ಫಿಫಾ ವರ್ಲ್ಡ್ ಕಪ್ ಗೂ SBI ಬ್ಯಾಂಕ್ ಪಾಸ್‌ಬುಕ್ ಗೂ ಏನು ಸಂಬಂಧ ? ಯಾಕೆ ಇಷ್ಟೊಂದು ಟ್ರೆಂಡಿಂಗ್‌ನಲ್ಲಿದೆ ಈ ಸುದ್ದಿ?
ಫುಟ್ಬಾಲ್ (Football) ಮಾಯೆ ಎಲ್ಲ ಕಡೆ ಇದ್ದು, ಈಗ ಎಲ್ಲೆಡೆಯೂ ಫುಟ್ಬಾಲ್ ಕ್ರೇಜ್ (Football craze) ಸಕತ್ ಸದ್ದು ಮಾಡುತ್ತಿದ್ದು, ಫುಟ್ಬಾಲ್ ಆಟಕ್ಕೆ (Game) ಜಗತ್ತಿನ ಎಲ್ಲ ಕಡೆಯೂ ಅಭಿಮಾನಿಗಳಿದ್ದಾರೆ (Fans). ಆದರೆ, ಈ ನಡುವೆ ಕೆಲವರಿಗೆ ತಮ್ಮ ಕೆಲಸಗಳ ನಡುವೆ (Busy Schedule) ಫುಟ್ಬಾಲ್ ಲೈವ್ (Football live) ಅನ್ನು ನೋಡಲು ಆಗದೇ ಕೆಲಸದ ನಡುವೆಯೂ ನೋಡುವವರಿದ್ದಾರೆ.
ಫಿಫಾ ವಿಶ್ವಕಪ್ (FIFA Worldcup) ನಲ್ಲಿ 32 ತಂಡಗಳು ಭಾಗವಹಿಸಿತ್ತು. ಫಿಫಾ ಪಂದ್ಯಾವಳಿಯ ಅತಿ ದೊಡ್ಡ ಬಹುಮಾನದ ಮೊತ್ತದ ದೃಷ್ಟಿಯಿಂದ ವಿಶ್ವದ ಅತಿದೊಡ್ಡ ಪಂದ್ಯಾವಳಿಯಾಗಿದೆ. ಈ ಮೆಗಾ ಟೂರ್ನಿಯು ಇದೀಗ, ಅಂತಿಮ ಘಟ್ಟಕ್ಕೆ ತಲುಪಿದೆ. ಡಿಸೆಂಬರ್ 18ರಂದು ನಡೆಯಲಿರುವ ಫೈನಲ್ ಫೈಟ್(FIFA World Cup Final) ನಲ್ಲಿ ಅರ್ಜೆಂಟೀನಾ (Argentina) ಮತ್ತು ಫ್ರಾನ್ಸ್ (France) ಜಿದ್ದಾಜಿದ್ದಿನ ಪಂದ್ಯವನ್ನು ನೋಡಲು ಇಡೀ ಜಗತ್ತಿನ ಜನಸ್ತೋಮ ಎದುರು ನೋಡುತ್ತಿದೆ.
ಫಿಫಾ ವಿಶ್ವಕಪ್ ಬಹುಮಾನದ ಮೊತ್ತವು ಇದೀಗ ರಿವೀಲ್ ಆಗಿದ್ದು, ಫಿಫಾ ಟೂರ್ನಿಯಲ್ಲಿ ತಂಡಗಳಿಗೆ 3.6 ಸಾವಿರ ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತದೆ ಎನ್ನಲಾಗಿದೆ. ಇದರಲ್ಲಿ ವಿಶ್ವಕಪ್ ವಿಜೇತ ತಂಡ 359 ಕೋಟಿ ರೂ. ಇದು ಐಪಿಎಲ್‌ನ ಒಟ್ಟು ಬಹುಮಾನದ ಮೊತ್ತಕ್ಕಿಂತ ಸುಮಾರು 8 ಪಟ್ಟು ಹೆಚ್ಚೆಂದು ಹೇಳಲಾಗಿದೆ.ಈ ಪಂದ್ಯದಲ್ಲಿ ಯಾರು ಗೆಲ್ಲಬಹುದು ಎಂಬ ಚರ್ಚೆ ವಿಶ್ವದ ಫುಟ್ಬಾಲ್ ಅಭಿಮಾನಿಗಳಲ್ಲಿ ಜೋರಾಗಿ ನಡೆಯುತ್ತಿದೆ.
ಕತಾರ್ ರಾಷ್ಟ್ರೀಯ ದಿನದಂದು ಲುಸೈಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ವಿಶ್ವಕಪ್ ಫೈನಲ್ ಸೆಣಸಾಟ ನಡೆಯಲಿದೆ. ಆದರೆ, ಭಾರತದಲ್ಲಿ ಮಾತ್ರ ಎಸ್‌ಬಿಐ ಬ್ಯಾಂಕ್ ಪಾಸ್‌ಬುಕ್ (SBI Bank Passbook) ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅರೇ? ಇದಕ್ಕೂ ಫುಟ್ಬಾಲ್ಗೂ ಎಸ್‌ಬಿಐ ಬ್ಯಾಂಕ್ಗೂ ಎಲ್ಲಿಂದೆಲ್ಲಿಯಾ ಸಂಬಂಧ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ಗುರುತಿಸಿ ಕೊಂಡಿರುವ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಈ ಫುಟ್ಬಾಲ್ ಪಂದ್ಯದ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಈಗ ಸಂಚಲನ ಮೂಡಿಸಿದೆ. ಈಗ ಎಲ್ಲರ ಚಿತ್ತ ಎಸ್ ಬಿಐ ಪಾಸ್ ಬುಕ್ ನತ್ತ ಹರಿದಿದೆ ಎಂದರೆ ತಪ್ಪಾಗದು.
ಎಸ್.ಬಿ.ಐ ಪಾಸ್‌ಬುಕ್ ಕವರ್ ಬಿಳಿ ಪಟ್ಟೆಗಳೊಂದಿಗೆ ತಿಳಿ ನೀಲಿ ಬಣ್ಣದ್ದಾಗಿದೆ. ಎರಡು ನೀಲಿ ಫಲಕಗಳ ನಡುವೆ, ಬಿಳಿ ಫಲಕವಿದೆ. ಅದರ ಮೇಲೆ ಕಪ್ಪು ಬಣ್ಣದಲ್ಲಿ ಬ್ಯಾಂಕ್ ಹೆಸರು, ನೀಲಿ ಬಣ್ಣದಲ್ಲಿ SBI ಲೋಗೋ ಇದೆ.ಪಾಸ್‌ಬುಕ್, ಅರ್ಜೆಂಟೀನಾ ಕಲರ್ ಸೇಮ್ ಟು ಸೇಮ್ ಒಂದೆ ಬಣ್ಣವಾಗಿದೆ.
ಹೌದು!!.ಅರ್ಜೆಂಟೀನಾ ಫುಟ್ಬಾಲ್ ಆಟಗಾರರ ಜೆರ್ಸಿ ಕೂಡ ಇದೆ ಬಣ್ಣದಾಗಿದೆ. ಇದೀಗ ಎಸ್‌ಬಿಐ ಪಾಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದು, ಈ ಸಾಮ್ಯತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪೋಸ್ಟ್‌ಗಳು ಹರಿದಾಡಿ ಸಂಚಲನ ಮೂಡಿಸಿದೆ. ಈ ನಡುವೆ ಫಿಫಾ ವಿಶ್ವಕಪ್ 2022 ರ ಫೈನಲ್‌ನಲ್ಲಿ ಭಾರತದಲ್ಲಿ ಹೆಚ್ಚು ಅರ್ಜೆಂಟೀನಾ ಅಭಿಮಾನಿಗಳೇಕೆ ಇದ್ದಾರೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಕಾಮೆಂಟ್ ಕೂಡ ಹರಿದಾಡುತ್ತಿದೆ.
ಅರ್ಜೆಂಟೀನಾ ಮೂರನೇ ಬಾರಿಗೆ ಟ್ರೋಫಿ ತನ್ನದಾಗಿಸಿ ಕೊಳ್ಳುವ ಹಂಬಲ ಹೊಂದಿದ್ದು ಅವಕಾಶಕ್ಕಾಗಿ ಕಾಯುತ್ತಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಅರ್ಜೆಂಟೀನಾ ಅಭಿಮಾನಿಗಳು ಎಸ್‌ಬಿಐ ಪಾಸ್‌ಬುಕ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೆ ಅಲ್ಲದೆ, ಎಸ್‌ಬಿಐ ಅರ್ಜೆಂಟೀನಾದ ಅಧಿಕೃತ ಪಾಲುದಾರರಾಗಿದ್ದು ಎಸ್‌ಬಿಐನ ಊಟದ ಸಮಯ ಹೆಚ್ಚು ಜೊತೆಗೆ ಅರ್ಜೆಂಟೀನಾದ ಸಂಪೂರ್ಣ ಪಂದ್ಯದ ಸಮಯ ದೀರ್ಘವಾಗಿದೆ ಎಂದು ಕೆಲವರು ಕಾಮೆಂಟ್ ಮಾಡುವ ಮೂಲಕ ನೆಟ್ಟಿಗರು ಎಸ್‌ಬಿಐ ಬ್ಯಾಂಕ್ ಕಾಲೆಳೆಯುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ.
32ನೇ ಶ್ರೇಯಾಂಕಿತ ತಂಡವೂ ಬೃಹತ್ ಮೊತ್ತ ಪಡೆಯಲಿದೆ ಎಂಬುದು ಕುತೂಹಲದ ಸಂಗತಿಯಾಗಿದ್ದು, ಅವರಿಗೆ 73 ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತದೆ. ಫಿಫಾದಲ್ಲಿ ಕ್ವಾರ್ಟರ್ ಫೈನಲ್ ತಲುಪುವ ತಂಡಗಳಿಗೆ ತಲಾ 139 ಕೋಟಿ ರೂ. ದೊರಕಲಿದೆ.
ಫಿಫಾ ವಿಶ್ವಕಪ್ ವಿಜೇತ ತಂಡಕ್ಕೆ ಭರ್ಜರಿ 359 ಕೋಟಿ ಹಾಗೂ ರನ್ನರ್ ಅಪ್ ತಂಡಕ್ಕೆ 245 ಕೋಟಿ ರೂ. ಮೂರು ಮತ್ತು ನಾಲ್ಕನೇ ಶ್ರೇಯಾಂಕದ ತಂಡವು ಕ್ರಮವಾಗಿ 220 ಕೋಟಿ ಮತ್ತು 204 ಕೋಟಿ ರೂ. ನೀಡಲಾಗುತ್ತದೆ..