Telangana: ಬಿಸಿಲ ಧಗೆ ತಣಿಸಲು ಪೆಟ್ರೋಲ್ ಬಂಕ್ ಮಾಲೀಕನ ಮಾಸ್ಟರ್ ಪ್ಲಾನ್ – ವಿಡಿಯೋ ಕಂಡು ಜನ ಫಿದಾ !!

Telangana: ಬಿಸಿಲ ಧಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಕಂಡುಕೇಳರಿಯದ ತಾಪಮಾನ ಈ ಸಲ ಕಂಡುಬಂದಿದೆ. ಮನೆಯಿಂದ ಹೊರ ಹೋಗುವುದು ಬಿಡಿ, ಮನೆಯಲ್ಲಿ ಇರಲೂ ಒದ್ದಾಡುವ ಪರಿಸ್ಥಿತಿ ಬಂದೊದಗಿದೆ. ಸೆಖೆಯಿಂದ ತಪ್ಪಿಸಿಕೊಳ್ಳಲು ಹಲವರು ಹಲವು ಐಡಿಯಾಗಳ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಇದೀಗ ಪೆಟ್ರೋಲ್ ಬಂಕ್(Petrol Bunk) ಮಾಲಿಕನೊಬ್ಬ ಬಿಸಿಲ ಧಗೆ ತಣಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಇದನ್ನು ಕಂಡು ಜನರೂ ಫಿದಾ ಆಗಿದ್ದಾರೆ.

https://x.com/naveen_TNIE/status/1785940124435665162

ಬಿಸಿಲಿನಿಂದ ಪಡುವ ಕಷ್ಟವನ್ನು ಗಮನಿಸಿದ ತೆಲಂಗಾಣದ(Telangana) ಕರೀಂನಗರದ ಜ್ಯೋತಿನಗರ ಮಲ್ಕಾಪುರ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ವಿನೂತನ ಐಡಿಯಾದೊಂದಿಗೆ ಜನರಿಗೆ ನೆರವಾಗಿದ್ದಾರೆ. ಅದೇನೆಂದರೆ ತನ್ನ ಬಂಕ್‌ಗೆ ಬರುವ ವಾಹನ ಸವಾರರಿಗೆ ಬಿಸಿಲಿನಿಂದ ಪರಿಹಾರ ನೀಡಲು ನೀರಿನ ಸುರಿಮಳೆ ಸುರಿಸುತ್ತಿದ್ದಾರೆ.

ಇದನ್ನೂ ಓದಿ: Marriage: ಭಾರತದ ಈ ರಾಜ್ಯದಲ್ಲಿ, ಹಿಂದೂಗಳು ಎರಡು ಮದುವೆಯಾಗಬಹುದು

ಹೌದು, ಬಂಕ್ ಸುತ್ತಲೂ ಮಾಲಿಕ ಸ್ಪಿಂಕ್ಲರ್(Spinkler) ಗಳನ್ನು ಜೋಡಿಸಿದ್ದಾನೆ. ಜೋಡಿಸಲಾದ ಆ ಸ್ಪಿಂಕ್ಲರ್‌ಗಳ ಮೂಲಕ ಪ್ರತಿದಿನ ಮಧ್ಯಾಹ್ನ ನೀರನ್ನು ಸಿಂಪಡಿಸಲಾಗುತ್ತದೆ. ಜನರು ಇದರಡಿಯಲ್ಲಿ ನಿಂತು ಬಿಸಿಲಿನ ತಾಪದಿಂದ ಕೊಂಚ ನಿಟ್ಟುಸಿರುವ ಬಿಡಬಹುದು. ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಯಾಣಿಸುವವರು ಈ ಬಂಕ್ ಬಳಿ ಆಗಮಿಸಿ ತಂಪಾದ ವಾತಾವರಣವನ್ನು ಆನಂದಿಸುತ್ತಾರೆ. ಅಲ್ಲದೆ, ಪೆಟ್ರೋಲ್ ಬಂಕ್‌ಗೂ ಇದರಿಂದ ಲಾಭವಾಗಿದೆ.

ಇದನ್ನು ಓದಿ: Home Tips: ಮನೆ ಕ್ಲೀನ್‌ ಮಾಡುವ ಮೊದಲು ಈ ವಸ್ತುಗಳನ್ನು ನೀರಿನಲ್ಲಿ ಬೆರೆಸಲು ಮರೆಯದಿರಿ; ಇಡೀ ಮನೆ ಸ್ವಚ್ಛ, ತಾಜಾತನದಿಂದ ತುಂಬಿರುತ್ತೆ

Leave A Reply

Your email address will not be published.