Home Business BSNL Cheapest Plan : ಜಸ್ಟ್‌ 49ರೂ. ರೀಚಾರ್ಜ್‌ ಮಾಡಿ, ನಿಮಗೆ ಸಿಗಲಿದೆ ಬಿಎಸ್‌ಎನ್‌ಎಲ್‌ನ ಭರ್ಜರಿ...

BSNL Cheapest Plan : ಜಸ್ಟ್‌ 49ರೂ. ರೀಚಾರ್ಜ್‌ ಮಾಡಿ, ನಿಮಗೆ ಸಿಗಲಿದೆ ಬಿಎಸ್‌ಎನ್‌ಎಲ್‌ನ ಭರ್ಜರಿ ಆಫರ್‌

Hindu neighbor gifts plot of land

Hindu neighbour gifts land to Muslim journalist

ಟೆಲಿಕಾಮ್ ದೈತ್ಯ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ 4G ಸೇವೆಯಿಂದ 5G ಸೇವೆ ನೀಡಲು ಅಣಿಯಾಗುತ್ತಿದ್ದು, ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಕೂಡಾ ಆಗಾಗ ಪರಿಚಯಿಸಿ ಜನರ ಮನ ಸೆಳೆಯುವಲ್ಲಿ ನಿರತವಾಗಿದೆ. ಈ ನಡುವೆ ಬಿಎಸ್​ಎನ್​ಎಲ್ ಕೂಡ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ಮುಂದಾಗಿದೆ.

ಸರ್ಕಾರಿ ಟೆಲಿಕಾಂ ಕಂಪನಿ BSNL ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಅತ್ಯಂತ ಕಡಿಮೆ ಬೆಲೆಗೆ ರೀಚಾರ್ಜ್ ಮಾಡುವ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. ಹೌದು!!.. ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಕೈಗೆ ಎಟಕುವ ಕಡಿಮೆ ದರದಲ್ಲಿ ಅಂದರೆ ಜಸ್ಟ್ 49 ರೂ.ಗೆ ಭರ್ಜರಿ ಆಫರ್ ನೀಡಲು ಅಣಿಯಾಗಿದೆ.

ಹೇಳಿ ಕೇಳಿ ಇದು ಡಿಜಿಟಲ್ ಯುಗ… ಮೊಬೈಲ್ ಎಂಬ ಮಾಯಾವಿಯ ಅನ್ವೇಷಣೆಯ ಬಳಿಕ ಎಲ್ಲೆಡೆ ಬಳಕೆಯ ವಿಚಾರದಲ್ಲಿ ಮಹತ್ತರ ಬದಲಾವಣೆಯಾಗಿ, ಈಗ ಮೊಬೈಲ್ ಫೋನ್ ಬಳಕೆ ಹೆಚ್ಚಾಗಿರುದರಿಂದ ಇಂಟರ್ನೆಟ್ ಬಳಕೆ ಕೂಡ ವೇಗವಾಗಿ ಏರಿಕೆ ಕಾಣುತ್ತಿದೆ. ಈ ನಡುವೆ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಜಿದ್ದಿಗೆ ಬಿದ್ದಂತೆ ಹೊಸ ಹೊಸ ಆಫರ್ ಗಳನ್ನು ಜನರಿಗೆ ಪರಿಚಯಿಸುತ್ತಿದೆ. ಹಾಗಾಗಿ, ಬಿಎಸ್ಎನ್ಎಲ್ ಕೂಡ ತನ್ನ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೊಸ ಯೋಜನೆಗಳನ್ನು ರೂಪಿಸಿದ್ದು ಕೈಗೆ ಎಟಕುವ ದರದಲ್ಲಿ ಆಫರ್ ನೀಡಲು ಮುಂದಾಗಿದೆ.

ಜಿಯೋ ಹಾಗೂ ಏರ್ಟೆಲ್ 4ಜಿ ಸೇವೆಯಿಂದ 5ಜಿ ಸೇವೆ ನೀಡಲು ಆರಂಭಿಸಿದ ಬೆನ್ನಲ್ಲೇ, BSNL ಕಂಪನಿಯು ತನ್ನ 4G ಸೇವೆಯನ್ನು ಹೊರತರಲು ತಯಾರಿ ನಡೆಸುತ್ತಿದ್ದು, ಇದು ಜನವರಿಯಿಂದ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಹಾಗಾಗಿ ಕಂಪನಿಯು 4G ನೆಟ್ವರ್ಕ್ ಸ್ಥಾಪಿಸಲು TCS ಗೆ ಟೆಂಡರ್ ನೀಡಿದೆ ಎಂಬ ಮಾಹಿತಿಗಳು ಕೂಡ ಬಲ್ಲ ಮೂಲಗಳ ಪ್ರಕಾರ ಹರಿದಾಡುತ್ತಿದೆ. ಅತಿ ಶೀಘ್ರದಲ್ಲಿಯೇ ಟೆಂಡರ್ ಗೆ ಟಿಸಿಎಸ್ ತನ್ನ ಸಮ್ಮತಿಯನ್ನು ಸೂಚಿಸುವ ಸಾಧ್ಯತೆ ಗಳಿವೆ. ಹಾಗಾಗಿ, 1 ಲಕ್ಷ ಟವರ್ಗಳನ್ನು ಸ್ಥಾಪಿಸಲು ಕಂಪನಿಗೆ ಆದೇಶ ಸಿಗಲಿದೆ ಎನ್ನಲಾಗುತ್ತಿದೆ.

ಚೀಪ್ & ಬೆಸ್ಟ್ ಯೋಜನೆಯ ಬೆಲೆ ಜಸ್ಟ್ 50 ರೂಪಾಯಿ ಆಗಿದ್ದು, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಗ್ರಾಹಕರಿಗೆ ಕೇವಲ 49 ರೂಪಾಯಿ ರಿಚಾರ್ಜ್ ಪ್ಲ್ಯಾನ್ ಅನ್ನು ನೀಡುತ್ತದೆ. BSNL ನ ಈ ಪ್ಲ್ಯಾನ್ ನ ಅವಧಿ 20 ದಿನಗಳಾಗಿದ್ದು, ಈ ಪ್ಲ್ಯಾನ್ ಮೂಲಕ ಗ್ರಾಹಕರು ಉಚಿತ ಕರೆ, ಡೇಟಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಅಷ್ಟೆ ಅಲ್ಲದೆ, 49 ರೂ. ಪ್ಲ್ಯಾನ್ ನಲ್ಲಿ 1GB ಡೇಟಾವನ್ನು ನೀಡಲಾಗಿದ್ದು, ಇದರೊಂದಿಗೆ 100 ನಿಮಿಷಗಳ ಲೋಕಲ್, ಎಸ್ ಟಿಡಿ ಧ್ವನಿ ಕರೆ ಸೌಲಭ್ಯಗಳನ್ನು ಕೂಡ ಗ್ರಾಹಕರು ಪಡೆಯಬಹುದಾಗಿದೆ.

ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 29 ರೂ. ಯೋಜನೆಯನ್ನು ನೀಡುತ್ತಿದ್ದು 49 ರ ಹೊರತಾಗಿ BSNL ತನ್ನ ಗ್ರಾಹಕರಿಗೆ 29 ರೂ.ಗೆ ವಿಶೇಷ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ನೀಡುತ್ತದೆ.

ಈ ಪ್ರಿಪೇಯ್ಡ್ ಪ್ಲ್ಯಾನ್ 5 ದಿನಗಳ ಅವಧಿಯನ್ನು ಹೊಂದಿದ್ದು, ಈ ಯೋಜನೆಯ ಮೂಲಕ 1 GB ಡೇಟಾ, ಫ್ರೀ ಕಾಲ್ ಸೌಲಭ್ಯ ದೊರೆಯಲಿದೆ. ಈ ಎರಡು ಆಫರ್ ಗಳು ಅತಿ ಕಡಿಮೆ ಹಾಗೂ ಕೈಗೆ ಎಟಕುವ ದರದಲ್ಲಿ ಲಭ್ಯವಾಗುವುದರಿಂದ ಬಿಎಸ್ಎನ್ಎಲ್ ಗ್ರಾಹಕರಿಗೆ ನೆರವಾಗುವುದರಲ್ಲಿ ಸಂಶಯವಿಲ್ಲ.