ಸೊರಬ, ತೀರ್ಥಹಳ್ಳಿಯಲ್ಲಿ ತಟ್ಟೆ ಬ್ಯಾಂಕ್ ಆರಂಭ, ಏನಿದು ತಟ್ಟೆ ಬ್ಯಾಂಕ್?

Share the Article

Soraba: ಸೊರಬದ ಮುರುಘಾ ಮಠದಲ್ಲಿ ಬೆಂಗಳೂರಿನ ಅದಮ್ಯ ಚೇತನ, ಮುರುಘಾ ಮಠ ಹಾಗೂ ಪರಿಸರ ಜಾಗೃತಿ ಟ್ರಸ್ಟ್ ವತಿಯಿಂದ ಅನಂತ ಪ್ಲೇಟ್ (ತಟ್ಟೆ) ಬ್ಯಾಂಕ್ ಉದ್ಘಾಟನ ಕಾರ್ಯಕ್ರಮ ಹಾಗೂ ಪವಿತ್ರವನಕ್ಕೆ ಜಡೆ ಸಂಸ್ಥಾನ ಹಾಗೂ ಸೊರಬ ಮರುಘಾ ಮಠದ ಡಾ. ಮಹಾಂತ ಸ್ವಾಮೀಜಿ ಚಾಲನೆ ನೀಡಲಾಯಿತು.

ಬಳಿಕ ಮಾತಾನಾಡಿದಂತಹ ಜಡೆ ಸಂಸ್ಥಾನದ ಸ್ವಾಮಿಜಿಗಳಾದಂತಹ ಡಾ. ಮಹಾಂತ ಸ್ವಾಮೀಜಿಯವರು ಮಾತನಾಡಿ ‘ಪ್ಲಾಸ್ಟಿಕ್ ಹಾಗೂ ಪೇಪರ್ ಪ್ಲೇಟ್, ಕಪ್ ಗಳನ್ನು ಬಳಸುವುದರಿಂದ ಪರಿಸರಕ್ಕೆ, ಪ್ರಾಣಿಗಳಿಗೆ ಹಾನಿಯಾಗುತ್ತಿದ್ದು, ಇದನ್ನು ತಪ್ಪಿಸುವ ಚಿಂತನೆಯಿಂದ ಸ್ಟೀಲ್ ತಟ್ಟೆ ಲೋಟದ ಬ್ಯಾಂಕ್ ಆರಂಭಿಸಿದ್ದು ಜನರು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ನಂತರದಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆಯಾದಂತಹ ಡಾ. ತೇಜಸ್ವಿನಿ ಅನಂತ ಕುಮಾರ್ ಅವರು ಮಾತನಾಡಿ ‘ಕಾರ್ಯಕ್ರಮಗಳಲ್ಲಿ ಪೇಪರ್ ಕಪ್, ಪ್ಲೇಟ್ ಬಳಕೆ ಸಹಜವಾಗುತ್ತಿದೆ. ಇದು ಪರಿಸರ ಹಾಗೂ ಜಾನುವಾರುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ತಡೆಯುವ ಉದ್ದೇಶದಿಂದ ಸೊರಬ ಮುರುಘಾ ಮಠದಲ್ಲಿ ಸ್ಟೀಲ್ ತಟ್ಟೆ ಹಾಗೂ ಕಪ್ ಬ್ಯಾಂಕ್ ತೆರೆಯುತ್ತಿದ್ದೇವೆ’ ಎಂದರು.

ಮುರುಘಾ ಮಠದಲ್ಲಿ ಆರಂಭಿಸಿದ ಪ್ಲೇಟ್ ಬ್ಯಾಂಕ್‌ಗೆ 500 ತಟ್ಟೆ 500 ಲೋಟಗಳನ್ನು ಒದಗಿಸಲಾಗಿದ್ದು, ತೀರ್ಥಹಳ್ಳಿಯ ಕಟ್ಟೆಹಕ್ಕಲು ಸಾಲ್ಗುಡಿ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಅನಂತ ಪ್ಲೇಟ್ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ. ಪ್ರಮುಖರಾದಂತಹ ಪ್ರದೀಪ್ ಓಕ್, ಚಕ್ರವಾಕ ಸುಬ್ರಹ್ಮಣ್ಯ, ಎಂ.ಆರ್.ಪಾಟೀಲ್‌, ಶ್ರೀಪಾದ ಬಿಚ್ಚುಗತ್ತಿ, ಕೆ.ವೆಂಕಟೇಶ್, ಡಿ.ಶಿವಯೋಗಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.