ಪುರುಷರಿಗೆ ಶಾಕಿಂಗ್ ಸುದ್ದಿ!!
ಬೆಂಗಳೂರು: ತಜ್ಞರು ನಡೆಸಿದ ಅಧ್ಯಯನದ ಪ್ರಕಾರ ಪುರುಷರಿಗೆ ಶಾಕಿಂಗ್ ಸುದ್ದಿ ದೊರಕಿದ್ದು, ರಾಜಧಾನಿಯಲ್ಲಿ ಪುರುಷರ ಆರೋಗ್ಯ ನಿರ್ಲಕ್ಷ್ಯ ಹೆಚ್ಚಳವಾಗಿ ರೋಗಗಳು ಪತ್ತೆಯಾದಂತಹ ಆತಂಕದ ಮಾಹಿತಿ ಹೊರಬಿದ್ದಿದೆ. ದೇಶದಲ್ಲಿ ಮಹಿಳೆಯರ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ಪುರುಷರ ಸಾವಿನ ಪ್ರಮಾಣವೇ ಹೆಚ್ಚಿದ್ದು, ಇದಕ್ಕೆ ಪುರುಷರ ಅರೋಗ್ಯ ನಿರ್ಲಕ್ಷ್ಯವೇ ಕಾರಣ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆ ಬೆಂಗಳೂರಿನ ನ್ಯೂರಾ ವೈದ್ಯಕೀಯ ಸಂಸ್ಥೆಯು ಅಧ್ಯಯನ ನಡೆಸಿದ್ದು, ಇದೀಗ ಶಾಕಿಂಗ್ ಸುದ್ದಿ ನೀಡಿದ್ದಾರೆ. ಕಳೆದ ವರ್ಷ ನಗರದಲ್ಲಿ ಯಾವುದೇ ರೋಗ ಲಕ್ಷಣ …