Indian Railway : ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಟಿಕೆಟ್ ಬುಕ್ ಮಾಡಲು ಹೊಸ ಆಪ್ ಬಿಡುಗಡೆ!!

Share the Article

Indian Railway : ಭಾರತೀಯ ರೈಲ್ವೆ ಇಲಾಖೆಯು ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು ಟಿಕೇಟ್ ಬುಕ್ ಮಾಡಲು ಹಾಕು ವಿವಿಧ ಸೇವೆಗಳನ್ನು ಒದಗಿಸಲು ಹೊಸ ಬಿಡುಗಡೆ ಮಾಡಿದೆ.

ಹೌದು, ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (IRCTC) ಪ್ರಯಾಣಿಕರ ಅನುಕೂಲಕ್ಕಾಗಿ ‘ಸ್ವರೈಲ್’ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ಆಯಪ್ ಒಂದೇ ಸೂರಿನಡಿ ಬಹುತೇಕ ಎಲ್ಲಾ ರೈಲ್ವೆ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಆಪ್ ನಲ್ಲಿ ಏನೆಲ್ಲ ಸೌಲಭ್ಯವಿದೆ?

‘ಸ್ವರೈಲ್’ ಅನ್ನು ಸೂಪರ್ ಆಯಪ್ ಎಂದು ಕರೆಯುವುದು ಸೂಕ್ತವಾಗಿದೆ. ಟಿಕೆಟ್ ಕಾಯ್ದಿರಿಸುವಿಕೆ, ರೈಲು ಮಾಹಿತಿ, ಊಟ, ಪ್ರವಾಸೋದ್ಯಮ ಪ್ಯಾಕೇಜ್‌ಗಳು ಮತ್ತು ಲೈವ್ ಟ್ರ್ಯಾಕಿಂಗ್‌ನಂತಹ ಹಲವಾರು ಸೇವೆಗಳನ್ನು ಈ ಒಂದೇ ಆಯಪ್‌ನಲ್ಲಿ ಪಡೆಯಬಹುದು.

ಅಷ್ಟೇ ಅಲ್ಲದೆ ಇನ್ನು ಮುಂದೆ ರೈಲು ನಿಲ್ದಾಣದಲ್ಲಿ ಲಗೇಜ್ ಹಿಡಿದು ಪರದಾಡುತ್ತಾ, ರೈಲಿನ ಪ್ಲಾಟ್‌ಫಾರ್ಮ್ ಸಂಖ್ಯೆ, ಬೋಗಿಯ ಸ್ಥಾನ, ಊಟದ ಆರ್ಡರ್ ಅಥವಾ ವಿಶ್ರಾಂತಿ ಕೊಠಡಿಯ ಬುಕಿಂಗ್‌ಗಾಗಿ ಬೇರೆ ಬೇರೆ ಆಯಪ್‌ಗಳನ್ನು ಬಳಸುವ ಅಥವಾ ನಿಧಾನಗತಿಯ ಆಯಪ್‌ನಿಂದ ಬೇಸರಗೊಳ್ಳುವ ಅಗತ್ಯವಿಲ್ಲ. ‘ಸ್ವರೈಲ್’ ಆಯಪ್ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ.

ಇನ್ನು ಈ ಅಪ್ಲಿಕೇಶನ್ ಪ್ರಸ್ತುತ Android ಫೋನ್‌ಗಳಿಗೆ ಮಾತ್ರ ಲಭ್ಯವಿದೆ. ಐಫೋನ್ ಬಳಕೆದಾರರು iOS ಆವೃತ್ತಿಯನ್ನು ಬಿಡುಗಡೆ ಮಾಡುವವರೆಗೆ ಕಾಯಬೇಕಾಗುತ್ತದೆ. ನೀವು ನಿಮ್ಮ IRCTC ರುಜುವಾತುಗಳನ್ನು ಬಳಸಿಕೊಂಡು ಲಾಗಿನ್ ಮಾಡಬಹುದು ಅಥವಾ ಅದರ ಸಿಂಗಲ್ ಸೈನ್-ಆನ್ (SSO) ವೈಶಿಷ್ಟ್ಯದ ಮೂಲಕ ಹೊಸ ಖಾತೆಯನ್ನು ರಚಿಸಬಹುದು.

Comments are closed.