D K Shivkumar : ‘ಟ್ಯಾಕ್ಸ್ ಕಟ್ಟಿದರೆ ಮಾತ್ರ ಗೃಹಲಕ್ಷ್ಮಿ ಹಣ ನೀಡೋದು’ – ‘ಗ್ಯಾರೆಂಟಿ’ ಗೆ ಉಲ್ಟಾ ಹೊಡೆದ ಡಿಸಿಎಂ ಡಿಕೆಶಿ!!

D K Shivkumar : ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಕೂಡ ಒಂದು. ಈ ಯೋಜನೆಯ ಮೂಲಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಂತಹ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ ಹಣ ಸಿಗುತ್ತದೆ. ಅದರೀಗ ರಾಜ್ಯ ಸರ್ಕಾರವು ಕೆಲವು ತಿಂಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಹಣವನ್ನು ನೀಡಿಲ್ಲ. ಈ ಕುರಿತು ರಾಜ್ಯಾದ್ಯಂತ ಮಹಿಳೆಯರ ಆಕ್ರೋಶ ಕೇಳಿ ಬರುತ್ತಿದೆ. ಹೀಗಿರುವಾಗಲೇ ಗೃಹಲಕ್ಷ್ಮಿ ಹಣ ಪಾವತಿ ವಿಚಾರವಾಗಿ ಡಿಕೆ ಶಿವಕುಮಾರ್ ಅವರು ಉಲ್ಟಾ ಹೊಡೆದಿದ್ದಾರೆ.
ಹೌದು ಹೊಸಪೇಟೆಯಲ್ಲಿ ಮಾಧ್ಯಮದವರು ಅಂದಿಗೆ ಮಾತನಾಡುವಾಗ ಗೃಹಲಕ್ಷ್ಮಿ ಹಣ ಜಮಾ ಮಾಡಿಲ್ಲ, ಯಾಕೆ? ಎಂದ ಪ್ರಶ್ನೆ ಗೆ ಉತ್ತರಿಸಿದ ಡಿಕೆ ಶಿವಕುಮಾರ್ ಅವರು ನಾವು ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳು ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಸರ್ಕಾರದ ಹಣ ಬರುತ್ತಿರಬೇಕು ನೀವು ಟ್ಯಾಕ್ಸ್ ಕಟ್ಟುತ್ತಿರಬೇಕು ಆಗ ನಾವು ಅದನ್ನು ಕೊಡುತ್ತಿರುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಅದಕ್ಕೆ ಮಾಧ್ಯಮದವರು ‘ಸರ್ ನೀವು ಚುನಾವಣೆ ವೇಳೆ ಪ್ರತಿ ತಿಂಗಳು ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದೀರಿ. ಈಗ ಹೀಗೆ ಹೇಳಿದರೆ ಹೇಗೆ?’ ಎಂದು ಕೇಳಿದಾಗ ನಾವು ಹಾಗೆ ಹೇಳಿಲ್ಲ, ಕಾಂಟ್ರಾಕ್ಟ್ ಮಾಡಿದರೆ ಒಮ್ಮೆಲೆ ಹಣೆಬರುತ್ತದೆ? ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಕಾಯಬೇಕು. ಇದು ಕೂಡ ಹಾಗೆಯೇ’ ಎಂದು ಉಡಾಫೆ ಉತ್ತರವನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ನೀಡಿದ್ದಾರೆ.
Comments are closed.