Fuel Price: ದಿಢೀರ್‌ 15 ರೂ. ಇಂಧನ ದರ ಕಡಿತ ಮಾಡಿದ ಸರಕಾರ

Fuel Price: ಇಂಡಿಯನ್ ಆಯಿಲ್ ಇಂಧನ ದರಗಳ ವ್ಯತ್ಯಯ ಕಾರ್ಪೊರೇಷನ್ ಲಕ್ಷದ್ವೀಪದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 15.3 ರೂ. ವರೆಗೆ ಕಡಿತಗೊಳಿಸಿದೆ. ಒಂದೇ ಬಾರಿಗೆ ಈ ಪ್ರಮಾಣದ ದರ ಕಡಿತ ಮಾಡಿರುವುದು ದೇಶದಲ್ಲಿ ಇದೇ ಮೊದಲು. ಮಾಲ್ಡೀವ್ಸ್‌ ಜೊತೆಗಿನ ಸಂಬಂಧ ಹದಗೆಟ್ಟಿರುವ ಬೆನ್ನಲ್ಲೇ ಲಕ್ಷದ್ವೀಪವನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರ ಮುಂದಾಗಿರುವ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇಂಧನ ದರ ಕಡಿತದ ಹಿಂದೆ ಲಕ್ಷದ್ವೀಪದ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಉದ್ದೇಶವಿದೆ. ಇದರಿಂದ ದ್ವೀಪವಾಸಿಗಳ ಬದುಕನ್ನು ಸುಲಭಗೊಳಿಸುವುದಲ್ಲದೆ, ದೀರ್ಘಾವಧಿ ಯಲ್ಲಿ ಸಕಾರಾತ್ಮಕ ನಿರ್ಮಾಣಗೊಳ್ಳುವ ಸರಕಾರ ವ್ಯಕ್ತಪಡಿಸಿದೆ. ಆಕರ್ಷಿಸುವುದರ ಹೂಡಿಕೆದಾರರನ್ನೂ ವಾತಾವರಣ ವಿಶ್ವಾಸವನ್ನು ಪ್ರವಾಸಿಗರನ್ನು ಜೊತೆಗೆ ಆಕರ್ಷಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗಿದೆ.

ಇದನ್ನೂ ಓದಿ: Nitin Gadkari: ಪ್ರಧಾನಿ ಹುದ್ದೆಯ ರೇಸ್ ಬಗ್ಗೆ ನಿತಿನ್ ಗಡ್ಕರಿ ಹೇಳಿದ್ದೇನು ?

ದೇಶದಲ್ಲಿ ಸದ್ಯ ಅತ್ಯಧಿಕ ಇಂಧನ ದರ ನಿಗದಿಯಾಗಿರುವ ರಾಜ್ಯಗಳ ಪೈಕಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯ ಮುಂಚೂಣಿಯಲ್ಲಿವೆ. ಇದೇ ವೇಳೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಿಲ್ಲಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳು, ಈಶಾನ್ಯ ರಾಜ್ಯಗಳಲ್ಲಿ ಅತಿ ಕಡಿಮೆ ಇಂಧನ ದರ ನಿಗದಿಯಾಗಿದೆ. ಈ ವ್ಯತ್ಯಾಸಕ್ಕೆ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಪ್ರಮುಖ ಕಾರಣ ಎಂದು ತೈಲ ಸಂಸ್ಥೆಗಳು ತಿಳಿಸಿವೆ.

ಇದನ್ನೂ ಓದಿ: Actress Ananya Pandey: ಲ್ಯಾಕ್ಮೆ ಫ್ಯಾಶನ್ ವೀಕ್ ನಲ್ಲಿ ಮಿಂಚಿದ ನಟಿ ಅನನ್ಯಾ ಪಾಂಡೆ

ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂ ಸ್ತಾನ್ ಪೆಟ್ರೋಲಿಯಂ ಕಳೆದ ವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 2 ರೂ. ಕಡಿತಗೊಳಿಸಿತ್ತು. ಈ ದರಕಡಿತದಿಂದಾಗಿ ವಾಹನ ಸವಾರರ ಮೇಲಿನ ಹೊರೆ ಕೊಂಚ ಕಡಿಮೆಯಾಗಿದ್ದರೂ ಇಂಧನ ದರ ನೂರರ ಕೆಳಗೆ ಇಳಿದಿಲ್ಲ.

1 Comment
  1. […] ಇದನ್ನೂ ಓದಿ: Fuel Price: ದಿಢೀರ್‌ 15 ರೂ. ಇಂಧನ ದರ ಕಡಿತ ಮಾಡಿದ ಸರ… […]

Leave A Reply

Your email address will not be published.