Chaithra kundapura: ಮದ್ವೆ ಆದ ಬೆನ್ನಲ್ಲೇ ಚೈತ್ರಾ ಕುಂದಾಪುರ ಹೆಸರು ಚೇಂಜ್!!

Share the Article

Chaithra kundapura: ಕನ್ನಡ ಬಿಗ್ಬಾಸ್ ಸೀಸನ್ ಹನ್ನೊಂದರ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಹವಾ ಸೃಷ್ಟಿ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ತಾನೇ ತನ್ನ ಪ್ರೀತಿಸಿದ ಪ್ರಿಯತಮ ಶ್ರೀಕಾಂತ್ ಕಶ್ಯಪ್ ಜೊತೆ ಸಪ್ತಪದಿ ತುಳಿದಿದ್ದಾರೆ. ಇದೀಗ ಅವರು ಮದ್ವೆಯ ಬಳಿಕ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಇವರ ಮದುವೆಯ ಶಾಸ್ತ್ರದಲ್ಲಿ ಹೆಸರು ಬದಲಾವಣೆ ಮಾಡುವ ಕ್ರಮವಿದೆ. ಶ್ರೀಕಾಂತ್ ಅವರ ತಾಯಿ ಇವರಿಗೆ ಶ್ರೀಮೇಧಾ ಎಂಬ ಹೆಸರಿನಲ್ಲಿ ನಾಮಕರಣ ಮಾಡಿದ್ದಾರೆ. ವರನ ತಾಯಿ ಮದುಮಗಳಿಗೆ ಬಾಳೆಹಣ್ಣು ತಿನ್ನಿಸಿ ಹೆಸರು ಚೇಂಜ್ ಮಾಡುವ ಶಾಸ್ತ್ರವಿದು ಎನ್ನಲಾಗಿದೆ.

Comments are closed.