ರಾಜಕೀಯದ ಅಬ್ಬೇಪಾರಿಯಂತೆ ಅಲೆಯುತ್ತಿದ್ದ ‘ಲೂಟಿ ರವಿ’ ಎಂಬ ಮತಿಗೆಟ್ಟ ಆಸಾಮಿಯ ಖಜಾನೆ ತುಂಬಿದ್ದು ಹೇಗೆ ?

Share the Article

ಚಿಕ್ಕಮಗಳೂರಿನಲ್ಲಿ ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ. ರವಿ ಅನ್ನೋ ಮತಿಗೆಟ್ಟ ಆಸಾಮಿಯ ಖಜಾನೆ ಕೆಲವೇ ವರ್ಷದಲ್ಲಿ ತುಂಬಿದ್ದು ಹೇಗೆ?’ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಕೋಟ್ಯಂತರ ಬೆಲೆಯ ಆಸ್ತಿ ಬಂದಿದ್ದು ಹೇಗೆ? ಲೋಕಾಯುಕ್ತ ಕೋರ್ಟ್‌ನಲ್ಲಿ 409, 420, 120, 463, 466, 120ಬಿ ಪ್ರಕರಣಗಳು ಇರುವುದೇಕೆ. ಇದಕ್ಕೆ ಲೂಟಿ ರವಿ ಉತ್ತರಿಸುವರೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.

ಜನತೆ ಸಂಕಷ್ಟದಲ್ಲಿದ್ದಾರೆ. ಪ್ರತಿ ಕುಟುಂಬಕ್ಕೆ 10 ಸಾವಿರ ರು ನೀಡಿ ಎನ್ನುವ ಸಿದ್ದರಾಮಯ್ಯ ಸಲಹೆಗೆ ಬುದ್ಧಿಭ್ರಮಣೆಯಾದವರಂತೆ ಮಾತನಾಡುವ ಡಿಸಿಎಂ ಅಶ್ವತ್ಥನಾರಾಯಣ ಹಾಗೂ ಸಿ.ಟಿ. ರವಿ ಅವರೇ, ಪಿಎಂ ಕೇರ್ಸ್, ಕೋವಿಡ್ ಪ್ಯಾಕೇಜ್,  20 ಲಕ್ಷ ಕೋಟಿ ರುಪಾಯಿಗಳ ಪ್ಯಾಕೇಜ್ ಇವೆಲ್ಲಾ ಎಲ್ಲಿ ಹೋದವು ಎಂದು ಹೇಳಿ. ಇಲ್ಲವೇ ಅವೆಲ್ಲಾ ಬೋಗಸ್ ಎಂದು ಒಪ್ಪಿಕೊಳ್ಳಿ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಡಿಸಿಎಂ ಅಶ್ವತ್ಥನಾರಾಯಣ ಅವರೇ, ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕು ರಾಜ್ಯವನ್ನು ಕಾಡುತ್ತಿದೆ. ಒಂದು ವರ್ಷವಾದರೂ ಸೋಂಕನ್ನು ಎದುರಿಸುವ ಸಿದ್ಧತೆ ಇಲ್ಲದ್ದು ನಿಮ್ಮ ಬೇಜವಾಬ್ದಾರಿ ಅಲ್ಲವೇ? ಸಿದ್ದರಾಮಯ್ಯ ಹೇಳಿದಂತೆ ಪ್ಯಾಕೇಜ್ ಘೋಷಿಸಲಾಗುತ್ತದೆಯೇ ಎಂದು ಪ್ರಶ್ನೆ ಮಾಡುವ ಮೂಲಕ ನಿಮ್ಮದು ಕೈಲಾಗದ ಸರ್ಕಾರ ಎಂಬುದನ್ನು ಒಪ್ಪಿ ಕೊಂಡಿದ್ದೀರಿ ಎಂದು ಕಾಂಗ್ರೆಸ್ ಟೀಕಿಸಿದೆ.

Leave A Reply

Your email address will not be published.