Accident: ಭೀಕರ ಅಪಘಾತ; ಶ್ರೀಲಂಕಾ ಸಚಿವ ಸೇರಿ ಮೂವರ ದಾರುಣ ಸಾವು!!!

Accident :ಗುರುವಾರ ಎಕ್ಸ್ಪ್ರೆಸ್ವೇಯಲ್ಲಿ ಭೀಕರ ರಸ್ತೆ ಅಪಘಾತ(Road accident)ಸಂಭವಿಸಿದ್ದು, ಈ ದಾರುಣ ಅವಘಡದಲ್ಲಿ ಶ್ರೀಲಂಕಾದ ರಾಜ್ಯ ಸಚಿವ ಸನತ್ ನಿಶಾಂತ ಮತ್ತು ಅವರ ಭದ್ರತಾ ಅಧಿಕಾರಿ ಸೇರಿದಂತೆ ಮೂವರು ಮೃತಪಟ್ಟಿರುವ(Death)ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಇದನ್ನೂ ಓದಿ: Police Women: ಎಬಿವಿಪಿ ಸದಸ್ಯೆಯ ಕೂದಲು ಹಿಡಿದು ಸ್ಕೂಟರ್‌ನಲ್ಲಿ ಎಳೆದ ಮಹಿಳಾ ಪೊಲೀಸರು ; ಬೆಚ್ಚಿ ಬೀಳಿಸುವ ವೀಡಿಯೋ ವೈರಲ್!!

ನಿಶಾಂತ, ಅವರ ಭದ್ರತಾ ಅಧಿಕಾರಿ ಮತ್ತು ಚಾಲಕನನ್ನು ಕರೆದೊಯ್ಯುತ್ತಿದ್ದ ಜೀಪ್ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಅವಘಡದಲ್ಲಿ ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ. ಹೀಗಾಗಿ, ರಾಗಮ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಶಾಂತ ಮತ್ತು ಪೊಲೀಸ್ ಕಾನ್ಸ್ಟೇಬಲ್ ಜಯಕೋಡಿ ಆಸ್ಪತ್ರೆಗೆ ದಾಖಲು ಮಾಡುವ ಸಂದರ್ಭ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Ramlalla: ರಾಮಲಲ್ಲನ ಇನ್ನಷ್ಟು ಫೋಟೋ ಹಂಚಿಕೊಂಡ ಶಿಲ್ಪಿ ಅರುಣ್‌ ಯೋಗಿರಾಜ್‌!!!

1 Comment
  1. […] ಇದನ್ನೂ ಓದಿ: Accident: ಭೀಕರ ಅಪಘಾತ; ಶ್ರೀಲಂಕಾ ಸಚಿವ ಸೇರಿ ಮೂವ… […]

Leave A Reply

Your email address will not be published.