Month: April 2021

ವ್ಯಾಪಕ ಪ್ರಶಂಸೆಗೆ ಕಾರಣವಾದ ಬೆಳ್ತಂಗಡಿ ಪೊಲೀಸರ ಅಪ್ರೋಚ್ | ನಾಳೆ ಇರೋದು ರೆಗ್ಯುಲರ್ ಲಾಕ್ ಡೌನ್ / ವೀಕೆಂಡ್ ಕರ್ಫ್ಯೂ ? Full details…!

ನಾಳೆ ಇರುವುದು ರೆಗ್ಯುಲರ್ ಲಾಕ್ಡೌನ್ ಅಥವಾ ವೀಕೆಂಡ್ ಎನ್ನುವ ಬಗ್ಗೆ ಇವತ್ತಿಗೂ ಹಲವರಿಗೆ ಕನ್ಫ್ಯೂಷನ್ ಇದೆ. ಎಲ್ಲ ದಿನ ಮಾಮೂಲಿ ದಿನಗಳು ಆಗಿರುವಾಗ, ವೀಕೆಂಡ್ ಕರ್ಫ್ಯೂ ಅನ್ನುವುದಕ್ಕೆ ಒಂದು ವಿಶೇಷ ಅರ್ಥವಿದೆ. ಈಗ ಪ್ರತಿದಿನವೂ ಒಂದು ತರಹದ ಕಂಟ್ರೋಲ್ಡ್ ಕರ್ಫ್ಯೂ. ಆದುದರಿಂದ ಹೊಸದಾಗಿ ವೀಕೆಂಡ್ ಕರ್ಫ್ಯೂ ಅನ್ನುವುದಕ್ಕೆ ಯಾವುದೇ ಅರ್ಥವಿಲ್ಲ.ಸಿಂಪಲ್ಲಾಗಿ ಹೇಳಬೇಕೆಂದರೆ ನಾಳೆೆ ಎಂದಿನ ರೀತಿಯ ಎಂದಿನ ರೀತಿಯ ಲಾಕ್ಡೌನ್ ಜಾರಿಯಲ್ಲಿ ಇರುತ್ತದೆ. ಈಗಾಗಲೇ, ಇವತ್ತು ರಾತ್ರಿ 9:00 ಗಂಟೆ ಕಳೆದ ಕಾರಣದಿಂದ ಕರ್ಫ್ಯೂ ಜಾರಿಗೆ ಬಂದಾಗಿದೆ. …

ವ್ಯಾಪಕ ಪ್ರಶಂಸೆಗೆ ಕಾರಣವಾದ ಬೆಳ್ತಂಗಡಿ ಪೊಲೀಸರ ಅಪ್ರೋಚ್ | ನಾಳೆ ಇರೋದು ರೆಗ್ಯುಲರ್ ಲಾಕ್ ಡೌನ್ / ವೀಕೆಂಡ್ ಕರ್ಫ್ಯೂ ? Full details…! Read More »

ರಾಜ್ಯದಲ್ಲಿ ಕೊರೋನಾ ರಣಕೇಕೆ | ಇಂದು ಒಂದೇ ದಿನ ಬರೋಬ್ಬರಿ 50 ಸಾವಿರ ಸನಿಹ ಪ್ರಕರಣ ದಾಖಲು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ನಿರೀಕ್ಷೆಗೂ ಮೀರಿ ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 48296 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ ಎಂದು ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳಲ್ಲಿ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 382690ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ರಾಜ್ಯದಲ್ಲಿ ಕೋವಿಡ್‍ಗೆ ಬಲಿಯಾದವರ ಸಂಖ್ಯೆ 217 ಎಂದು ವರದಿಗಳು ತಿಳಿಸಿವೆ. 14884 ಜನರು …

ರಾಜ್ಯದಲ್ಲಿ ಕೊರೋನಾ ರಣಕೇಕೆ | ಇಂದು ಒಂದೇ ದಿನ ಬರೋಬ್ಬರಿ 50 ಸಾವಿರ ಸನಿಹ ಪ್ರಕರಣ ದಾಖಲು Read More »

ಮಾಸ್ಕ್ ಧರಿಸದಕ್ಕೆ 100 ರೂ. ದಂಡ ತೆರಲು ಅಧಿಕಾರಿಗಳೊಂದಿಗೆ ವಾಗ್ವಾದ | 2400 ರೂ. ಹೆಚ್ಚುವರಿ ದಂಡ ಕಟ್ಟಿಸಿಕೊಂಡ ಯುವಕ

ಕಡಬ: ಮಾಸ್ಕ್ ಧರಿಸದ್ದಕ್ಕೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಯುವಕನೊಬ್ಬ 100 ರೂ. ದಂಡ ವಿಧಿಸಿದ್ದಕ್ಕೆ ಕೋವಿಡ್ ಕಾರ್ಯಪಡೆಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಕೊನೆಗೂ ದುಬಾರಿ ದಂಡ ತೆತ್ತು ತೆರಳಿದ ಘಟನೆ ಕಡಬದಲ್ಲಿ ನಡೆದಿದೆ. ಬೈಕಿನಲ್ಲಿ ಹೆಲ್ಮೆಟ್ ಧರಿಸದೆ ಕಡಬಕ್ಕೆ ಆಗಮಿಸಿದ ಉಪ್ಪಿನಂಗಡಿಯ ಇರ್ಷಾದ್ ಎಂಬಾತ ಮಾಸ್ಕ್ ಕೂಡ ಹಾಕದೆ ಕಡಬದ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದ. ಈ ಸಂದರ್ಭ ಕೋವಿಡ್ ಕಾರ್ಯಪಡೆಯ ಅಧಿಕಾರಿ ಹರೀಶ್ ಬೆದ್ರಾಜೆಯವರು ಆತನನ್ನು ತಡೆದು ನಿಲ್ಲಿಸಿ 100 ರೂ. ದಂಡ ವಿಧಿಸಿದ್ದಾರೆ. …

ಮಾಸ್ಕ್ ಧರಿಸದಕ್ಕೆ 100 ರೂ. ದಂಡ ತೆರಲು ಅಧಿಕಾರಿಗಳೊಂದಿಗೆ ವಾಗ್ವಾದ | 2400 ರೂ. ಹೆಚ್ಚುವರಿ ದಂಡ ಕಟ್ಟಿಸಿಕೊಂಡ ಯುವಕ Read More »

ಮೇ 3 ರಿಂದ 20 ತನಕ ದೇಶದಲ್ಲಿ ಟೋಟಲ್ ಲಾಕ್ ಡೌನ್ ? | ವೈರಲ್ ಆಗಿದೆ ನ್ಯಾಷನಲ್ ಟಿವಿ ಚಾನಲ್ ನ ನ್ಯೂಸ್ ಪೋಸ್ಟ್ !

ದೇಶದಲ್ಲಿ ಮೇ 3 ರಿಂದ 20 ರ ವರೆಗೆ ಟೋಟಲ್ ಲಾಕ್ ಡೌನ್ ಹೇರಲಾಗುತ್ತದೆ ಎಂಬ ಪ್ರೈವೇಟ್ ಟಿವಿ ಒಂದರ ಕ್ಲಿಪ್ಪಿಂಗ್ ಗಳು ದೇಶದಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ನಿಜಕ್ಕೂ ಮೋದಿ ಟೋಟಲ್ ಲಾಕ್ ಡೌನ್ ಮಾಡಿಯೇ ಬಿಡುತ್ತಾರಾ ?! ಮಾಡಿದರೆ ಅದೆಷ್ಟು ದಿನ ಲಾಕ್ ಡೌನ್ ಇರುತ್ತದೆ, ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಮತ್ತೆ ದೇಶಾದ್ಯಂತ ಮೇ 3 ರಿಂದ 20 ರವರೆಗೆ ಟೋಟಲ್ ಲಾಕ್ ಡೌನ್ ಆದರೆ ಗತಿ ಏನು ಎಂದು ಜನ ಗಾಬರಿಗೆ …

ಮೇ 3 ರಿಂದ 20 ತನಕ ದೇಶದಲ್ಲಿ ಟೋಟಲ್ ಲಾಕ್ ಡೌನ್ ? | ವೈರಲ್ ಆಗಿದೆ ನ್ಯಾಷನಲ್ ಟಿವಿ ಚಾನಲ್ ನ ನ್ಯೂಸ್ ಪೋಸ್ಟ್ ! Read More »

ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ, ಕಾಂಗ್ರೆಸ್ ಗೆ ಹೀನಾಯ ಸೋಲು | ಬಳ್ಳಾರಿಯಲ್ಲಿ ಅಧಿಕಾರ ಹಿಡಿದ ಖುಷಿಯಲ್ಲಿ ಕಾಂಗ್ರೆಸ್ !

ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನೊಂದಿಗೆ, ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿದ್ದು ನಗರ ಸಭೆ ಬಿಜೆಪಿಯ ಪಾಲಾಗಿದೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಎಸ್ ಡಿಪಿಐ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ನಗರ ಸಭೆಯ ಒಟ್ಟು 23 ಸ್ಥಾನಗಳ ಪೈಕಿ 16 ಸ್ಥಾನ ಗಳಿಸಿರುವ ಬಿಜೆಪಿ, ನಗರ ಸಭೆಯ ಅಧಿಕಾರವನ್ನು ತನ್ನ ಕೈವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಮುಖ ವಿರೋಧ ಪಕ್ಷವಾಗಿ ಎಸ್ ಡಿಪಿಐ ಕಾರ್ಯನಿರ್ವಹಿಸಲಿದೆ. …

ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ, ಕಾಂಗ್ರೆಸ್ ಗೆ ಹೀನಾಯ ಸೋಲು | ಬಳ್ಳಾರಿಯಲ್ಲಿ ಅಧಿಕಾರ ಹಿಡಿದ ಖುಷಿಯಲ್ಲಿ ಕಾಂಗ್ರೆಸ್ ! Read More »

ಪುತ್ತೂರು ಕೆಎಸ್ಸಾರ್ಟಿಸಿ ಬಸ್ಸುಗಳ ‘ರನ್’ ಅಭಿಯಾನ | ಏನಿದು ರನ್ ಅಭಿಯಾನ

ಪುತ್ತೂರು: ಕೋವಿಡ್ ಕರ್ಫ್ಯೂ ಹಿನ್ನಲೆಯಲ್ಲಿ ಕೆಸ್ಸಾರ್ಟಿಸಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿದ್ದು ಬಸ್ಸುಗಳು ಘಟಕದಲ್ಲಿಯೇ ನಿಲ್ಲುವುದರಿಂದ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪುತ್ತೂರು ಕೆಸ್ಸಾರ್ಟಿಸಿ ಘಟಕದಿಂದ ಪ್ರತಿದಿನ 30 ಬಸ್ಸುಗಳನ್ನು ಹೊರತೆಗೆದು ಬಸ್ಸು ನಿಲ್ದಾಣದ ತನಕ ಸಂಚರಿಸಿ ಬಳಿಕ ಮರಳಿ ಘಟಕದಲ್ಲಿ ತಂದು ನಿಲ್ಲಿಸುವಂತೆ ಆದೇಶಿಸಲಾಗಿದೆ. ಕಳೆದ ವರ್ಷ ಮಾ.25ರಿಂದ ಲಾಕ್‍ಡೌನ್ ಘೋಷಣೆ ಆದ ಕಾರಣ ಮೇ.19ರ ತನಕ ಬಸ್ಸುಗಳು ಓಡಾಟ ನಡೆಸದೆ ಘಟಕದಲ್ಲಿಯೇ ಬಾಕಿಯಾಗಿದ್ದವು. ಮೇ.19ರಂದು ಸರ್ಕಾರ ಕೆಸ್ಸಾರ್ಟಿಸಿ ಬಸ್ಸುಗಳನ್ನು ಓಡಿಸಲು ಆದೇಶಿಸಿದ್ದರೂ ಬಸ್ಸುಗಳು ತಾಂತ್ರಿಕವಾಗಿ …

ಪುತ್ತೂರು ಕೆಎಸ್ಸಾರ್ಟಿಸಿ ಬಸ್ಸುಗಳ ‘ರನ್’ ಅಭಿಯಾನ | ಏನಿದು ರನ್ ಅಭಿಯಾನ Read More »

ಈಜಿಪ್ಟ್ ನಲ್ಲಿ ಜಗತ್ತಿನ ಮೊದಲ ಗರ್ಭಿಣಿ ‘ ಮಮ್ಮಿ ‘ ಪತ್ತೆ

ಈಜಿಪ್ಟ್’ನ ಪೋಲಿಷ್ ವಿಜ್ಞಾನಿಗಳು ಜಗತ್ತಿನ ಮೊದಲ ಗರ್ಭಿಣಿ ಮಮ್ಮಿಯನ್ನು ಪತ್ತೆಮಾಡಿದ್ದಾರೆ. ಇದು 2 ಸಾವಿರ ವರ್ಷ ಹಳೆಯ ಮಮ್ಮಿ ಎಂದು ವರದಿ ತಿಳಿಸಿದೆ. ಈ ಮಹಿಳೆ ಸುಮಾರು 20 ರಿಂದ 30 ವರ್ಷ ವಯಸ್ಸಿನವಳಾಗಿದ್ದಳು ಎಂದು ಸಂಶೋಧಕರು ಅಂದಾಜಿಸಿದ್ದು ಎಕ್ಸರೆ ಮತ್ತು ಕಂಪ್ಯೂಟರ್ ಪರೀಕ್ಷೆಗಳ ಬಳಿಕ ಮಮ್ಮಿಯು ಏಳು ತಿಂಗಳ ಗರ್ಭಿಣಿಯಾಗಿದ್ದಳು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಶವವನ್ನು ಮಮ್ಮಿಯಾಗಿ ಮಾಡುವ ಸಮಯದಲ್ಲಿ ಭ್ರೂಣವನ್ನು ಏಕೆ ಹೊಟ್ಟೆಯಿಂದ ಹೊರತೆಗೆಯಲಿಲ್ಲ ಎನ್ನುವ ಕುತೂಹಲ ಇನ್ನೂ ತಣಿದಿಲ್ಲ. ಸಾಮಾನ್ಯವಾಗಿ ಸತ್ತ ನಂತರ, …

ಈಜಿಪ್ಟ್ ನಲ್ಲಿ ಜಗತ್ತಿನ ಮೊದಲ ಗರ್ಭಿಣಿ ‘ ಮಮ್ಮಿ ‘ ಪತ್ತೆ Read More »

ಬೆಂಗಳೂರಿನಲ್ಲಿ ಕೊರೋನಾ ನೆಗೆಟಿವ್ ರಿಪೋರ್ಟ್ ಜಾಲ ಪತ್ತೆ, ಇಬ್ಬರ ಬಂಧನ

ಬೆಂಗಳೂರಿನಲ್ಲಿ ಸ್ವಾಬ್ ಪಡೆಯದೆ ಕೊರೋನಾ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಖೇಶ್ ಸಿಂಗ್ (25) ಹಾಗೂ ನಾಗರಾಜು (39) ಬಂಧಿತ ಆರೋಪಿಗಳು. ಬಂಧಿತರು ಕೊರೋ ನಾ ನೆಗೆಟಿವ್ ರಿಪೋರ್ಟ್ ಬೇಕಾದವರಿಗೆ ಸುಳ್ಳು ರಿಪೋರ್ಟ್ ಸೃಷ್ಟಿ ಮಾಡಿಕೊಡುವುದರಲ್ಲಿ ಸಿದ್ದ ಹಸ್ತರಾಗಿದ್ದರು. ಬಂಧಿತರಿಂದ ಐದು ನೆಗೆಟಿವ್ ರಿಪೋರ್ಟ್ ಇರುವ ಆರ್ ಟಿ ಪಿಸಿಆರ್ ವರದಿಗಳು ಮತ್ತು ಎರಡು ಮೊಬೈಲ್​ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲೆಲ್ಲಿ ನೆಗೆಟಿವ್ ರಿಪೋರ್ಟ್ ನೀಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು …

ಬೆಂಗಳೂರಿನಲ್ಲಿ ಕೊರೋನಾ ನೆಗೆಟಿವ್ ರಿಪೋರ್ಟ್ ಜಾಲ ಪತ್ತೆ, ಇಬ್ಬರ ಬಂಧನ Read More »

ಮಂಗಳೂರು : ಕೊಲೆಯತ್ನ ಪ್ರಕರಣ | ಏಳು ಮಂದಿ ಆರೋಪಿಗಳ ಬಂಧನ

ಮಂಗಳೂರಿನ ಬಜ್ಪೆ ಹಾಗೂ ಮಂಗಳೂರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದ 2 ಕೊಲೆ ಯತ್ನ ಪ್ರಕರಣಗಳಿಗೆ ಸಂಬಂಧಿಸಿ 7 ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದು, ಆರೋಪಿಗಳನ್ನು ಕಂಕನಾಡಿಯ ಅಬ್ದುಲ್ ಜಬ್ಬಾರ್ ಯಾನೆ ಮಾರಿಪಳ್ಳ ಜಬ್ಬಾರ್, ನಝೀರ್ ಅಹಮ್ಮದ್ ಪರಿಂಗಿಪೇಟೆ, ಬಿಲಾಲ್ ಮೊಯಿದ್ದೀನ್ ಫಳ್ನೀರ್, ಇಬ್ರಾಹೀಂ ಶಾಕೀರ್ ಮುಳಿಹಿತ್ಲು, ಮುಹಮ್ಮದ್ ನಿಹಾಲ್ ಅತ್ತಾವರ, ಅಬ್ಬಾಸ್ ಅಫ್ವಾನ್ ಪಾಂಡೇಶ್ವರ …

ಮಂಗಳೂರು : ಕೊಲೆಯತ್ನ ಪ್ರಕರಣ | ಏಳು ಮಂದಿ ಆರೋಪಿಗಳ ಬಂಧನ Read More »

ನೆಲ್ಯಾಡಿ: ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರೊಂದು ರಸ್ತೆ ಬದಿ ಮಗುಚಿ ಬಿದ್ದ ಘಟನೆ ಶುಕ್ರವಾರದಂದು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯಲ್ಲಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಗ್ಯಾಸ್ ತುಂಬಿಕೊಂಡು ಹೊರಟಿದ್ದ ಟ್ಯಾಂಕರ್ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.ಇದರಿಂದಾಗಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಗ್ಯಾಸ್ ಸೋರಿಕೆ ಆಗದೆ ಇದ್ದುದರಿಂದ ಅನಾಹುತ ತಪ್ಪಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top