ಕೊಡಗು | ಹೆಲ್ತ್ ಎಮರ್ಜೆನ್ಸಿ ಘೋಷಣೆ | ಕೊಂಡಂಗೇರಿ ಗ್ರಾಮಕ್ಕೆ ಪ್ರವೇಶ ನಿರ್ಬಂಧ

ಕೊಡಗಿನಲ್ಲಿ 35 ವರ್ಷದ ವ್ಯಕ್ತಿಗೆ ಕರೋನ ದೃಡಪಟ್ಟ ಹಿನ್ನೆಲೆಯಲ್ಲಿ ಕೊಡಗು ಡಿಸಿ ಅನೀಸ್ ಕಣ್ಮನಿ ಜಾಯ್ ಅವರು ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಿದ್ದಾರೆ. ಜತೆಗೆ ಕೊಂಡಂಗೇರಿ ಗ್ರಾಮಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಕುರಿತು ಗ್ರಾಮದ ಪ್ರವೇಶ ದಲ್ಲಿ ಬ್ಯಾನರ್ ಅಳವಡಿಕೆ ಮೂಲಕ ಸೂಚನೆ ನೀಡಲಾಗಿದೆ.

ದುಬೈನಿಂದ ಬಂದ ವ್ಯಕ್ತಿಯು ಮಡಿಕೇರಿ ತಾಲೂಕಿನ ಕೊಂಡಂಗೇರಿ ಗ್ರಾಮದವರಾಗಿದ್ದು, ಮೈಸೂರಿನಿಂದ ಬಂದ ಮೆಡಿಕಲ್ ರಿಪೋರ್ಟ್‌ನಲ್ಲಿ ಪಾಸಿಟಿವ್ ಇದೆ ಎಂದು ದೃಢಪಡಿಸಿದರು. ಇದಕ್ಕಾಗಿ ಜಿಲ್ಲಾಧಿಕಾರಿ ಕೆಲ ಸೂಚನೆಗಳನ್ನು ನೀಡಿದ್ದಾರೆ. ಕೊರೊನಾ ತಡೆ ನಿಟ್ಟಿನಲ್ಲಿ ಜನತೆ ಸಹಕರಿಸ ಬೇಕೆಂದು ಮನವಿ ಮಾಡಿದ್ದಾರೆ.

  • ಕರೋನ ಎದುರಿಸಲು ಮತ್ತು ತಡೆಗೆ, ಜಾಗೃತಿ ಮೂಡಿಸಲು ಜಿಲ್ಲಾಡಳಿತ ಸಿದ್ಧವಾಗಿದೆ
  • 100 ಬೆಡ್ ಐಸೊಲೇಟೆಡ್ ವಾರ್ಡ್, ಕೋರೆಂಟಲ್ 150 ಬೆಡ್ ಮತ್ತೊಂದು ವಾರ್ಡ್ ರೆಡಿ
  • ಕೊಡಗು ಮೆಡಿಕಲ್ ಕಾಲೇಜಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ
  • ಪಾಸಿಟಿವ್ ಬಂದ ವ್ಯಕ್ತಿಯ ಆರೋಗ್ಯ ಸದ್ಯಕ್ಕೆ ಸ್ಟೇಬಲ್ ಇದೆ
  • ಮುಂಜಾಗ್ರತಾ ದೃಷ್ಠಿಯಿಂದ ಜಿಲ್ಲೆಯಲ್ಲಿ 144-3 ಸೆಕ್ಷನ್ ಕೂಡ ಜಾರಿ ಮಾಡಿದ್ದೇವೆ
  • ರೆಸಾರ್ಟ್, ಹೊಟೆಲ್, ಹೋಮ್ಸ್ ಸ್ಟೇ ಬುಕಿಂಗ್ ಕ್ಯಾನ್ಸಲ್ ಮಾಡಿ, ಹೊಸ ಬುಕಿಂಗ್ ತಗೊಬೇಡಿ
  • ಕರೋನ ತಡೆಗೆ ಜಿಲ್ಲಾ ಮಟ್ಟದ ವಿಶೇಷ ತಂಡ ರಚನೆ ಮಾಡಲಾಗಿದೆ
  • ಧಾರ್ಮಿಕ ಕಾರ್ಯಕ್ರಮ ರುಟೀನ್ ಬಿಟ್ಟು ಬೇರೆ ಯಾವುದು ಮಾಡುವ ಹಾಗಿಲ್ಲ
  • ಇನ್ನೆರಡು ದಿನಗಳಲ್ಲಿ ಜಿಲ್ಲೆಯ ಎಲ್ಲಾ ಧಾರ್ಮಿಕ ಮುಖಂಡರ ಸಭೆ
  • ಶಾಲೆ ,ಕಾಲೇಜು , ಅಂಗನವಾಡಿ, ಜಿಮ್, ಸ್ವಿಮ್ಮಿಂಗ್ ಪೂಲ್, ಮೈದಾನ, ಟ್ಯೂಷನ್ ಸೆಂಟರ್ ಬಂದ್
  • ಸಂತೆ, ಜಾತ್ರೆ ಸೇರಿದಂತೆ ಜನ ಸೇರುವಂತಹವು ಕಂಪ್ಲೀಟ್ ಬಂದ್
  • ಜಿಲ್ಲೆಯ ಗಡಿಗಳಲ್ಲಿ ಚೆಕ್ಫೊಸ್ಟ್ ತೆರೆದು ಪರಿಶೀಲನೆ ಮಾಡಲಾಗುತ್ತಿದೆ
  • ಮೆಡಿಕಲ್, ದಿನಸಿ ತರಕಾರಿ ಬಿಟ್ಟು ಬೇರೆ ಎಲ್ಲವನ್ನೂ ಕ್ಲೋಸ್ ಮಾಡಿ ಸಹಕರಿಸಿ
  • ಪ್ರೈವೇಟ್ ಕಂಪೆನಿ ವರ್ಕ್ ಫ್ರಮ್ ಹೋಮ್ ಡಿಕ್ಲೇರ್ ಮಾಡಬೇಕು
  • ಸರ್ಕಾರಿ ಕಛೇರಿ ಕಾರ್ಯ ನಿರ್ವಹಿಸುತ್ತದೆ ರಜೆ ಇರುವುದಿಲ್ಲ
  • ಪ್ರಗ್ನೆಂಟ್ ಮತ್ತು ಆರೋಗ್ಯ ಸಮಸ್ಯೆ ಇರುವ ಸರ್ಕಾರಿ ಅಧಿಕಾರಿಗಳಿಗೆ ವಿನಾಯಿತಿ

Leave A Reply

Your email address will not be published.