ಬೆಳ್ತಂಗಡಿ : ಕೆರೆಗೆ ಬಿದ್ದು ವ್ಯಕ್ತಿ ಸಾವು!

ಬೆಳ್ತಂಗಡಿ : ಮನೆಯ ಸಮೀಪದ ಕೆರೆಗೆ ನ್ಯಾಯತರ್ಪು ಗ್ರಾಮದ ಬದ್ಯಾರು ನಿವಾಸಿಯೋರ್ವರು ಬಿದ್ದಿದ್ದು, ಇಂದು ಮೃತದೇಹ ಪತ್ತೆಯಾದ ಘಟನೆ ನಡೆದಿದೆ.

ಮೃತರು ಕುಶಾಲಪ್ಪ ಗೌಡ (46).

ಕೃಷಿ, ಕೂಲಿ ಕಾರ್ಮಿಕ ಮೃತ ಕುಶಾಲಪ್ಪ ಗೌಡರು, ಮನೆಯ ಸಮೀಪದ ಕೆರೆಯ ಪಕ್ಕದಲ್ಲಿ ನೀರಿನ ಚರಂಡಿಯಲ್ಲಿ ಬೆಳೆದಿರುವ ಹುಲ್ಲು ಕಸಕಡ್ಡಿ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಅನುಮಾನಿಸಲಾಗಿದೆ. ಪಕ್ಕದ ಮನೆಯವರು ತೋಟದ ಕೆಲಸಕ್ಕೆ ತೆರಳುವ ಸಮಯದಲ್ಲಿ ಇವರು ಮೃತಪಟ್ಟಿರುವುದನ್ನು ನೋಡಿ ಮನೆಯವರಿಗೆ
ತಿಳಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆಗೆ ಮನೆಯವರು ದೂರು ನೀಡಿದ್ದು, ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಪುತ್ರಿ, ಇಬ್ಬರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ.

Leave A Reply