Mangaluru: ಸುಹಾಸ್ ಶೆಟ್ಟಿ ಪ್ರಕರಣ ಆರೋಪಿ ಚೊಟ್ಟೆ ನೌಷಾದ್ ಮೇಲೆ ಇತರ ಕೈದಿಗಳಿಂದ ಅಟ್ಯಾಕ್; ನಡೆದಿದ್ದೇನು?

Mangaluru: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಚೊಟ್ಟೆ ನೌಷಾದ್ ಹಾಗೂ ಇತರ ಇಬ್ಬರನ್ನು ಕಳೆದ ವಾರ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ನೌಷಾದ್ ಮೇಲೆ ಬಿ ಬ್ಯಾರಕ್‌ನ ಹಲವು ಸಹ ಕೈದಿಗಳಿಂದ ಕಲ್ಲು , ಇತರೆ ವಸ್ತುಗಳಿಂದ ದಾಳಿ ಮಾಡಿರುವ ಘಟನೆ ನಡೆದಿದ್ದು, ಮಂಗಳೂರು ಸೆಂಟ್ರಲ್‌ನಲ್ಲಿರುವ ನೌಷಾದ್ ಪಾರಾಗಿರುವ ಕುರಿತು ವರದಿಯಾಗಿದೆ.
ಇಂದು ಆರೋಪಿ ನೌಷಾದ್‌ನ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾಗಿತ್ತು. ಹಾಗಾಗಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನಂತರ ಮೈಸೂರು ಕಾರಾಗೃಹಕ್ಕೆ ಶಿಫ್ಟ್ ಮಾಡುವ ಸಿದ್ಧತೆ ಮಾಡಿಕೊಂಡಿದ್ದರು. ಇದರ ನಡುವೆ ನೌಷಾದ್ ಮಂಗಳೂರು ಜೈಲಿನಲ್ಲಿ ಯಾರನ್ನೋ ನೋಡಬೇಕು ಎಂದು ಹೇಳಿದ್ದ. ಜೈಲಿನಲ್ಲಿ ಇನ್ನೋರ್ವ ಕೈದಿ ಭೇಟಿಗಾಗಿ ಪೊಲೀಸರು ಕರೆದುಕೊಂಡು ಬಂದಿದ್ದು, ಈ ವೇಳೆ ಇದ್ದಕ್ಕಿದ್ದಂತೆ ನೌಷಾದ್ ಮೇಲೆ ಸಹ ಕೈದಿಗಳು ದಾಳಿ ಮಾಡಿದ್ದಾರೆ.
ಚೊಟ್ಟೆ ನೌಷಾದ್‌ನನ್ನು ಮೈಸೂರು ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಈ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.