Day: July 3, 2022

ಬಂಟ್ವಾಳ: ನೇತ್ರಾವತಿ ನದಿಗೆ ಈಜಲು ತೆರಳಿದ್ದ ಯುವಕರ ತಂಡ ನೀರುಪಾಲು!!

ಬಂಟ್ವಾಳ: ತಾಲೂಕಿನ ಪಡು ಸಜೀಪ ಗ್ರಾಮದ ತಲೆಮೊಗರು ಎಂಬಲ್ಲಿನ ನೇತ್ರಾವತಿ ನದಿಗೆ ಈಜಲು ತೆರಳಿದ್ದ ಐವರ ತಂಡವೊಂದು ನೀರುಪಾಲಾಗಿದ್ದು,ಸ್ಥಳೀಯರ ಸಮಯ ಪ್ರಜ್ಞೆಯಿಂದ ನಾಲ್ವರ ರಕ್ಷಣೆ ನಡೆದು ಓರ್ವನಿಗಾಗಿ ಶೋಧ ಮುಂದುವರಿದಿದೆ. ನೀರುಪಾಲಾದ ಯುವಕನನ್ನು ತಲೆಮೊಗರು ನಿವಾಸಿ ರುಕ್ಮಯ್ಯ ಎಂಬವರ ಪುತ್ರ ಅಶ್ವಿತ್ (19) ಎಂದು ಗುರುತಿಸಲಾಗಿದ್ದು,ಯುವಕನ ಪತ್ತೆಗಾಗಿ ಮುಳುಗು ತಜ್ಞರ ಸಹಿತ ಅಗ್ನಿ ಶಾಮಕ ದಳ ಕಾರ್ಯಾಚರಣೆ ಪ್ರಾರಂಭಿಸಿದೆ. ಘಟನೆ ವಿವರ:ಸ್ಥಳೀಯ ಯುವಕರಾದ ಅಶ್ವಿತ್, ಹರ್ಷಿತ್,ಲಿಖಿತ್, ವಿಕೇಶ್, ಹಾಗೂ ವಿಶಾಲ್ ಎಂಬ ಸ್ನೇಹಿತರ ತಂಡವೊಂದು ತಲೆಮಾರು ಎಂಬಲ್ಲಿ …

ಬಂಟ್ವಾಳ: ನೇತ್ರಾವತಿ ನದಿಗೆ ಈಜಲು ತೆರಳಿದ್ದ ಯುವಕರ ತಂಡ ನೀರುಪಾಲು!! Read More »

ನಾಳೆ 10 ನೇ ತರಗತಿ CBSE ರಿಸಲ್ಟ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2022ನೇ ಸಾಲಿನ 10ನೇ ತರಗತಿಯ ಫಲಿತಾಂಶ ನಾಳೆ (ಜುಲೈ 4) ಬಿಡುಗಡೆಯಾಗುವ ನಿರೀಕ್ಷೆಯಿದೆ. CBSE 10 ನೇ ತರಗತಿಯ ಟರ್ಮ್ 2 ಪರೀಕ್ಷೆಗಳನ್ನು ಏಪ್ರಿಲ್ 26 ರಿಂದ ಮೇ 24, 2022 ರವರೆಗೆ ನಡೆಸಿತ್ತು.ಫಲಿತಾಂಶವನ್ನು ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ Cbseresults.nic.in ಮೂಲಕ ಪರಿಶೀಲಿಸಬಹುದು. CBSE ಫಲಿತಾಂಶಗಳನ್ನು ಡಿಜಿಲಾಕರ್ ಮತ್ತು SMS ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತದೆ. ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ cbse.gov.in ಅಥವಾ cbseresults.nic.in SMS ಮುಖಾಂತರ ಫಲಿತಾಂಶ ಪಡೆಯುವ ವಿಧಾನ • …

ನಾಳೆ 10 ನೇ ತರಗತಿ CBSE ರಿಸಲ್ಟ್ Read More »

ವಿ.ಹಿಂ.ಪ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಬೃಹತ್ ರಕ್ತದಾನ ಶಿಬಿರ!! ದಾಖಲೆಯ 108 ಯುನಿಟ್ ರಕ್ತ ಸಂಗ್ರಹ

ವಿಶ್ವಹಿಂದುಪರಿಷದ್ ಬಜರಂಗದಳ ಪರಶುರಾಮ ಶಾಖೆ ಬಂಟ್ವಾಳ ನಗರ ಬಂಟ್ವಾಳ ಪ್ರಖಂಡದ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಕೆ.ಎಮ್.ಸಿ ಮಂಗಳೂರು ಮತ್ತು ವೆನ್ ಲಾಕ್ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.ಶಿಬಿರದಲ್ಲಿ 180 ಯೂನಿಟ್ ರಕ್ತ ಸಂಗ್ರಹ ಮಾಡಲಾಗಿದ್ದು,ರಕ್ತದಾನದ ವಿಷಯಗಳಲ್ಲಿ ತಕ್ಷಣ ಸ್ಪಂದಿಸುವ ಬಂಟ್ವಾಳ ಪ್ರಖಂಡದ ಸೇವಾ ಪ್ರಮುಖ್ ಪ್ರಸಾದ್ ಶಿವಾಜಿನಗರ ಬೆಂಜನಪದವು ಹಾಗೂ ಕಿರಣ್ ಕಾಪಿಕಾಡ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಪುತ್ತೂರು ಜಿಲ್ಲಾ ಅಧ್ಯಕ್ಷರು ಡಾ ಕೃಷ್ಣ ಪ್ರಸನ್ನ ಪ್ರಸಾದ್ …

ವಿ.ಹಿಂ.ಪ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಬೃಹತ್ ರಕ್ತದಾನ ಶಿಬಿರ!! ದಾಖಲೆಯ 108 ಯುನಿಟ್ ರಕ್ತ ಸಂಗ್ರಹ Read More »

ಮದುವೆಗೂ ಮುನ್ನವೇ ಗರ್ಭಧರಿಸಿದ್ದರೇ ಆಲಿಯಾ ?!

ಬಾಲಿವುಡ್‌ನ ಸ್ಟಾರ್‌ ಜೋಡಿಯಾದ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌  ಸದ್ಯದಲ್ಲೇ ಮೊದಲ ಮಗುವನ್ನು ಸ್ವಾಗತಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಈ ಸಿಹಿ ಸುದ್ದಿ ಬೆನ್ನಲ್ಲೇ‌ ನೆಟ್ಟಿಗರಿಗೆ ಅನುಮಾನವೊಂದು ಕಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಇದನ್ನು ವ್ಯಕ್ತಪಡಿಸುತ್ತಿದ್ದಾರೆ ! ಮದುವೆಗೂ ಮುನ್ನವೇ ಆಲಿಯಾ ತಾಯಿಯಾಗಿದ್ದಾರೆ, ಮದುವೆಗೆ ಮುನ್ನವೇ ಆಲಿಯಾ ಗರ್ಭವತಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 2 ವರ್ಷದಿಂದ ಮದುವೆ, ಮದುವೆ ಎನ್ನುತ್ತಿದ್ದ ಆಲಿಯಾ ದಿಢೀರ್ ಮದುವೆಯಾಗಲು ಇದೇ ಕಾರಣ ಎನ್ನಲಾಗುತ್ತಿದೆ ಸಾಮಾಜಿಕ ಜಾಲತಾಣದ ವಿಷಯಗಳು. ಏಪ್ರಿಲ್ ೧೪ ಕ್ಕೆ …

ಮದುವೆಗೂ ಮುನ್ನವೇ ಗರ್ಭಧರಿಸಿದ್ದರೇ ಆಲಿಯಾ ?! Read More »

ಬೆಳ್ತಂಗಡಿ : ಕೆರೆಗೆ ಬಿದ್ದು ವ್ಯಕ್ತಿ ಸಾವು!

ಬೆಳ್ತಂಗಡಿ : ಮನೆಯ ಸಮೀಪದ ಕೆರೆಗೆ ನ್ಯಾಯತರ್ಪು ಗ್ರಾಮದ ಬದ್ಯಾರು ನಿವಾಸಿಯೋರ್ವರು ಬಿದ್ದಿದ್ದು, ಇಂದು ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಮೃತರು ಕುಶಾಲಪ್ಪ ಗೌಡ (46). ಕೃಷಿ, ಕೂಲಿ ಕಾರ್ಮಿಕ ಮೃತ ಕುಶಾಲಪ್ಪ ಗೌಡರು, ಮನೆಯ ಸಮೀಪದ ಕೆರೆಯ ಪಕ್ಕದಲ್ಲಿ ನೀರಿನ ಚರಂಡಿಯಲ್ಲಿ ಬೆಳೆದಿರುವ ಹುಲ್ಲು ಕಸಕಡ್ಡಿ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಅನುಮಾನಿಸಲಾಗಿದೆ. ಪಕ್ಕದ ಮನೆಯವರು ತೋಟದ ಕೆಲಸಕ್ಕೆ ತೆರಳುವ ಸಮಯದಲ್ಲಿ ಇವರು ಮೃತಪಟ್ಟಿರುವುದನ್ನು ನೋಡಿ ಮನೆಯವರಿಗೆತಿಳಿಸಿದ್ದಾರೆ ಎನ್ನಲಾಗಿದೆ. ಈ …

ಬೆಳ್ತಂಗಡಿ : ಕೆರೆಗೆ ಬಿದ್ದು ವ್ಯಕ್ತಿ ಸಾವು! Read More »

ವಿಟ್ಲ : ಬಕ್ರೀದ್ ಹಬ್ಬದ ಹಿನ್ನೆಲೆ ಪೊಲೀಸರಿಂದ ಭಾರೀ ಬಂದೋಬಸ್ತ್ !

ವಿಟ್ಲ: ಬಕ್ರೀದ್ ಹಬ್ಬದ ಪ್ರಯುಕ್ತ ಕೊಡಂಗೆ ಚೆಕ್ ಪೋಸ್ಟ್‌ನಲ್ಲಿ ದಿನದ 24 ಗಂಟೆಯು ಸಿಬ್ಬಂದಿಗಳು ಇರಲಿದ್ದು, ವಾಹನ ತಪಾಸಣೆ ನಡೆಯಲಿದೆ ಎಂದು ಜಿಲ್ಲಾ ಎಸ್ಪಿ ಸೋನಾವಣೆ ಋಷಿಕೇಶ್ ಭಗವಾನ್ ರವರು ಹೇಳಿದರು. ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮರ, ಮರಳು, ದನ ಸಹಿತ ಅಕ್ರಮ ಸಾಗಾಟ ಇದೆಲ್ಲವನ್ನು ನಿಲ್ಲಿಸುವ ನಿಟ್ಟಿನಲ್ಲಿ ಈ ಚೆಕ್ ಪೋಸ್ಟ್ ಮತ್ತಷ್ಟು ಸಹಕಾರಿಯಾಗಲಿದೆ. ಕೇರಳವನ್ನು ಸಂಪರ್ಕಿಸುವ ಪ್ರಧಾನ ರಸ್ತೆಗಳಲ್ಲೊಂದಾದ ಸಾಲೆತ್ತೂರು ಸಮೀಪದ ಕೊಡಂಗೆ ಚೆಕ್ …

ವಿಟ್ಲ : ಬಕ್ರೀದ್ ಹಬ್ಬದ ಹಿನ್ನೆಲೆ ಪೊಲೀಸರಿಂದ ಭಾರೀ ಬಂದೋಬಸ್ತ್ ! Read More »

ಗಡಿ ದಾಟಿ ಭಾರತಕ್ಕೆ ಬಂದ ಪಾಕಿಸ್ತಾನಿ ಬಾಲಕನನ್ನು ಹಿಂದಿರುಗಿಸಿದ ಬಿಎಸ್‌ಎಫ್ ಯೋಧರು- ಮಾನವೀಯತೆಯ ದೃಶ್ಯ ವೈರಲ್

ಭಾರತೀಯರ ಮನಸ್ಸು ಮಾನವೀಯತೆಯಿಂದ ಕೂಡಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅದೆಷ್ಟೇ ನಮ್ಮ ದೇಶ ಅನ್ನೋ ಕಿಚ್ಚು ಇದ್ದರೂ, ತಪ್ಪಿಲ್ಲ ಎಂಬುವಲ್ಲಿ ಕೈ ಜೋಡಿಸಿ ಸಹಾಯ ಮಾಡುವವರೇ ನಮ್ಮ ಹೆಮ್ಮೆಯ ವೀರರು. ಇಂತಹ ಭಾರತೀಯ ಸೇನೆಯ ಮಾನವೀಯ ಮುಖವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯನ್ನು ಅಜಾಗರೂಕತೆಯಿಂದ ಅರಿವಿಲ್ಲದೇ ದಾಟಿದ ಮೂರು ವರ್ಷದ ಪಾಕಿಸ್ತಾನಿ ಬಾಲಕನನ್ನು ಗಡಿ ಭದ್ರತಾ ಪಡೆ ಪಾಕಿಸ್ತಾನಿ ರೇಂಜರ್‌ಗಳಿಗೆ ಹಸ್ತಾಂತರಿಸಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. …

ಗಡಿ ದಾಟಿ ಭಾರತಕ್ಕೆ ಬಂದ ಪಾಕಿಸ್ತಾನಿ ಬಾಲಕನನ್ನು ಹಿಂದಿರುಗಿಸಿದ ಬಿಎಸ್‌ಎಫ್ ಯೋಧರು- ಮಾನವೀಯತೆಯ ದೃಶ್ಯ ವೈರಲ್ Read More »

BIG NEWS: ಕನ್ನಡ ಬಿಗ್ ಬಾಸ್ ಗೆ ದಿನಗಣನೆ ಶುರು | ಯಾರೆಲ್ಲ ಕಂಟೆಸ್ಟೆಂಟ್ ?

”ಹೌದು ಸ್ವಾಮೀ”: ಬಿಗ್ ಬಾಸ್ ಮತ್ತೆ ಬರ್ತಿದ್ದಾರೆ. ಕನ್ನಡ ಬಿಗ್ ಬಾಸ್ ಯಾವಾಗ ಎನ್ನುವ ಕುತೂಹಲವೊಂದು ಎಲ್ಲರಲ್ಲೂ ಇತ್ತು. ಈ ರಿಯಾಲಿಟಿ ಶೋ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುತ್ತಿದೆ. ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಯಾವಾಗ ಎನ್ನುವ ಪ್ರಶ್ನೆಗೆ ಈಗ ಉತ್ತರ ದೊರಕಿದೆ. ಬಿಗ್ ಬಾಸ್ ಸೀಸನ್ ಅದು ಕೂಡಾ ಕನ್ನಡ ಬಿಗ್ ಬಾಸ್ ಗೆ ಕಿರುತೆರೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ಸೀಸನ್ 9 …

BIG NEWS: ಕನ್ನಡ ಬಿಗ್ ಬಾಸ್ ಗೆ ದಿನಗಣನೆ ಶುರು | ಯಾರೆಲ್ಲ ಕಂಟೆಸ್ಟೆಂಟ್ ? Read More »

ಪರ್ಸ್ ನಲ್ಲಿ ದುಡ್ಡು ಜತೆ ಈ ವಸ್ತುಗಳನ್ನು ಯಾವತ್ತೂ ಇಡ್ಬೇಡಿ | ತಪ್ಪಿದ್ರೆ, ಎಷ್ಟೇ ಹಣ ದುಡಿದ್ರೂ ಬಡವ ಆಗೋದು ಫಿಕ್ಸ್!

ಹಣ ಪ್ರತಿಯೊಬ್ಬರ ಪಾಲಿಗೆ ಮುಖ್ಯವಾದ ವಸ್ತುವೇ ಆಗಿದೆ. ಏಕೆಂದರೆ, ಇಂದಿನ ದುಬಾರಿ ದುನಿಯಾದಲ್ಲಿ ದುಡ್ಡು ಇಲ್ಲದಿದ್ದರೆ ನೆಲೆ ಇಲ್ಲ ಎಂಬಂತಾಗಿದೆ. ಇಂತಹ ಅವಶ್ಯಕವಾದ ಹಣವನ್ನು ಜಾಗ್ರತೆಯಾಗಿ ಇಟ್ಟುಕೊಳ್ಳಲು, ಉಳಿಸಲು, ಪ್ರತಿಯೊಬ್ಬರೂ ತಮ್ಮೊಂದಿಗೆ ಪರ್ಸ್ ಅನ್ನು ಇಟ್ಟುಕೊಳ್ಳುತ್ತಾರೆ. ಆದರೆ, ನಾವು ಹಣವನ್ನು ಯಾವ ರೀತಿಲಿ ಇಟ್ಟುಕೊಳ್ಳುತ್ತೇವೆ ಎಂಬುದರ ಮೇಲೆ ನಿಂತಿರುತ್ತದೆ ನಮ್ಮ ಸೇವಿಂಗ್ಸ್. ಅನೇಕರು ತಮ್ಮ ತಮ್ಮ ವ್ಯಾಲೆಟ್‌ಗಳಲ್ಲಿ ಹಣವನ್ನು ಹೊರತುಪಡಿಸಿ ಇತರ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ, ಇದರಿಂದ ನಿಮ್ಮ ಫೈನಾನ್ಸ ಜೀವನದ ಮೇಲೂ ಗಾಢ ಪರಿಣಾಮ ಬೀಳಬಹುದು. …

ಪರ್ಸ್ ನಲ್ಲಿ ದುಡ್ಡು ಜತೆ ಈ ವಸ್ತುಗಳನ್ನು ಯಾವತ್ತೂ ಇಡ್ಬೇಡಿ | ತಪ್ಪಿದ್ರೆ, ಎಷ್ಟೇ ಹಣ ದುಡಿದ್ರೂ ಬಡವ ಆಗೋದು ಫಿಕ್ಸ್! Read More »

ಅಡಕೆ ಬೆಳೆಗಾರರೇ ಗಮನಿಸಿ : ಅಡಕೆಗೆ ಮತ್ತೊಂದು ಹೊಸ ರೋಗದ ಭೀತಿ !

ಅಡಕೆ ಬೆಳೆಗಾರರಿಗೆ ಸಂಕಷ್ಟ ಮುಗಿಯುವ ಹಾಗೇ ಕಾಣಿಸುತ್ತಿಲ್ಲ. ಹಲವಾರು ಮಂದಿ ಅಡಕೆಗೆ ಬರುವ ರೈತರು ಹಳದಿ ರೋಗದಿಂದ ಹೈರಾಣಾಗಿದ್ದಾರೆ. ಈಗ ಇದಕ್ಕೆ ಸೇರ್ಪಡೆಯಾಗಿ ಮಲೆನಾಡಿನ ಅಡಕೆಗೀಗ ಮತ್ತೊಂದು ಹೊಸ ರೋಗದ ಶುರುವಾಗಿದೆ. ಈಗ ನಿಜವಾಗಲೂ ಬೆಳೆಗಾರರಲ್ಲಿ ಆತಂಕ ಎದುರಾಗಿದೆ. ಮುತ್ತಿನಕೊಪ್ಪ ಗ್ರಾಮದ ಕೃಷಿಕರೊಬ್ಬರ ತೋಟದಲ್ಲಿ ಸಾವಿರಕ್ಕೂ ಹೆಚ್ಚು ಅಡಕೆ ಗಿಡಗಳು ಕೆಂಪು ಬಣ್ಣಕ್ಕೆ ತಿರುಗಿ ಸತ್ತು ಹೋಗಿದ್ದು, ಹೊಸ ರೋಗ ಇರುವ ಎಂಬ ಅನುಮಾನ ಬೆಳೆಗಾರರಲ್ಲಿ ಮೂಡಿದೆ. ವರ್ಗೀಸ್ ಅವರು 5.29 ಎಕರೆ ಜಾಗದಲ್ಲಿ 3 ಸಾವಿರ …

ಅಡಕೆ ಬೆಳೆಗಾರರೇ ಗಮನಿಸಿ : ಅಡಕೆಗೆ ಮತ್ತೊಂದು ಹೊಸ ರೋಗದ ಭೀತಿ ! Read More »

error: Content is protected !!
Scroll to Top