Crime: ಹೋಟೆಲ್ ಮಾಲೀಕನ ಜೋಕ್‌’ನ್ನು ನಿಜ ಎಂದು ನಂಬಿದ ನೌಕರ, ಬೈಕ್ ಕದ್ದು ಜೈಲು ಸೇರಿದ ಯುವಕ !

Crime: ಮಾಲೀಕನ ಜೋಕ್ ಅನ್ನು ಗಂಭೀರವಾಗಿ ಪರಿಗಣಿಸಿದ ಹೋಟೆಲ್ ಸಹಾಯಕನೊಬ್ಬ ಅದೇ ಜೋಕ್ ಅನ್ನು ರಿಯಲ್ ಆಗಿ ಮಾಡಲು ಹೋಗಿ ಜೈಲು ಪಾಲಾಗಿದ್ದಾನೆ. ಆತ ಕೆಲಸಕ್ಕಿದ್ದ ಅದೇ ಹೋಟೆಲ್ ಮುಂದೆ ನಿಲ್ಲಿಸಿದ್ದ ಬೈಕ್ ನ್ನು ಕದ್ದು, ಇದೀಗ ಜೈಲು ಪಾಲಾಗಿರುವ ವಿಚಿತ್ರ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಜೋಕು ಪಾಲಿಸಲು ಹೋಗಿ ಆದ ಜೋಕರ್
ಕೇರಳದ ತಲಶ್ಶೇರಿ ಮೂಲದ ಶಹೀಮ್ ಸಿ ಅಲಿಯಾಸ್ ಶಾಜ್ ಎಂಬ ಹುಡುಗನೊಬ್ಬ ಮಡಿವಾಳದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಅದ್ಯಾಕೋ ಆತನಿಗೆ ತನ್ನ ಕೇರಳದ ಮನೆಯನ್ನು ಒಮ್ಮೆ ಭೇಟಿ ಮಾಡಿ ಬರಬೇಕೆಂದು ಅನ್ನಿಸಿದೆ. ಹಾಗಾಗಿ ತನ್ನ ಮಾಲೀಕನಿಂದ ತನಗೆ ಬರಬೇಕಾಗಿದ್ದ ಹಣವನ್ನು ಪಾವತಿಸುವಂತೆ ಆತ ಮಾಲೀಕನನ್ನು ಕೇಳಿಕೊಂಡಿದ್ದಾನೆ. ತನ್ನ ಸಂಬಳವನ್ನು ಪಾವತಿಸುವಂತೆ ಶಹೀಮ್ ಮಾಲೀಕರನ್ನು ಕೇಳಿದ್ದಾನೆ. ಬಾಕಿ ಸಂಬಳ ನೀಡಿದರೆ ತಾನು ಕೇರಳಕ್ಕೆ ಭೇಟಿ ನೀಡುವುದಾಗಿ ಹೇಳಿದರೂ ಮಾಲೀಕರು ಆತನಿಗೆ ಸಂಬಳ ನೀಡಲು ನಿರಾಕರಿಸಿದ್ದಾರೆ. ಸಂಬಳ ಕೊಡುವ ಬದಲು ಆ ಮಾಲಿಕ ನೌಕರನಿಗೆ ಒಂದು ಜೋಕ್ ಮಿಶ್ರಿತ ಸಲಹೆ ನೀಡಿದ್ದಾನೆ. ಇದೇ ಹೋಟೆಲ್ ಮುಂದೆ ನಿಲ್ಲಿಸಿದ್ದ ಬೈಕಿನ ಬೀಗವನ್ನು ಒಡೆದು ಕೇರಳಕ್ಕೆ ಪ್ರಯಾಣಿಸುವಂತೆ ಶಹೀoಗೆ ಆತನ ಮಾಲೀಕ ಸೂಚಿಸಿದ್ದಾನೆ.

ಹೇಗಾದರೂ ಸರಿ ತನ್ನ ಊರಿಗೆ ಹೋಗಬೇಕೆಂದು ತುದಿಗಾಲಲ್ಲಿ ನಿಂತಿದ್ದ ಹತ್ತೊಂಬತ್ತು ವರ್ಷದ ಶಹೀಮ್ ತನ್ನ ಮಾಲೀಕರು ನೀಡಿದ ಸಲಹೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿಯೇ ಬಿಟ್ಟಿದ್ದಾನೆ. ಹಾಗಾಗಿ, ಬೈಕಿನ ಲಾಕ್’ನ್ನು ಹೇಗೆ ಒಡೆಯುವುದು ಎನ್ನುವುದರ ಕುರಿತು ಯೂಟ್ಯೂಬ್ ನಲ್ಲಿ ಹುಡುಕಿದ್ದಾನೆ. ಅಲ್ಲಿ ಒಂದಷ್ಟು ಕಲಿತು ಆತ ಯಶಸ್ವಿಯಾಗಿ ಬೈಕ್‌ನ ಬೀಗ ಮುರಿದು, ಕಳವು ಮಾಡಿದ ಬೈಕ್‌ನಲ್ಲಿಯೇ ತಲಶ್ಶೇರಿ ತೆರಳಿದ್ದಾನೆ.

ಇತ್ತ ಬೈಕು ಕಳ್ಳತನ ಆಗುತ್ತಿದ್ದಂತೆ ಬೈಕಿನ ಮಾಲೀಕರು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೋಟೆಲ್ ಸಮವಸ್ತ್ರ ಧರಿಸಿದ್ದಾತ ಬೈಕ್‌ನ ಬೀಗ ಒಡೆದು ತೆಗೆದುಕೊಂಡು ಹೋಗುತ್ತಿರುವುದನ್ನು ಪೊಲೀಸರು ಸಿಸಿಟಿವಿ ದೃಶ್ಯಗಳ ಮೂಲಕ ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ ಶಹೀಮ್ ಕೇರಳಕ್ಕೆ ಹೋಗಿರುವುದಾಗಿ ಹೋಟೆಲ್‌ನವರು ತಿಳಿಸಿದ್ದಾರೆ. ಬೈಕ್ ಕಳ್ಳನ ಜಾಡು ಪೊಲೀಸರಿಗೆ ಸುಲಭವಾಗಿ ಸಿಕ್ಕಿದೆ. ಪೊಲೀಸರು ಆತನ ಮೊಬೈಲ್ ನ್ನು ಟ್ರ್ಯಾಕ್ ಮಾಡಿದ್ದು, ಆತ ಮತ್ತೆ ಬೆಂಗಳೂರಿಗೆ ಹಿಂತಿರುಗುತ್ತಿದ್ದಂತೆ ಆತನನ್ನು ಬಂಧಿಸಿ ಬೈಕ್ ಸಮೇತ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Prajwal Revanna: ವಿದೇಶದಲ್ಲಿ ಇದ್ರೂ ಬಿಡ್ತಾ ಇಲ್ಲ ಪ್ರಜ್ವಲ್ ರೇವಣ್ಣ; ಅಲ್ಲಿಂದಲೇ ಆಕೆಗೆ ಕರೆ – ಯಾರಾ ಯುವತಿ ?!

Leave A Reply

Your email address will not be published.