Police Women: ಎಬಿವಿಪಿ ಸದಸ್ಯೆಯ ಕೂದಲು ಹಿಡಿದು ಸ್ಕೂಟರ್‌ನಲ್ಲಿ ಎಳೆದ ಮಹಿಳಾ ಪೊಲೀಸರು ; ಬೆಚ್ಚಿ ಬೀಳಿಸುವ ವೀಡಿಯೋ ವೈರಲ್!!

Police Women: ತೆಲಂಗಾಣದಲ್ಲಿ ಮಹಿಳಾ ಪೊಲೀಸರೊಬ್ಬರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ABVP) ಸದಸ್ಯೆಯ ಕೂದಲು ಹಿಡಿದು, ಸ್ಕೂಟರ್‌ ಮೇಲೆ ಕೂತು ಎಳೆಯುವ ವೀಡಿಯೋ ವೈರಲ್ ಆಗಿದೆ.

https://x.com/RaoKavitha/status/1750173391280333157?s=20

ಇದನ್ನೂ ಓದಿ: Lok Sabha constituency: ಲೋಕಸಭಾ ಚುನಾವಣೆಗೆ ಎಲ್ಲಿಂದ ಸ್ಪರ್ಧೆ?? ಸಚಿವೆ ಶೋಭಾ ಕರಂದ್ಲಾಜೆ ಯಿಂದ ಶಾಕಿಂಗ್ ಅಪ್ಡೇಟ್!!

ಯುವತಿಯ ಕೂದಲು ಹಿಡಿದು ಎಳೆದಿರುವ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಎಬಿವಿಪಿ ಕಾರ್ಯಕರ್ತರು, ಕಾರ್ಯಕರ್ತೆಯರು ಕೂಡ ಪ್ರತಿಭಟನೆಗೆ ಬೆಂಬಲ ನೀಡಿದ್ದು, ಪೊಲೀಸರು ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಈ ಸಂದರ್ಭ ಎಬಿವಿಪಿ ಸದಸ್ಯೆಯೊಬ್ಬರು ಸ್ವಲ್ಪ ದೂರ ಓಡಿದ್ದಾರೆ. ಆಗ, ಸ್ಕೂಟರ್‌ ಮೇಲೆ ಕುಳಿತ ಇಬ್ಬರು ಮಹಿಳಾ ಪೊಲೀಸರಲ್ಲಿ ಒಬ್ಬರು ವಿದ್ಯಾರ್ಥಿನಿಯ ಕೂದಲು ಹಿಡಿದು ಎಳೆದಿದ್ದಾರೆ. ಮತ್ತೊಬ್ಬ ಪೊಲೀಸ್‌ ಅಧಿಕಾರಿಯು ಸ್ಕೂಟರ್‌ ಚಲಾಯಿಸುತ್ತಿದ್ದ ಹಿನ್ನೆಲೆ ಎಬಿವಿಪಿ ಸದಸ್ಯೆ ಕೆಳಗೆ ಬಿದ್ದಿದ್ದಾರೆ. ಈ ಘಟನೆಯ ಬೆನ್ನಲ್ಲೇ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.