Werewolf Syndrome: ಮುಖದ ತುಂಬಾ ಕೂದಲಿರುವ ಮಗು ಜನನ; ಈ ಮಾಂಸ ತಿಂದದ್ದೇ ತಪ್ಪಾಯ್ತಾ?

werewolf syndrome: ಎರಡು ವರ್ಷದ ಮಗುವೊಂದರ ಮುಖ, ಮೈತುಂಬಾ ಕೂದಲು ಬೆಳೆದಿದ್ದು, ಇದನ್ನು ನೋಡಿ ತಾಯಿ ಇದಕ್ಕೆ ನಾನೇ ಕಾರಣ ಎಂದು ತನ್ನನ್ನು ತಾನು ದೂಷಿಸುತ್ತಿದ್ದಾಳೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಈಕೆ ತನ್ನ ಕಡುಬಯಕೆಯನ್ನು ನಿಯಂತ್ರಣ ಮಾಡಲಾಗದೆ ಕಾಡುಬೆಕ್ಕಿನ ಮಾಂಸ ತಿಂದಿದ್ದಾಳೆ. ಇದರಿಂದ ಮಗುವಿಗೆ ವೇರ್‌ವುಲ್ಫ್‌ ಸಿಂಡ್ರೋಮ್‌ ಉಂಟಾಗಿದೆ ಎನ್ನುತ್ತಿದ್ದಾಳೆ ಈಕೆ.

ಇದನ್ನೂ ಓದಿ: AC: ಈ ಟಿಪ್ಸ್ ಬಳಸಿದರೆ ದಿನವಿಡೀ ಎಸಿ ಆನ್ ಇಟ್ಟರೂ ಒಂದು ಪೈಸೆಯೂ ಕರೆಂಟ್ ಬಿಲ್ ಬರಲ್ಲ !!

ಹಾರ್ಮೋನ್‌ ತೊಂದರೆಯಿಂದ ಸಾಮಾನ್ಯವಾಗಿ ಕೂದಲು ಬೆಳೆಯುತ್ತದೆ. ಆದರೆ ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ಮಗುವೊಂದು ಜನ್ಮಿಸಿದ್ದು ಈ ಮಗು ಜರೆನ್‌ ಗಮೊಂಗನ್‌ ಗೆ ದೇಹ ಹಾಗೂ ಮುಖದ ತುಂಬಾ ದಟ್ಟ ಕೂದಲು ಬೆಳೆದಿದೆ. ಈ ಮಗುವಿಗೆ ಎರಡು ವರ್ಷವಾಗಿದ್ದು, ಇದಕ್ಕೆ ಈ ಮಗುವಿನ ಅಮ್ಮ, ತಾನು ಗರ್ಭಿಣಿಯಾಗಿದಾಗ ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಇದಕ್ಕೆ ಕಾರಣ ಎಂದು ಹೇಳುತ್ತಿದ್ದಾರೆ ಅಲ್ಮಾ ಗಮೊಂಗನ್‌.

ಇದನ್ನೂ ಓದಿ: Watermelon: ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ರಕ್ತದೊತ್ತಡ ನಿವಾರಣೆಗೆ ಸಹಾಯಕಾರಿ : ತಪ್ಪದೇ ಕಲ್ಲಂಗಡಿ ಸೇವಿಸಿ

ಸಾಮಾನ್ಯವಾಗಿ ಪರ್ವತ ಪ್ರದೇಶದಲ್ಲಿ ಕಾಣ ಸಿಗುವ ಕಾಡು ಬೆಕ್ಕಿನ ಮಾಂಸವನ್ನು ತಿನ್ನಬೇಕೆನ್ನುವ ಮಹದಾಸೆಯೊಂದು ಅಲ್ಮಾ ಗಮೊಂಗನ್‌ ಅವರಿಗೆ ತಾವು ಗರ್ಭಿಣಿಯಾಗಿದ್ದಾಗ ಉಂಟಾಗಿತ್ತು. ಇದಕ್ಕಾಗಿ ಅವರು ಹಳ್ಳಿಯವರಿಗೆ ಹೇಳಿ ಕಾಡು ಬೆಕ್ಕಿನ ಮಾಂಸವನ್ನು ತರಿಸಿ ಅದನ್ನು ಪದಾರ್ಥ ಮಾಡಿ ತಿಂದಿದ್ದರು. ಬೆಕ್ಕಿನ ಮಾಂಸವೇನೋ ತಿಂದಾಯ್ತು. ಆದರೆ ಮಗು ಜನಿಸಿದ ಬಳಿಕ ಬೆಕ್ಕಿನ ಮಾಂಸ ತಿಂದ ಕಾರಣ ತಮ್ಮ ಮಗುವಿಗೆ ಅದರ ಶಾಪ ತಟ್ಟಿದೆ ಹಾಗಾಗಿ ಮಗುವಿಗೆ ಮೈ ತುಂಬಾ ಕೂದಲು ಬೆಳೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ತಾಯಿ ಇದಕ್ಕೆ ನಾನು ಬೆಕ್ಕಿನ ಮಾಂಸ ತಿಂದದ್ದೇ ಕಾರಣ ಎಂದು ಪಶ್ಚಾತ್ತಾಪ ಪಟ್ಟುಕೊಂಡಿದ್ದಾರೆ.

ಮಗುವಿಗೆ ಈಗಾಗಲು ಕಾರಣವೇನು?

ವೇರ್‌ ವುಲ್ಫ್‌ ಸಿಂಡ್ರೋಮ್‌ ಎಂಬ ಕಾಯಿಲೇ ಈ ಮಗುವಿಗೆ ಬಂದಿದೆ. ಇದಕ್ಕೂ ಕಾಡಿನ ಬೆಕ್ಕಿನ ಮಾಂಸಕ್ಕೂ ಯಾವುದೇ ಸಂಬಂಧವಿಲ್ಲ. ಜರೆನ್‌ ವೇರ್‌ವುಲ್ಫ್‌ ಅಥವಾ ಹೈಪರ್ಟೀಕೋಸಿಕ್‌ ಎಂಬ ಖಾಯಿಲೆಯಿಂದ ಮಗು ಬಳಲುತ್ತಿದೆ. ಈ ಕಾರಣದಿಂದಾಗಿ ಮಗುವಿನ ಮುಖದಲ್ಲಿ ದಟ್ಟವಾದ ಕೂದಲು ಬೆಳಯುತ್ತಿದೆ ಎಂದಿದ್ದಾರೆ ವೈದ್ಯರು.

ಮಧ್ಯಯುಗದಿಂದ ವಿಶ್ವದಾದ್ಯಂತ ಕೇವಲ 50 ರಿಂದ 100 ಪ್ರಕರಣಗಳಷ್ಟೇ ಇದು ವರದಿಯಾಗಿದೆ. ಇದು ಒಂದು ಬಿಲಿಯನ್‌ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸುತ್ತದೆ. ಈ ಸಿಂಡ್ರೋಮ್‌ಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ ಲೇಸರ್‌ ಹೇರ್‌ ರಿಮೂವಲ್‌ ಟ್ರೀಟ್ಮೆಂಟ್‌ ಮೂಲಕ ಕೂದಲನ್ನು ತೆಗೆಯಲು ಸಾಧ್ಯ ಎಂದು ವೈದ್ಯರು ಹೇಳಿದ್ದಾರೆ.

Leave A Reply

Your email address will not be published.