ವಿಟ್ಲ : ಬಕ್ರೀದ್ ಹಬ್ಬದ ಹಿನ್ನೆಲೆ ಪೊಲೀಸರಿಂದ ಭಾರೀ ಬಂದೋಬಸ್ತ್ !

ವಿಟ್ಲ: ಬಕ್ರೀದ್ ಹಬ್ಬದ ಪ್ರಯುಕ್ತ ಕೊಡಂಗೆ ಚೆಕ್ ಪೋಸ್ಟ್‌ನಲ್ಲಿ ದಿನದ 24 ಗಂಟೆಯು ಸಿಬ್ಬಂದಿಗಳು ಇರಲಿದ್ದು, ವಾಹನ ತಪಾಸಣೆ ನಡೆಯಲಿದೆ ಎಂದು ಜಿಲ್ಲಾ ಎಸ್ಪಿ ಸೋನಾವಣೆ ಋಷಿಕೇಶ್ ಭಗವಾನ್ ರವರು ಹೇಳಿದರು.

ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮರ, ಮರಳು, ದನ ಸಹಿತ ಅಕ್ರಮ ಸಾಗಾಟ ಇದೆಲ್ಲವನ್ನು ನಿಲ್ಲಿಸುವ ನಿಟ್ಟಿನಲ್ಲಿ ಈ ಚೆಕ್ ಪೋಸ್ಟ್ ಮತ್ತಷ್ಟು ಸಹಕಾರಿಯಾಗಲಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕೇರಳವನ್ನು ಸಂಪರ್ಕಿಸುವ ಪ್ರಧಾನ ರಸ್ತೆಗಳಲ್ಲೊಂದಾದ ಸಾಲೆತ್ತೂರು ಸಮೀಪದ ಕೊಡಂಗೆ ಚೆಕ್ ಪೋಸ್ಟ್ ಮೂಲಕ ಕರ್ನಾಟಕದಲ್ಲಿ ದುಷ್ಕೃತ್ಯ ನಡೆಸಿ ಕೇರಳಕ್ಕೆ ಪಲಾಯನ ನಡೆಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಚೆಕ್ ಪೋಸ್ಟ್ ಅನ್ನು ಇನ್ನಷ್ಟು ಛಲಗೊಳಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಲಾಗಿದೆ.

ವಿಟ್ಲ ಠಾಣಾ ವ್ಯಾಪ್ತಿ ದೊಡ್ಡದಾಗಿರುವ ಕಾರಣ, ಇದೀಗಾಗಲೇ ಸಿಬ್ಬಂದಿ ಮರ, ಮರಳು, ದನ ಸಹಿತ ಅಕ್ರಮ ಸಾಗಾಟ ಹಾಗೂ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಈ ಚೆಕ್ ಪೋಸ್ಟ್ ಮತ್ತಷ್ಟು ಸಹಕಾರಿಯಾಗಲಿದೆ.

error: Content is protected !!
Scroll to Top
%d bloggers like this: