ಪುತ್ತೂರು ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ : ರಾಷ್ಟ್ರ ದ್ರೋಹಿಗಳ ವಿರುದ್ಧ ಗುಡುಗಿದ ಕಟೀಲ್
ಪುತ್ತೂರು ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೂತನ ಪದಾಧಿಕಾರಿಗಳಿಗೆ ಪಕ್ಷದ ಸಂವಿಧಾನ ಹಾಗೂ ನೀತಿ ,ನಿಯಮಗಳ ಕುರಿತು ಮಾಹಿತಿ ನೀಡಿದರು.
ಪುತ್ತೂರಿನ ಸಾಲ್ಮರದ ಕೋಟೇಶ ಹಾಲ್ನಲ್ಲಿ ನಡೆದ ಪದಗ್ರಹಣ ಸಮಾರಂಭಕ್ಕೆ ರಾಜ್ಯ ಬಿಜೆಪಿಯ ಅಧ್ಯಕ್ಷರು ಮಂಗಳೂರಿನ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಇವರು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಹಾಜರಿದ್ದರು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಉತ್ತಮ ಯೋಜನೆಗಳ ಮೂಲಕ ಜನಪ್ರೀಯವಾಗಿದ್ದು, ಪದಾಧಿಕಾರಿಗಳು ಈ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ. ಪ್ರತಿಯೊಬ್ಬ ಬೂತ್ ಮಟ್ಟದ ಅಧ್ಯಕ್ಷ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಂತೆಯೇ ಆಗಿದ್ದು, ಪಕ್ಷದ ಬಲವರ್ಧನೆಗೆ ಶ್ರಮಿಸಬೇಕೆಂದು ಹೇಳಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಇನ್ನೆಂದೂ ಯಾರೂ ದೇಶದ್ರೋಹಿ ಕೆಲಸ ಮಾಡದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸಿ ಎಎ ಪ್ರತಿಭಟನೆಯ ಹೆಸರಿನಲ್ಲಿ ದೇಶದ್ರೋಹಿ ಹೇಳಿಕೆಗಳನ್ನು ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ನಕ್ಸಲ್ ಪರ ವಿಚಾರವುಳ್ಳವರು, ಕಮ್ಯುನಿಷ್ಟರು ಹಾಗೂ ಇವರೆಲ್ಲರ ಹಿಂದೆ ಕಾಂಗ್ರೇಸ್ ಕುಮ್ಮಕ್ಕಿನಿಂದಾಗಿ ಇಂಥಹ ದೇಶದ್ರೋಹಿ ಹೇಳಿಕೆಗಳನ್ನು ನೀಡುವ ಪ್ರಕ್ರಿಯೆಗಳು ನಡೆಯುತ್ತಿದೆ.
ಇಂಥ ದೇಶದ್ರೋಹಿಗಳಲ್ಲಿ ನಾಲ್ವರಿಗೆ ಸರಿಯಾದ ಕಠಿಣ ಶಿಕ್ಷೆಯಾದಲ್ಲಿ ಮತ್ತೆ ಇಂಥಹ ಪ್ರಕ್ರಿಯೆಗಳಲ್ಲಿ ಯಾರೂ ಗುರುತಿಸಿಕೊಳ್ಳುವುದಿಲ್ಲ ಎಂದ ಅವರು ರಾಜ್ಯ ಸರಕಾರ ಈಗಾಗಲೇ ದೇಶದ್ರೋಹಿ, ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಬಂಧಿಸಿದೆ ಎಂದರು.
ಸಭೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠ0ದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ನಗರ ಮಂಡಲ ಅಧ್ಯಕ್ಷ ಜಗನ್ನಿವಾಸ ರಾವ್, ಶ್ರೀಮತಿ ಗೌರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಜೀವಂಧರ್ ಜೈನ್, ಮತ್ತಿತರರು ಉಪಸ್ಥಿರಿದ್ದರು.