ ಸಲಹೆಗೆ ಬುದ್ಧಿಭ್ರಮಣೆಯಾದವರಂತೆ ಮಾತನಾಡುವ ಡಿಸಿಎಂ …

ರಾಜಕೀಯದ ಅಬ್ಬೇಪಾರಿಯಂತೆ ಅಲೆಯುತ್ತಿದ್ದ ‘ಲೂಟಿ ರವಿ’ ಎಂಬ ಮತಿಗೆಟ್ಟ ಆಸಾಮಿಯ ಖಜಾನೆ ತುಂಬಿದ್ದು ಹೇಗೆ ? Read More »

ಮಂಗಳೂರು: ಆದಾಯ ತೆರಿಗೆ ಇಲಾಖೆಯ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್; ದಾಖಲೆ ಪತ್ರಗಳು ಬೆಂಕಿಗಾಹುತಿ

ಮಂಗಳೂರಿನ ಅತ್ತಾವರದಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಗುರುವಾರ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ದಾಖಲೆ ಪತ್ರಗಳು ಸುಟ್ಟು ಹೋಗಿವೆ. ಇದರಿಂದ ಕಚೇರಿಯ ಅಮೂಲ್ಯ ದಾಖಲೆಪತ್ರಗಳ ಸಹಿತ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ. ಐಟಿ ಕಟ್ಟಡದ ಮೂರನೆ ಮಹಡಿಯಲ್ಲಿರುವ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿತು. ಮಾಹಿತಿ ತಿಳಿದ ತಕ್ಷಣ ಪಾಂಡೇಶ್ವರದ ಅಗ್ನಿಶಾಮದ ದಳದ ಸಿಬ್ಬಂದಿ ವರ್ಗವು ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಐಟಿ ಕಚೇರಿಯ ದಾಖಲೆಪತ್ರಗಳು ಸುಟ್ಟು ಭಸ್ಮವಾಗಿದೆ. ಮೇಜು, …

ಮಂಗಳೂರು: ಆದಾಯ ತೆರಿಗೆ ಇಲಾಖೆಯ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್; ದಾಖಲೆ ಪತ್ರಗಳು ಬೆಂಕಿಗಾಹುತಿ Read More »

ಮೀನುಗಾರಿಕಾ ಬೋಟ್ ಡೀಸೆಲ್ ಸಬ್ಸಿಡಿ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ: ಸಚಿವ ಅಂಗಾರ

ಕಳೆದ ನಾಲ್ಕು ತಿಂಗಳಿನಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್‌ಗಳಿಗೆ ಡೀಸೆಲ್ ಸಬ್ಸಿಡಿ ಬಾರದಿರುವುದು ತನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಎ.18ರಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಮುಖ್ಯಮಂತ್ರಿಯ ಗಮನ ಸೆಳೆಯುತ್ತೇನೆ. ಸುಮಾರು 75 ಕೋ.ರೂ.ಸಬ್ಸಿಡಿ ಬರಲು ಬಾಕಿ ಇದ್ದು, ಶೀಘ್ರದಲ್ಲೇ ಅದು ಮೀನುಗಾರರ ಬ್ಯಾಂಕ್ ಖಾತೆಗೆ ಸೇರುವಂತೆ ಬರುವಂತೆ ಪ್ರಯತ್ನ ಮಾಡುತ್ತೇನೆ. ಆ ಮೂಲಕ ಸಬ್ಸಿಡಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ರಾಜ್ಯ ಮೀನುಗಾರಿಕಾ ಹಾಗೂ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು. …

ಮೀನುಗಾರಿಕಾ ಬೋಟ್ ಡೀಸೆಲ್ ಸಬ್ಸಿಡಿ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ: ಸಚಿವ ಅಂಗಾರ Read More »

ಪಂಜ | ಮೂಲಸ್ಥಾನ ಗರಡಿಬೈಲಿನಲ್ಲಿರುವ ನಾಗನ ಕಟ್ಟೆಗೆ ಮರಬಿದ್ದು ಹಾನಿ

ಪಂಜ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಮೂಲಸ್ಥಾನ ಗರಡಿಬೈಲಿನಲ್ಲಿರುವ ನಾಗನ ಕಟ್ಟೆಗೆ ಮರ ಬಿದ್ದು ಹಾನಿಯಾಗಿದೆ. ನಿನ್ನೆ ಸಂಜೆಯಿಂದ ಸುರಿದ ಗಾಳಿ ಸಹಿತ ಧಾರಾಕಾರ ಮಳೆಗೆ ಈ ಮರ ಮುರಿದು ಬಿದ್ದಿದ್ದು, ನಾಗನ ಕಟ್ಟೆಗೆ ಸಂಪೂರ್ಣ ಹಾನಿಯಾಗಿದೆ. ಈ ನಾಗನ ಕಟ್ಟೆಯನ್ನು ಒಂದು ವರ್ಷದ ಮೊದಲು ಜೀರ್ಣೋದ್ದಾರಗೊಳಿಸಲಾಗಿತ್ತು. ಇದರ ತೆರವು ಕಾರ್ಯ ಇನ್ನಷ್ಟೇ ನಡೆಯಬೇಕಿದೆ.

ಸವಣೂರು ರೈಲ್ವೆ ಹಳಿಯಲ್ಲಿ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ಸವಣೂರು : ಪುತ್ತೂರು -ಕಾಣಿಯೂರು ರೈಲು ಮಾರ್ಗದ ಮದ್ಯೆ ಸವಣೂರು ಗೇಟ್ ಬಳಿ ಹಳಿಯಲ್ಲಿ ಯುವಕನೋರ್ವನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪುಣ್ಚಪ್ಪಾಡಿ ಗ್ರಾಮದ ದೇವಸ್ಯ ದಂಬೆ ನಿವಾಸಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಿ.ಬಾಲಕೃಷ್ಣ ರೈ ಕೇನ್ಯ ಎಂಬವರ ಪುತ್ರ ನಿವಾಸಿ ಮಹೇಶ್ ಯಾನೆ ಸನ್ನು (34 ವ) ಎಂಬವರ ಶವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ರುಂಡ ಪತ್ತೆಯಾಗಿದೆ. ಗುರುವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.

ಟೆಕ್ಸ್‌ಟೈಲ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ನಾಪತ್ತೆ | ಪತ್ತೆಗೆ ಮನವಿ

ಉಡುಪಿ ಜಿಲ್ಲೆಯ ಹಿರಿಯಡ್ಕದ ಕುಸುಮ ಟೆಕ್ಸ್‌ಟೈಲ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಕವಿತ (30) ಎಂಬವರು ಎ.14ರಿಂದ ನಾಪತ್ತೆಯಾಗಿದ್ದಾರೆ. ಚಹರೆ: 5 ಅಡಿ ಎತ್ತರವಿದ್ದು, ಬಿಳಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ ಈಕೆಯ ಕುರಿತು ಮಾಹಿತಿ ಸಿಕ್ಕವರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೊ.ನಂ: 9480805401, ಉಡುಪಿ ಉಪ ವಿಬಾಗದ ಪೊಲೀಸ್ ಉಪಾಧೀಕ್ಷಕರು ಮೊ.ನಂ: 9480805420, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರು ಮೊ.ನಂ: 9480805432, ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮೊ.ನಂ: …

ಟೆಕ್ಸ್‌ಟೈಲ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ನಾಪತ್ತೆ | ಪತ್ತೆಗೆ ಮನವಿ Read More »

ಸುಬ್ರಹ್ಮಣ್ಯ, ಪಂಜ : ಗಾಳಿಮಳೆಗೆ ಅಪಾರ ಹಾನಿ

ಕಡಬ ತಾಲೂಕಿ ನಾದ್ಯಂತ ಬುಧವಾರ ಸಂಜೆಯ ಗುಡುಗು ಸಹಿತ ಬಾರೀ ಗಾಳಿ ಮಳೆಗೆ ಮನೆ, ವಿದ್ಯುತ್‌ ಕಂಬ, ಕೃಷಿಗೆ ಹಾನಿಯಾಗಿದ್ದು, ಘಟನಾ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿದರು. ಸುಬ್ರಹ್ಮಣ್ಯ ಹಾಗೂ ಪಂಜ ಪರಿಸರದಲ್ಲಿ ಗಾಳಿ ಮಳೆಗೆ ಅಪಾರ ಹಾನಿ ಉಂಟಾಗಿದೆ. ಐನೆಕಿದು ಗ್ರಾಮದ ಕೋಟೆ ವಿಜಯ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ. ಏನೆಕಲ್ಲು ಗ್ರಾಮದಲ್ಲಿ ಅಂಗಡಿ ಶೀಟು ಗಾಳಿಗೆ ಹಾರಿ ಹೋಗಿವೆ. ಗ್ರಾ.ಪಂ. ಸಂಜೀವಿನಿ ಕಟ್ಟಡದ ಎದುರಿನ ತಾತ್ಕಾಲಿಕ ತರಕಾರಿ ಅಂಗಡಿ ಮೇಲೆ ಮರ …

ಸುಬ್ರಹ್ಮಣ್ಯ, ಪಂಜ : ಗಾಳಿಮಳೆಗೆ ಅಪಾರ ಹಾನಿ Read More »

error: Content is protected !!
Scroll to Top