ಸುಳ್ಯದ NMC ಉಪನ್ಯಾಸಕ ಡಾ| ಪೂವಪ್ಪ ಕಣಿಯೂರು ಅಮಾನತ್ತಿಗೆ ಶಿಕ್ಷಣ ಇಲಾಖೆಗೆ ಬಿಜೆಪಿ ಬಿಜೆಪಿ ದೂರು । CAA ಬಗ್ಗೆ ಅಪಪ್ರಚಾರದ ಹಿನ್ನೆಲೆ

ಸುಳ್ಯದ NMC ಯಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ| ಪೂವಪ್ಪ ಕಣಿಯೂರು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಬಿಜೆಪಿ ಮನವಿ ಸಲ್ಲಿಸಿದೆ.

ಡಾ| ಪೂವಪ್ಪ ಕಣಿಯೂರು ಇವರು ಸರಕಾರೀ ಉದ್ಯೋಗದಲ್ಲಿದ್ದು, ಈಗ ತಮ್ಮ ವಾಟ್ಸ್ ಆಪ್ ಮೂಲಕ ದೇಶದ ಸಂವಿಧಾನ ಒಪ್ಪಿಕೊಂಡ ಪೌರತ್ವ ಕಾಯ್ದೆ-2019 ನ್ನು ವಿರೋಧಿಸುತ್ತಾ, ದೇಶದ ಸಂವಿಧಾನದ ಬಗ್ಗೆ ಅಪನಂಬಿಕೆ ಬರುವಂತೆ ಬರೆದಿದ್ದಾರೆ. ಅಲ್ಲದೆ, ಪೌರತ್ವ ಕಾಯ್ದೆ-2019 (CAA) ಬಗ್ಗೆ ಮೂಡುವ ಹಲವು ತಪ್ಪು ಅಭಿಪ್ರಾಯಗಳನ್ನು ನಿಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳು ಅರಿವು ಮೂಡಿಸುವ ಕೆಲಸದ ಬಗ್ಗೆ ಕೂಡ ತಪ್ಪು ತಿಳುವಳಿಕೆ ಮೂಡುವಂತೆ ಬರೆದಿರುತ್ತಾರೆ.

ಓವ್ರ ಸರಕಾರಿ ನೌಕರನಾಗಿ ಶಿಕ್ಷಣ ಇಲಾಖೆಯ ಸೇವಾ ನಿಯಮಾವಳಿಗಳಿಗೆ ಹಾಗೂ ಭಾರತದ ಸಂವಿಧಾನಕ್ಕೆ ಅಪಚಾರ ಎಸಗುವಂತೆ ವರ್ತಿಸಿದ ಡಾ| ಪೂವಪ್ಪ ಕಣಿಯೂರು ಇವರನ್ನು ತಕ್ಷಣ ಅಮಾನತ್ತು ಮಾಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಶಿಕ್ಷಣ ಇಲಾಖೆಯನ್ನು ಲಿಖಿತ ದೂರಿನ ಮೂಲಕ ಒತ್ತಾಯಿಸಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾದ ಸೂರಜ್ ಜೈನ್ ಮಾರ್ನಾಡ್ ಅವರು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯದರ್ಶಿ ರವಿಚಂದ್ರ ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

error: Content is protected !!
Scroll to Top
%d bloggers like this: