ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನ ಕಳ್ಳರ ಬಂಧನ | ನ್ಯಾಯಾಂಗ ವಶಕ್ಕೆ

Share the Article

ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ದೇವಸ್ಥಾನವೊಂದರ ವಠಾರದಲ್ಲಿ ದಿನಾಂಕ 18-01-2020 ರಂದು ಬಂಟ್ವಾಳ ತೆಂಕಕಜೆಕ್ಕಾರು ಗ್ರಾಮದ ನಿವಾಸಿ ಶ್ರೀಮತಿ ಹೊನ್ನಮ್ಮ ಮತ್ತು ಬಂಟ್ವಾಳ ಉಳಿ ಗ್ರಾಮದ ನಿವಾಸಿ ಶ್ರೀಮತಿ ಮೋನಮ್ಮ ಎಂಬವರುಗಳ ಕುತ್ತಿಗೆಯಲ್ಲಿದ್ದ ಚಿನ್ನದ ಸರವವನ್ನು ಯಾರೋ ಕಳ್ಳರು ಕಳವು ಮಾಡಿರುವುದಕ್ಕೆ ಸಂಬಂಧಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 04/2020 ಹಾಗೂ 05/2020 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂದಪಟ್ಟಂತೆ ಆರೋಪಿಗಳಾದ ಹಾಸನ ಜಿಲ್ಲೆ, ಅರಕಲಗೂಡು ತಾಲೂಕು, ಕೋಟೆ ಸಾಲುಗೇರಿ ನಿವಾಸಿಗಳಾದ ಶ್ರೀಮತಿ ಲಕ್ಷ್ಮೀಯಮ್ಮಅಲಿಯಾಸ್ ಗೌರಮ್ಮ (60) ಮತ್ತು ಶ್ರೀಮತಿ ಅಶ್ವಿನಿ (22) ಎಂಬವರುಗಳನ್ನು ಬಂಧಿಸಿ ಮಾಡಿ, ಆರೋಪಿಗಳು ಕಳವು ಮಾಡಿದ 23.90 ಗ್ರಾಂ ತೂಕದ ಚಿನ್ನದ ಚೈನ್‌ ಮತ್ತು 16.18 ಗ್ರಾಂ ತೂಕದ ಚಿನ್ನದ ಇನ್ನೊಂದು ಚೈನ್ ನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಚೈನ್ ನ ಒಟ್ಟು ಅಂದಾಜು ಮೌಲ್ಯ ರೂ. 1,37,000 ಆಗಿರುತ್ತದೆ.
ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

Leave A Reply

Your email address will not be published.