Belthangady: ಫಲಿಸದ ಪ್ರಯತ್ನ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ ನಂದಕುಮಾರ್ ವಿಧಿವಶ !

Belthangady: ಬೆಳ್ತಂಗಡಿ ವಾಣಿ ಕಾಲೇಜಿನ ಉಪನ್ಯಾಸಕ ನಂದ ಕುಮಾರ್ ಇವರು ಕೆಲ ಕಾಲದ ಅಸೌಖ್ಯದಿಂದ, ಕೊನೆಗೆ ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಮೇ 3ರಂದು ನಿಧನರಾಗಿದ್ದಾರೆ. ಕೇವಲ 36 ವರ್ಷದ ಪುದುವೆಟ್ಟು ಗ್ರಾಮದ ಎಟ್ಯೋಡು ಶೇಖರ ಗೌಡರವರ ಪುತ್ರರಾಗಿರುವ ಇವರು ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು.

ಇದನ್ನೂ ಓದಿ: Subramanya: 10 ದಿನಗಳ ಹಿಂದೆ‌ ಮದುವೆಯಾಗಿದ್ದ ಯುವಕ ಸಿಡಿಲು ಬಡಿದು ಸಾವು

ಇದನ್ನೂ ಓದಿ: Government Employees: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! ನಿಮಗಾಗಿ ಕಾದಿವೆ ಹಲವಾರು ಲಾಭಗಳು

1987ರ ನ.23ರಂದು ಜನಿಸಿದ ಇವರು ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯಲ್ಲಿ ತನ್ನ ಶಿಕ್ಷಣವನ್ನು ಪೂರೈಸಿದ್ದು, ಬಳಿಕ ಬೆಳ್ತಂಗಡಿ ಹಳೆಕೋಟೆಯಲ್ಲಿರುವ ವಾಣಿ ಶಿಕ್ಷಣ ಸಂಸ್ಥೆಯಲ್ಲಿ 2010 ರಲ್ಲಿ ಪದವಿ ಪೂರ್ವ ವಿಭಾಗದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದ್ದರು. 14 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರು. ಆದರೆ ವಿಧಿಯ ಆಟ ಬೇರೆ ಇತ್ತು. ಅವರಿಗೆ ಇತ್ತೀಚೆಗೆ ಅವರಿಗೆ ಕಾಣಿಸಿಕೊಂಡ ದೊಡ್ಡಕರುಳು ಮತ್ತು ಮೇದೋಜೀರಕ ಗ್ರಂಥಿಯ ಸಮಸ್ಯೆಯಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಲವು ದಿನಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಅವರು ಮೇ 3ರಂದು ಅವರು ತೀರಿಕೊಂಡಿದ್ದಾರೆ.

ಅವರನ್ನು ಉಳಿಸಿಕೊಳ್ಳಲು ಅವರ ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಊರವರು ಹಾಗೂ ಬಂಧು ಬಳಗದವರು ತಮ್ಮಿಂದಾದ ಸಹಾಯವನ್ನು ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಯಾವುದೇ ಪ್ರಾರ್ಥನೆ ಫಲಿಸದೆ, ಕೊನೆಗೂ ಅವರನ್ನು ವಿಧಿ ಎಳೆದೊಯ್ದಿದೆ.

ಮೃತ ನಂದಕುಮಾರ್ ರವರು ತಂದೆ, ತಾಯಿ, ಪತ್ನಿ ದಿವ್ಯಾ, ಇಬ್ಬರು ಹೆಣ್ಣು ಮಕ್ಕಳು, ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳು ಮತ್ತು ಅಪಾರ ಸಂಖ್ಯೆಯ ವಿದ್ಯಾರ್ಥಿ ಸಮುದಾಯವನ್ನು ಬಿಟ್ಟು ಅಗಲಿದ್ದಾರೆ.

Leave A Reply

Your email address will not be published.