Banglore

ಮತ್ತೆ ಮಾಸ್ಕ್ ಕಡ್ಡಾಯ ನಿಯಮ

ರಾಜ್ಯದಲ್ಲಿ ಕೊರೊನಾ ವೈರಸ್ ನಾಲ್ಕನೇ ಅಲೆ ಆತಂಕ ಎದುರಾಗಿದ್ದು, ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸುವಂತೆ ಬಿಬಿಎಂಪಿ ವಿಶೇಷ ಆಯುಕ್ತರು ಹೇಳಿದ್ದಾರೆ. ಕರ್ನಾಟಕದ ಇಡೀ ರಾಜ್ಯದಲ್ಲಿ 301 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಪಕ್ಕಾ ಆಗಿದ್ದರೆ, ಅದರಲ್ಲಿ 291 ಮಂದಿ ಸೋಂಕಿತರು ಬೆಂಗಳೂರಿನವರೇ ಆಗಿದ್ದಾರೆ. ಹಾಗಾಗಿ ಇನ್ನು ಬೆಂಗಳೂರಿನ ಜನರಿಗೆ ಮಾಸ್ಕ್ ಧರಿಸುವುದು ಕಡ್ಡಾಯ ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ 220ಕ್ಕೂ ಹೆಚ್ಚು ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ.ಹೀಗಾಗಿ …

ಮತ್ತೆ ಮಾಸ್ಕ್ ಕಡ್ಡಾಯ ನಿಯಮ Read More »

ದೇಶದ ಅತೀ ಕೆಟ್ಟ ಚಾಲಕರನ್ನು ಹೊಂದಿರುವ ನಗರಗಳು ಯಾವುವು ಗೊತ್ತೆ ? ಕರ್ನಾಟಕದ ನಗರಗಳಿಗೆ ಎಷ್ಟನೆ ಸ್ಥಾನ ?

ದೇಶದ ಪ್ರಮುಖ ಸ್ವಯಂ-ಡ್ರೈವ್ ಬಾಡಿಗೆ ಕಾರು ಕಂಪನಿಗಳಲ್ಲಿ ಒಂದಾದ ಜೂಮ್‌ಕಾರ್‌ನ ಸಮೀಕ್ಷೆಯ ಪ್ರಕಾರ, ಕೆಟ್ಟ ಚಾಲಕರನ್ನು ಹೊಂದಿರುವ ನಗರಗಳ ಪಟ್ಟಿ ಹೊರಬಿದ್ದಿದೆ. ಜೂಮ್‌ಕಾರ್ ತನ್ನ ಸ್ವಾಮ್ಯದ ಡ್ರೈವ್ ಸ್ಕೋರಿಂಗ್ ಸಿಸ್ಟಮ್‌ನ ಸಹಾಯದಿಂದ ದೇಶದ 22 ನಗರಗಳಲ್ಲಿ ಸಮೀಕ್ಷೆಯನ್ನು ನಡೆಸಿತ್ತು. ಸ್ಕೋರಿಂಗ್‌ಗೆ ಸಂಬಂಧಿಸಿದಂತೆ, 50 ಕ್ಕಿಂತ ಕಡಿಮೆ ಸ್ಕೋರ್‌ಗಳನ್ನು ಪಡೆಯುವ ಚಾಲಕರನ್ನು ಕೆಟ್ಟವರು ಎಂದು ಪರಿಗಣಿಸಲಾಗುತ್ತದೆ ಮತ್ತು 65 ಕ್ಕಿಂತ ಹೆಚ್ಚು ಸ್ಕೋರ್ ಮಾಡುವವರನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಕೆಟ್ಟ ಚಾಲಕರನ್ನು ಹೊಂದಿರುವ ನಗರಗಳ ಬಗ್ಗೆ ಹೇಳುವುದಾದರೆ, ಮೈಸೂರು …

ದೇಶದ ಅತೀ ಕೆಟ್ಟ ಚಾಲಕರನ್ನು ಹೊಂದಿರುವ ನಗರಗಳು ಯಾವುವು ಗೊತ್ತೆ ? ಕರ್ನಾಟಕದ ನಗರಗಳಿಗೆ ಎಷ್ಟನೆ ಸ್ಥಾನ ? Read More »

ನಿವೃತ್ತ ಯೋಧನ ಬರ್ಬರ ಕೊಲೆಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ !! | ಕಣ್ಣಿಗೆ ಖಾರದ ಪುಡಿ ಎರಚಿ, ಸುತ್ತಿಗೆಯಿಂದ ಹೊಡೆದು ದುಷ್ಕರ್ಮಿಗಳಿಂದ ಹತ್ಯೆ

ನಿವೃತ್ತ ಯೋಧರೊಬ್ಬರಿಗೆ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಹಲಸೂರು ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ದೊಮ್ಮಲೂರಿನ ಗೌತಮನಗರ ನಿವಾಸಿ ಸುರೇಶ್‌ (56) ಕೊಲೆಯಾದವರು. ಭಾರತೀಯ ಸೇನೆಯಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸುರೇಶ್‌, ಕೆಲ ವರ್ಷಗಳ ಹಿಂದೆ ಪತ್ನಿಗೆ ವಿಚ್ಛೇದನ ನೀಡಿ ತಾಯಿಯೊಂದಿಗೆ ಹಲಸೂರು ಠಾಣಾ ವ್ಯಾಪ್ತಿಯ ದೊಮ್ಮಲೂರು ಬಳಿ ಗೌತಮ್ ಕಾಲೋನಿಯಲ್ಲಿ ವಾಸವಾಗಿದ್ದರು. ಮೂರು ವರ್ಷಗಳ ಹಿಂದೆ ತಾಯಿ ಮೃತಪಟ್ಟ ಬಳಿಕ ಒಬ್ಬರೇ ಮನೆಯಲ್ಲಿದ್ದರು. …

ನಿವೃತ್ತ ಯೋಧನ ಬರ್ಬರ ಕೊಲೆಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ !! | ಕಣ್ಣಿಗೆ ಖಾರದ ಪುಡಿ ಎರಚಿ, ಸುತ್ತಿಗೆಯಿಂದ ಹೊಡೆದು ದುಷ್ಕರ್ಮಿಗಳಿಂದ ಹತ್ಯೆ Read More »

64ನೇ ಗ್ರ್ಯಾಮಿ ಅವಾರ್ಡ್​ ಮುಡಿಗೇರಿಸಿಕೊಂಡ ಬೆಂಗಳೂರು ಮೂಲದ ರಿಕ್ಕಿ ಕೇಜ್ !! | ಎರಡನೇ ಬಾರಿಗೆ ಪ್ರಶಸ್ತಿ ಸ್ವೀಕರಿಸಲು “ನಮಸ್ತೆ” ಎನ್ನುತ್ತಾ ವೇದಿಕೆಯೇರಿದ ಮ್ಯೂಸಿಕ್ ‌ಕಂಪೋಸರ್

64ನೇ ಗ್ರ್ಯಾಮಿ ಅವಾರ್ಡ್​ ಕಾರ್ಯಕ್ರಮವು ಅಮೆರಿಕಾದ ಲಾಸ್​ ವೇಗಸ್​ನಲ್ಲಿ ನಡೆದಿದ್ದು, ಭಾರತದ ಮ್ಯೂಸಿಕ್​ ಕಂಪೋಸರ್​ ರಿಕ್ಕಿ ಕೇಜ್‌ಗೆ ಈ ಪ್ರಶಸ್ತಿ ದೊರೆತಿದೆ. ಬೆಂಗಳೂರಿನಲ್ಲಿ ನೆಲೆಸಿರುವ ರಿಕ್ಕಿ ಕೇಜ್‌ ಸಂಯೋಜನೆಯ ಆಲ್ಬಂಗೆ 2015ರಲ್ಲಿ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಇದೀಗ ಮತ್ತೊಮ್ಮೆ ರಿಕ್ಕಿ ಗ್ರ್ಯಾಮಿ ಅಂಗಳದಲ್ಲಿ ನಗೆ ಬೀರಿದ್ದಾರೆ. “ನಮಸ್ತೆ” ಎನ್ನುತ್ತಾ ವೇದಿಕೆ ಏರಿದ ರಿಕ್ಕಿ ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲೂ ಪಸರಿಸಿದರು ಎನ್ನಬಹುದು. ಇನ್ನು ಈ ಹಿಂದೆ 2015ರಲ್ಲಿ ‘ವಿಂಡ್ಸ್​ ಆಫ್​ ಸಂಸಾರ’ ಎಂಬ ಆಲ್ಬಂಗೆ ಗ್ರ್ಯಾಮಿ ಅವಾರ್ಡ್ ದೊರೆತಿತ್ತು. …

64ನೇ ಗ್ರ್ಯಾಮಿ ಅವಾರ್ಡ್​ ಮುಡಿಗೇರಿಸಿಕೊಂಡ ಬೆಂಗಳೂರು ಮೂಲದ ರಿಕ್ಕಿ ಕೇಜ್ !! | ಎರಡನೇ ಬಾರಿಗೆ ಪ್ರಶಸ್ತಿ ಸ್ವೀಕರಿಸಲು “ನಮಸ್ತೆ” ಎನ್ನುತ್ತಾ ವೇದಿಕೆಯೇರಿದ ಮ್ಯೂಸಿಕ್ ‌ಕಂಪೋಸರ್ Read More »

ಹೊಸದಾಗಿ ಬಂದಿದೆ ‘ಗೋಲ್ಡ್ ಕಾರ್ ‘|ಈ ಕಾರ್ ಟ್ಯಾಕ್ಸಿಲಿ ಪ್ರಯಾಣಿಸಬೇಕಾದರೆ ನೀವು ನೀಡಬೇಕು 7ಲಕ್ಷ!

ಇಂದಿನ ಟೆಕ್ನಾಲಜಿಯಲ್ಲಿ ಕಾರುಗಳಿಗೆ ಏನು ಕಮ್ಮಿ ಇಲ್ಲ. ವಿಭಿನ್ನ ಎಂಬಂತೆ ಹೊಸ-ಹೊಸ ಕಾರುಗಳು ಮಾರುಕಟ್ಟೆಗೆ ಬರುತ್ತಲೇ ಇದೆ. ಅದೆಷ್ಟೇ ಬಂದರೂ ಅವುಗಳಿಗಿರುವ ಡಿಮ್ಯಾಂಡ್ ಕಮ್ಮಿಯಾಗಿಲ್ಲ ನೋಡಿ. ಯಾಕಂದ್ರೆ ಹೊಸ ಮಾದರಿಯ ಕಾರ್ ಬರುತ್ತಿದ್ದಂತೆ ಕುತೂಹಲ ಹೆಚ್ಚಾಗಿರುತ್ತೆ. ಅದರಲ್ಲೂ ಬೆಂಗಳೂರು ಅಂದ್ರೆ ಕೇಳೋದೇ ಬೇಡ. ಸಿಟಿ ಜನ ಹೇಗೆ ಎಂಬ ಅರಿವು ನಿಮಗಿದೆ ಅಲ್ವಾ? ಹಾಗಾಗಿ ಬೆಂಗಳೂರಿನ ರಸ್ತೆಗಳಲ್ಲಿ ಡಿಫರೆಂಟ್ ಕಾರು,ವಿದೇಶಿ ಕಾರುಗಳಿಗೆ ಭರವಿಲ್ಲ. ಹೌದು. ಇದೀಗ ಬೆಂಗಳೂರಿನಲ್ಲಿ ಮಿಂಚುತ್ತಿದೆ ‘ಗೋಲ್ಡನ್ ಕಾರ್’..ಸಾಮಾನ್ಯವಾಗಿ ರೋಲ್ಸ್ ರಾಯ್ಸ್ ಕಾರುಗಳ ಓಡಾಟವನ್ನು …

ಹೊಸದಾಗಿ ಬಂದಿದೆ ‘ಗೋಲ್ಡ್ ಕಾರ್ ‘|ಈ ಕಾರ್ ಟ್ಯಾಕ್ಸಿಲಿ ಪ್ರಯಾಣಿಸಬೇಕಾದರೆ ನೀವು ನೀಡಬೇಕು 7ಲಕ್ಷ! Read More »

ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಲ್ಲೂ ಪ್ರತಿಭಟನೆ, ಮೆರವಣಿಗೆ ಮಾಡುವಂತಿಲ್ಲ !! | ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್

ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಇತರೆ ಯಾವುದೇ ಭಾಗದಲ್ಲೂ ರಾಜಕೀಯ ಅಥವಾ ರಾಜಕೀಯೇತರ ಸಂಘಟನೆ ಅಥವಾ ಗುಂಪು ಯಾವುದೇ ಪ್ರತಿಭಟನೆ, ಮೆರವಣಿಗೆ ಅಥವಾ ಸಭೆಗಳನ್ನು ನಡೆಸಬಾರದು ಎಂದು ಹೈಕೋರ್ಟ್ ಗುರುವಾರ ಮಹತ್ವದ ಆದೇಶ ಹೊರಡಿಸಿದೆ. ಆಂದೋಲನಕ್ಕೆ ಮೀಸಲಾಗಿರುವ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು. ಇತರ ಕಡೆ ಪ್ರತಿಭಟನೆ ಮತ್ತು ಪಾದಯಾತ್ರೆಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಹೈಕೋರ್ಟ್ ಹೇಳಿದೆ. ಫ್ರೀಡಂ ಪಾರ್ಕ್ ಹೊರತುಪಡಿಸಿ ಇತರ ಕಡೆ ಪ್ರತಿಭಟನೆ ಅಥವಾ ಅಂತಹ …

ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಲ್ಲೂ ಪ್ರತಿಭಟನೆ, ಮೆರವಣಿಗೆ ಮಾಡುವಂತಿಲ್ಲ !! | ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್ Read More »

ಹೊಸ ಕಾರು ಖರೀದಿಸಿ ಲಾಂಗ್ ಡ್ರೈವ್ ಹೋಗುತ್ತಿದ್ದ ಲೇಡಿ ಗ್ಯಾಂಗ್ ಮಾಡುತ್ತಿದ್ದದ್ದು ಮಾತ್ರ ಕಳ್ಳತನ !! | ಕಾರಲ್ಲೇ ಕಬ್ಬಿಣದ ರಾಡ್ ಇಟ್ಟುಕೊಂಡು ಹೆದ್ದಾರಿ ಬದಿಯ ಅಂಗಡಿಗಳಿಗೆ ಹಾಕುತ್ತಿದ್ದರು ಕನ್ನ | ಈ ಖತರ್ನಾಕ್ ಕಳ್ಳಿಯರ ತಂಡ ಕೊನೆಗೂ ಪೊಲೀಸ್ ಬಲೆಗೆ

ಬೆಂಗಳೂರು : ಹೊಸ ಕಾರು ಖರೀದಿಸಿದ ಮೇಲೆ ಲಾಂಗ್ಡ್ರೈವ್ ಹೋಗೋದು ಸಾಮಾನ್ಯ. ಆದ್ರೆ ಈ ಖತರ್ನಾಕ್ ಲೇಡಿ ಗ್ಯಾಂಗ್ ತಮ್ಮ ಶೋಕಿಗಾಗಿ ಕಾರು ಖರೀದಿಸಿ ಕಳ್ಳತನ ಮಾಡುತ್ತಿದ್ದು,ಬೆಂಗಳೂರಿನ ದೇವನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತೆಲಂಗಾಣ ರಾಜ್ಯದ ಪ್ರಕಾಶಂ ಜಿಲ್ಲೆಯಸುಮಲತಾ (24), ಅಂಕಮ್ಮ (30), ರಮ್ಯಾ(19)ಇಸ್ಮಾಯಿಲ್ (19) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಲ್ಲಿ ಸುಮಲತಾ ಹಾಗೂರಮ್ಯಾ ಇಬ್ಬರು ಸ್ನೇಹಿತೆಯರಾಗಿದ್ದು ಶೋಕಿಗಾಗಿಹೊಸ ಕಾರು ಖರೀದಿಸಿದ್ದರು.ಹೈದರಾಬಾದ್ ನಿಂದ ಬೆಂಗಳೂರು ಕಡೆಗೆ ಬಂದಿದ್ದ ಈ ಗ್ಯಾಂಗ್ ಶೋಕಿಗಾಗಿ ಲಾಂಗ್ ಡ್ರೈವ್ ಮಧ್ಯೆ ಹೆದ್ದಾರಿ …

ಹೊಸ ಕಾರು ಖರೀದಿಸಿ ಲಾಂಗ್ ಡ್ರೈವ್ ಹೋಗುತ್ತಿದ್ದ ಲೇಡಿ ಗ್ಯಾಂಗ್ ಮಾಡುತ್ತಿದ್ದದ್ದು ಮಾತ್ರ ಕಳ್ಳತನ !! | ಕಾರಲ್ಲೇ ಕಬ್ಬಿಣದ ರಾಡ್ ಇಟ್ಟುಕೊಂಡು ಹೆದ್ದಾರಿ ಬದಿಯ ಅಂಗಡಿಗಳಿಗೆ ಹಾಕುತ್ತಿದ್ದರು ಕನ್ನ | ಈ ಖತರ್ನಾಕ್ ಕಳ್ಳಿಯರ ತಂಡ ಕೊನೆಗೂ ಪೊಲೀಸ್ ಬಲೆಗೆ Read More »

ಮುಂಜಾನೆ ತಾಯಿಯ ಮಡಿಲಿಂದ ಎದ್ದು ಹೋದ ಯುವಕ ಬಾರದ ಲೋಕಕ್ಕೇ ಪ್ರಯಾಣಿಸಿದ| ಬೆಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಡಬದ ಯುವಕ ಮೃತ್ಯು-ಇನ್ನೋರ್ವನಿಗೆ ಗಾಯ

ಕಡಬ: ಉದ್ಯೋಗದ ನಿಮಿತ್ತ ಸ್ನೇಹಿತನೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದಾಗ ಬೈಕ್ ಅಪಘಾತ ಸಂಭವಿಸಿ ಆಲಂಕಾರು ನಿವಾಸಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದ್ದು, ಮೃತ ಯುವಕನನ್ನು ಆಲಂಕಾರು ನಿವಾಸಿ ರಾಜೀವಿ ಎಂಬವರ ಪುತ್ರ ನಂದೀಪ್(21) ಎಂದು ಗುರುತಿಸಲಾಗಿದೆ. ಮೃತ ಯುವಕ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಜನವರಿ 31 ರಂದು ಮುಂಜಾನೆ ಹಳೇನೇರೆಂಕಿಯ ತನ್ನ ಸ್ನೇಹಿತನೊಂದಿಗೆ ಬೆಂಗಳೂರಿಗೆ ಬೈಕ್ ನಲ್ಲಿ ತೆರಳಿದ್ದಾರೆ. ಬೆಂಗಳೂರು ತಲುಪುತ್ತಿದ್ದಂತೆ ಆಟೋ ರಿಕ್ಷಾ ಒಂದಕ್ಕೆ ಯುವಕರು ಚಲಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಯುವಕ …

ಮುಂಜಾನೆ ತಾಯಿಯ ಮಡಿಲಿಂದ ಎದ್ದು ಹೋದ ಯುವಕ ಬಾರದ ಲೋಕಕ್ಕೇ ಪ್ರಯಾಣಿಸಿದ| ಬೆಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಡಬದ ಯುವಕ ಮೃತ್ಯು-ಇನ್ನೋರ್ವನಿಗೆ ಗಾಯ Read More »

ಅತಿಥಿ ಉಪನ್ಯಾಸಕರ ನೇಮಕಕ್ಕೆ ಭಾರೀ ಸ್ಪಂದನೆ | 30 ಸಾವಿರಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ

ಬೆಂಗಳೂರು : 2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ರಾಜ್ಯದಲ್ಲಿ ಆರಂಭಿಸಿರುವ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಗುರುವಾರದವರೆಗೆ 30 ಸಾವಿರಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಹಾಕಿಕೊಂಡಿದ್ದಾರೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ರಾಜ್ಯ ಸರ್ಕಾರವು ಇತ್ತೀಚೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಬಳವನ್ನು ಎರಡೂವರೆ ಪಟ್ಟಿಗಿಂತ ಹೆಚ್ಚು ಏರಿಸಿದೆ. ಇದು ಅರ್ಹ …

ಅತಿಥಿ ಉಪನ್ಯಾಸಕರ ನೇಮಕಕ್ಕೆ ಭಾರೀ ಸ್ಪಂದನೆ | 30 ಸಾವಿರಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ Read More »

ಹಾಡಹಗಲೇ ಕಣ್ಣಿಗೆ ಖಾರದ ಪುಡಿ ಎರಚಿ ಯುವಕನಿಂದ ನಾಲ್ಕು ಲಕ್ಷ ದರೋಡೆ!! ಹಣ ಕಳೆದುಕೊಂಡ ಯುವಕನಿಂದ ಠಾಣೆಗೆ ದೂರು-ಪೊಲೀಸರಾ ಖಾರದ ವಿಚಾರಣೆಗೆ ಬಯಲಾಯಿತು ಖಾರದಪುಡಿಯ ಪ್ರಹಸನ

ಬೆಂಗಳೂರು: ಸಂಸ್ಥೆಯೊಂದರ ಮಾಲೀಕನ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದ ಯುವಕನೋರ್ವನಿಗೆ ಖಾರದ ಪುಡಿ ಎರಚಿ ನಾಲ್ಕು ಲಕ್ಷ ದೋಚಿದ್ದಾರೆ ಎಂಬ ನಾಟಕದ ಮುಖವೊಂದು ಠಾಣೆಯಲ್ಲಿ ಕಳಚಿಬಿದ್ದಿದ್ದು,ದೂರು ನೀಡಿದಾತನನ್ನೇ ಬಂಧಿಸಲಾಗಿದೆ.ಬಂಧಿತ ಆರೋಪಿಯನ್ನು ಅರುಣ್ ಎಂದು ಗುರುತಿಸಲಾಗಿದ್ದು, ಈತನೇ ತನ್ನ ಕಣ್ಣಿಗೆ ಖಾರದ ಪುಡಿ ಎರಚಿ ಯಾರೋ ಹಣ ಎಗರಿಸಿದ್ದಾರೆ ಎಂದು ಠಾಣೆಯ ಮೆಟ್ಟಿಲೇರಿದ್ದ. ಘಟನೆ ವಿವರ: ಬಂಧಿತ ಅರುಣ್ ತನ್ನ ಮಾಲೀಕನ ಬಳಿ ಒಂದು ಲಕ್ಷ ಸಾಲ ಕೇಳಿದ್ದನಂತೆ. ಮಾಲೀಕ ಸಾಲ ಕೊಡಲು ಒಪ್ಪಿರಲಿಲ್ಲ ಎಂಬ ಕಾರಣಕ್ಕೆ ಸಂಸ್ಥೆಯ ಒಟ್ಟು …

ಹಾಡಹಗಲೇ ಕಣ್ಣಿಗೆ ಖಾರದ ಪುಡಿ ಎರಚಿ ಯುವಕನಿಂದ ನಾಲ್ಕು ಲಕ್ಷ ದರೋಡೆ!! ಹಣ ಕಳೆದುಕೊಂಡ ಯುವಕನಿಂದ ಠಾಣೆಗೆ ದೂರು-ಪೊಲೀಸರಾ ಖಾರದ ವಿಚಾರಣೆಗೆ ಬಯಲಾಯಿತು ಖಾರದಪುಡಿಯ ಪ್ರಹಸನ Read More »

error: Content is protected !!
Scroll to Top