Mangaluru: ತನಿಖೆಯಲ್ಲಿ ಲೋಪ: ಇಬ್ಬರು ಪೊಲೀಸ್‌ ಅಧಿಕಾರಿಗಳ ಅಮಾನತು

Share the Article

Mangaluru: ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ವಂಚನೆ ಮಾಡಿದ್ದ ಕ್ರಿಮಿನಲ್‌ ಪ್ರಕರಣ ತನಿಖೆಯಲ್ಲಿ ಗಂಭೀರ ಲೋಪವೆಸಗಿದ ಆರೋಪದ ಮೇಲೆ ನಗರದ ಪೂರ್ವ ಠಾಣೆಯ ಇನ್‌ಸ್ಪೆಕ್ಟರ್‌ ಸೋಮಶೇಖರ್‌ ಜಿ.ಸಿ. ಹಾಗೂ ಬರ್ಕೆ ಠಾಣೆಯ ಪಿಎಸ್‌ಐ ಉಮೇಶ್‌ ಕುಮಾರ್‌ ಎಂ.ಎನ್‌ ಅಮಾನತುಗೊಂಡಿದ್ದಾರೆ.

ಕಂಕನಾಡಿಯ ಹೈರ್‌ಗ್ಲೋ ಎಲೆಗಂಟ್‌ ಓವರ್‌ಸೀಸ್‌ ಇಂಟರ್‌ನ್ಯಾಷನಲ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ವಿದೇಶದಲ್ಲಿ ಉದ್ಯೋಗ ಕೊಡುವ ಭರವಸೆ ನೀಡಿ ರೂ. 1.65 ಲಕ್ಷ ಪಡೆದು ವಂಚನೆ ಮಾಡಿದ ಕುರಿತು ಸಂತ್ರಸ್ತ ವ್ಯಕ್ತಿಯೊಬ್ಬರು ನಗರ ಪೂರ್ವ ಠಾಣೆಗೆ ದೂರನ್ನು ನೀಡಿದ್ದರು. ವಿವಿಧ ಉದ್ಯೋಗಕಾಂಕ್ಷಿಗಳಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ರೂ.1.82 ಕೋಟಿ ವಂಚನೆ ಮಾಡಿರುವ ಕುರಿತು ದೂರನ್ನು ದಾಖಲು ಮಾಡಲಾಗಿತ್ತು.

ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಅವರು, ʼಇಬ್ಬರೂ ಅಧಿಕಾರಿಗಳೂ, ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿ, ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ಇಲಾಖೆಯು ಶಿಸ್ತುಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭ ಮಾಡಲಾಗಿದೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

 

Comments are closed.